ನಟಿ ರಶ್ಮಿಕ ಮಂದಣ್ಣಗೆ ಭಾರೀ ವಂಚನೆ: 80 ಲಕ್ಷಕ್ಕೂ ಅಧಿಕ ಹಣ ಗುಳುಂ ಮಾಡಿದ ಮ್ಯಾನೇಜರ್
Sunday, June 18, 2023
ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಕಮಾಲ್ ಮಾಡಿದ್ದ ನಟಿ ರಶ್ಮಿಕಾ ಮಂದಣ್ಣ ಮಾತ್ರವಲ್ಲದೇ ಪರಭಾಷೆಗಳಲ್ಲೂ ಅತೀ ಬೇಡಿಕೆ ಹೊಂದಿರುವ ನಟಿಯಾಗಿದ್ದಾರೆ. ಇವರು ತಮ್ಮ ನಟನೆಯ ವಿಚಾರದಿಂದ ಮಾತ್ರವಲ್ಲದೆ ಒಂದಲ್ಲ ಒಂದು ವಿವಾದಗಳಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಇದೀಗ ಈ ಕೊಡಗಿನ ಕುವರಿ ತನ್ನ ಮ್ಯಾನೇಜರ್ ನಿಂದಲೇ ಹಣದ ವಿಚಾರವಾಗಿ ಮೋಸವಾಗಿ ಸುದ್ದಿಯಲ್ಲಿದ್ದಾರೆ.
ರಶ್ಮಿಕಾ ಮಂದಣ್ಣಗೆ ಮ್ಯಾನೇಜರ್ ನಿಂದ 80 ಲಕ್ಷಕ್ಕೂ ಅಧಿಕ ನಗದು ವಂಚನೆಯಾಗಿದೆ. ಆದ್ದರಿಂದ ನಟಿ ರಶ್ಮಿಕಾ ಮಂದಣ್ಣ, ತನ್ನ ಮ್ಯಾನೇಜರ್ ನನ್ನು ಕೆಲಸದಿಂದ ಕಿತ್ತುಹಾಕಿದ್ದಾರೆ. ಮ್ಯಾನೇಜರ್ ಮೋಸ ಮಾಡಿದ ಬಳಿಕ ಆ ಜಾಗಕ್ಕೆ ಮತ್ತೊಬ್ಬರನ್ನು ನೇಮಿಸಲಾಗಿದೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆದರೆ ನಟಿ ರಶ್ಮಿಕಾ ಮಂದಣ್ಣ ಈ ಬಗ್ಗೆ ಸ್ಪಷ್ಟನೆ ನೀಡಲ್ಲ. ಆದರೆ ಈ ಸುದ್ದಿ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಗಾಳಿಸುದ್ದಿಯೊಂದು ಹರಿದಾಡುತ್ತಿದೆ. ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್‌ನಲ್ಲಿ ಸಿನಿಮಾ ಮಾಡಿ ಸ್ಟಾರ್ ನಟಿಯಾಗಿರುವ ರಶ್ಮಿಕಾ ಮಂದಣ್ಣಗೆ ಅಪಾರ ಅಭಿಮಾನಿ ಬಳಗವಿದೆ. ಸಾಲುಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.