
ಕುಳ್ಳನೆಂದು ಹುಡುಗಿಯರಿಂದ ತಿರಸ್ಕಾರ: ಎತ್ತರ ಹೆಚ್ಚಿಸಿಕೊಳ್ಳಲು 66ಲಕ್ಷ ರೂ. ವ್ಯಯಿಸಿದ ಯುವಕ
Saturday, June 24, 2023
ನವದೆಹಲಿ: ಕುಳ್ಳನೆಂದು ಜೀವನದಲ್ಲಿ ನಿರಂತರ ನಿರಾಕರಣೆಗಳನ್ನು ಎದುರಿಸುತ್ತಿರುವ ಜನರು ಸಾಮಾನ್ಯವಾಗಿ ಖಿನ್ನತೆಗೊಳಗಾವುದು ಸಾಮಾನ್ಯ. ಈ ಪರಿಸ್ಥಿತಿ ಅವರ ಜೀವನವನ್ನು ಭಾರೀ ಶೋಚನೀಯವಾಗಿಸುತ್ತದೆ. ಆದರೆ, 27ರ ಹರೆಯದ ಯುವಕನೊಬ್ಬ ಜಗತ್ತೇ ಬೆರಗಾಗುವಂತಹ ಕೆಲಸ ಮಾಡಿದ್ದಾನೆ.
ಜಾರ್ಜಿಯಾದ ನೌಕಾಪಡೆಯಲ್ಲಿರುವ 21 ವರ್ಷದ ಡಿನೈಲ್ ಸೈಗರ್ಸ್‌ಗೆ ಕುಳ್ಳನೆಂಬ ಕಾರಣಕ್ಕೆ ಅನೇಕ ಹುಡುಗಿಯರಿಂದ ತಿರಸ್ಕರಿಸಲ್ಪಟ್ಟನು. ಇದರಿಂದ ಬೇಸತ್ತ ಈತ ತನ್ನ ಎತ್ತರವನ್ನು ಹೆಚ್ಚಿಸುವ ಶಸ್ತ್ರಚಿಕಿತ್ಸೆಗೆ 66 ಲಕ್ಷ ರೂ. ಖರ್ಚು ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾನೆ.
ಮೊದಲು 5.5 ಅಡಿ ಎತ್ತರ ಇದ್ದ ಡಿನೈಲ್ ಸೈಗರ್ಸ್ ಶಸ್ತ್ರಚಿಕಿತ್ಸೆ ಬಳಿಕ ಎತ್ರವನ್ನು 6 ಅಡಿಗೆ ಹೆಚ್ಚಿಸಿದ್ದಾನೆ. ಇದಕ್ಕಾಗಿ ಸುಮಾರು 66 ಲಕ್ಷ ರೂ. ಹಣವನ್ನು ಖರ್ಚು ಮಾಡಿದ್ದಾನೆ. ಆತನ ಎರಡೂ ಕಾಲುಗಳ ಮೂಳೆಯನ್ನು ಅರ್ಧದಷ್ಟು ಕತ್ತರಿಸಿ ರಾಡ್ ಹಾಕಲಾಗಿದೆ. 90 ದಿನಗಳಲ್ಲಿ ಹೊಸ ಮೂಳೆಯು ಬೆಳೆದ ಬಳಿಕ ರಾಡ್ ಅನ್ನು ತೆಗೆಯಲಾಗುತ್ತದೆ. ಒಟ್ಟಾರೆ ಈ ಚಿಕಿತ್ಸೆಯ ಅವಧಿ ಒಂದು ವರ್ಷ. ಆದರೂ ಮೊದಲಿನಂತೆ ಚಟುವಟಿಕೆಯಿಂದ ಇರಲು ಪೂರಕವಾದ ವ್ಯಾಯಾಮ ಮಾಡಬೇಕು.ಇದಕ್ಕೆ ಸಂಬಧಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.