ನೀಟ್ ಪರೀಕ್ಷೆ: ಆಳ್ವಾಸ್ ಭರ್ಜರಿ ಸಾಧನೆಗೆ ಡಾ. ಮೋಹನ್ ಆಳ್ವ ಸಂತಸ
ನೀಟ್ ಪರೀಕ್ಷೆ: ಆಳ್ವಾಸ್ ಭರ್ಜರಿ ಸಾಧನೆಗೆ ಡಾ. ಮೋಹನ್ ಆಳ್ವ ಸಂತಸ
2023ರ ಸಾಲಿನ ರಾಷ್ಟ್ರ ಮಟ್ಟದ ನೀಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು ಐತಿಹಾಸಿಕ ಸಾಧನೆ ಮಾಡಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸಂತಸ ವ್ಯಕ್ತಪಡಿಸಿದ್ದಾರೆ.
ಆಳ್ವಾಸ್‌ನಿಂದ ಸುಮಾರು 1,733 ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದಾರೆ. ಈ ಪೈಕಿ, ರಾಷ್ಟ್ರೀಯ ವೈದ್ಯಕೀಯ ಮತ್ತು ದಂತ ವೈದ್ಯಕೀಯ ವಿಭಾಗದಲ್ಲಿ 1,525 ವಿದ್ಯಾರ್ಥಿಗಳು ಪ್ರವೇಶಾತಿ ಅರ್ಹತೆ ಪಡೆರುತ್ತಾರೆ. ಶೇ. 87.99ರಷ್ಟು ಫಲಿತಾಂಶ ದಾಖಲಾಗಿದೆ. ಇದೊಂದು ಮಹತ್ವದ ಸಾಧನೆ ಎಂದು ಆಳ್ವ ಅವರು ನುಡಿದರು.
ನೀಟ್ ಪರೀಕ್ಷೆಯಲ್ಲಿ 720 ಅಂಕ ಗರಿಷ್ಟ. ಇದರಲ್ಲಿ 650ರ ಮೇಲೆ 5 ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ. 32 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಪಡೆದುಕೊಂಡಿದ್ದಾರೆ. 500ಕ್ಕಿಂತ ಅಧಿಕ 206 ವಿದ್ಯಾರ್ಥಿಗಳು ಪಡೆದಿರುತ್ತಾರೆ ಎಂದು ಅವರು ತಿಳಿಸಿದರು.
ಸುಮಾರು 400ಕ್ಕಿಂತ ಅಧಿಕ ಅಂಕ ಪಡೆದಿರುವ 684 ವಿದ್ಯಾರ್ಥಿಗಳು ಸರ್ಕಾರಿ ಜನರಲ್ ಕೋಟಾದ ಅಡಿಯಲ್ಲಿ ಪ್ರವೇಶಾತಿ ಪಡೆಯಲು ಅರ್ಹತೆ ಪಡೆದುಕೊಂಡಿದ್ದಾರೆ ಎಂದು ಡಾ. ಮೋಹನ್ ಆಳ್ವ ನುಡಿದರು.
ರಾಷ್ಟ್ರೀಯ ನೀಟ್ ಅರ್ಹತಾ ಪರೀಕ್ಷೆಯಲ್ಲಿ 500 ಅಂಕಗಳಿಗಿಂತ ಅಧಿಕ ಪಡೆದ 206 ವಿದ್ಯಾರ್ಥಿಗಳಲ್ಲಿ 138 ವಿದ್ಯಾರ್ಥಿಗಳು ಸಂಸ್ಥೆಯ ದತ್ತು ಶಿಕ್ಷಣ ಸ್ವೀಕಾರದಡಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಸುಮಾರು ಎರಡು ಕೋಟಿ ರೂಪಾಯಿಗಳಷ್ಟು ಹಣವನ್ನು ಈ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆಳ್ವಾಸ್ ಭರಿಸಿರುತ್ತದೆ ಎಂದು ಅವರು ಹೇಳಿದರು.
.