ರಾಜ್ಯದ ಗಮನ ಸೆಳೆದ ಆಳ್ವಾಸ್ ಯೋಗ: 2 ಸಾವಿರ ವಿದ್ಯಾರ್ಥಿಗಳಿಂದ ದೈಹಿಕ ಕಸರತ್ತು
ರಾಜ್ಯದ ಗಮನ ಸೆಳೆದ ಆಳ್ವಾಸ್ ಯೋಗ: 2 ಸಾವಿರ ವಿದ್ಯಾರ್ಥಿಗಳಿಂದ ದೈಹಿಕ ಕಸರತ್ತು
ವಿಶ್ವ ಯೋಗ ದಿನದ ಅಂಗವಾಗಿ ಮೂಡಬಿದರಿಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಬೃಹತ್ ಯೋಗ ಕಾರ್ಯಕ್ರಮ ನಡೆಯಿತು.
ಮುಂಡ್ರದೆಗುತ್ತು ಕೆ. ಅಮರನಾಥ ಶೆಟ್ಟಿ ಹಾಗೂ ಮೋಹಿನಿ ಅಪ್ಪಾಜಿ ನಾಯಕ ಸಭಾಂಗಣದಲ್ಲಿ ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಬೃಹತ್ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮೂಡಬಿದಿರೆಯ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಯೋಗ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು.
ವಿದ್ಯಾರ್ಥಿಗಳು ಒಂದು ಗಂಟೆಗೂ ಹೆಚ್ಚು ಕಾಲ ಪ್ರಾಣಾಯಾಮ, ಆಸನ, ಧ್ಯಾನ, ವಿಶ್ರಾಂತಿ ಯೋಗಗಳನ್ನು ಮಾಡಿದರು. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯ ಪ್ರಕಾರ ಯೋಗಾಭ್ಯಾಸಗಳು ನಡೆಯಿತು.
ಈ ಹಿಂದೆ ಯೋಗಥಾನ್ ಮತ್ತು ಜಾಂಬೂರಿ ಸಂದರ್ಭದಲ್ಲೂ ಆಳ್ವಾಸ್ ವಿದ್ಯಾರ್ಥಿಗಳು ಬೃಹತ್ ಯೋಗ ಪ್ರದರ್ಶನ ನಡೆಸಿ ಎಲ್ಲರ ಗಮನ ಸೆಳೆದಿದ್ದರು.