ಹಾಸ್ಟೆಲ್ ಗೆ ಅಕ್ರಮ ಪ್ರವೇಶಿಸಿ ಹೆಣ್ಣುಮಕ್ಕಳೊಂದಿಗೆ ಮಲಗಲೆತ್ನಿಸಿದ ಕಾಮುಕ ಅರೆಸ್ಟ್
Thursday, June 22, 2023
ಕೊಚ್ಚಿ: ಮಹಿಳಾ ಹಾಸ್ಟೆಲ್ ಒಳಗಡೆ ಅಕ್ರಮ ಪ್ರವೇಶಿಸಿ ಹುಡುಗಿಯರೊಂದಿಗೆ ಮಲಗಲೆತ್ನಿಸಿದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ ತೋಡಪುಳದಲ್ಲಿ ನಡೆದಿದೆ.
ಅರಕ್ಕುಲಂ ಗ್ರಾಮದ ನಿವಾಸಿ ಅಖಿಲ್(23) ಬಂಧಿತ ಯುವಕ. ಈತ ಬುಡಕಟ್ಟು ಹೆಣ್ಣುಮಕ್ಕಳ ವಸತಿ ನಿಲಯಕ್ಕೆ ಜೂನ್ 15ರ ಬೆಳಗಿನ ಜಾವ ಅಕ್ರಮವಾಗಿ ಪ್ರವೇಶಿಸಿ ಹೆಣ್ಣುಮಕ್ಕಳೊಂದಿಗೆ ಮಲಗಲು ಯತ್ನಿಸಿದ್ದಾನೆ. ಈ ವೇಳೆ ಆತನನ್ನು ನೋಡಿದ ಹುಡುಗಿಯರು ಗಾಬರಿಗೊಳಗಾಗಿ ಜೋರಾಗಿ ಕಿರುಚಿಕೊಂಡಿದ್ದಾರೆ. ತಕ್ಷಣ ಅಖಿಲ್ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಪ್ರಕರಣ ದಾಖಲಾದ ಬಳಿಕ ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಆರೋಪಿ ಅಖಿಲ್‌ನನ್ನು ಕಂಜಾರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆಯನ್ವಯ ಪ್ರಕರಣ ದಾಖಲಿಸಿದ್ದಾರೆ. ಅಖಿಲ್ ಓರ್ವ ಬಸ್ ಕ್ಲೀನರ್ ಆಗಿದು, ಪೂಮಲಾ-ಮುವಾಟ್ಟುಪುಳ ಮಾರ್ಗವಾಗಿ ಸಂಚರಿಸುವ ಬಸ್‌ನಲ್ಲಿ ಕೆಲಸ ಮಾಡುತ್ತಿದ್ದ. ವರದಿಗಳ ಪ್ರಕಾರ ಈತ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯಾಗಿದ್ದಾನೆ.