ಅಬ್ಬಬ್ಬಾ ಇವನೆಂತಹ ಕಿರಾತಕ ಪತಿ: ಗೆಳೆಯರೊಂದಿಗೆ ಸೇರಿ ಹೀಗೆ ಮಾಡೋದೇ?
Friday, June 30, 2023
ಬೆಂಗಳೂರು: ಸ್ನೇಹಿತರೊಂದಿಗೆ ಸೇರ್ಕೊಂಡು ಕೈಹಿಡಿದ ಪತ್ನಿಗೇ ಲೈಂಗಿಕ ಕಿರುಕುಳ ನೀಡಿರುವ ಪತಿಯ ಮೇಲೆ ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಕಳೆದ ವರ್ಷ ಪ್ರಕರಣ ದಾಖಲಾಗಿತ್ತು. ಪತಿ ಹಾಗೂ ಆತನ ಸ್ನೇಹಿತರು ಮಾದಕದ್ರವ್ಯ ಸೇವಿಸಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆಂಧ್ರಪ್ರದೇಶದ ಕಾಕಿನಾಡ ಮೂಲದ ಮಹಿಳೆಯು ಈ ದೂರು ದಾಖಲಿಸಿದ್ದಳು.
ಮನೆಯಲ್ಲಿಯೇ ಗಾಂಜಾ ಸೇವಿಸಿ ಅತ್ಯಾಚಾರಕ್ಕೆ ಯತ್ನಿಸಿದ ಪತಿ ಹಾಗೂ ಆತನ ಸ್ನೇಹಿತರಿಂದ ತಪ್ಪಿಸಿಕೊಂಡ ಬಂದ ಈಕೆ 2022ರ ಅಕ್ಟೋಬರ್ 13ರಂದು ದೂರು ನೀಡಿದ್ದಳು. ಆಗ ಕೇಸ್ ವಾಪಸ್ ಪಡೆಯಲು ಪೊಲೀಸರು ಒತ್ತಡ ಹೇರಿದ್ದ ವೇಳೆ ಮಹಿಳೆ ಪೊಲೀಸ್ ಸ್ಟೇಷನ್ ಮುಂಭಾಗವೇ ಪ್ರತಿಭಟನೆಗೆ ಮುಂದಾಗಿದ್ದಳು.
ಮ್ಯಾಟ್ರಿಮೋನಿಯಲ್ ನಲ್ಲಿ ನೋಡಿಕೊಂಡು ಪರಸ್ಪರ ಒಪ್ಪಿಗೆ ಪಡೆದು ಕಾಕಿನಾಡ ಮೂಲದ ಅಖಿಲೇಶ್ ಧರ್ಮರಾಜ್‌ನನ್ನು ಮಹಿಳೆ 2019 ರಲ್ಲಿ ವಿವಾಹವಾಗಿದ್ದಳು. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ದಂಪತಿ ವಾಸವಿದ್ದರು. ಮದುವೆಯಾದ ಬಳಿಕ ಪತಿ ಅಖಿಲೇಶ್ ನಿತ್ಯ ಮನೆಗೆ ಗಾಂಜಾ ತಂದು ಸೇವಿಸುತ್ತಿದ್ದ. ಮಾದಕನಶೆಯಲ್ಲಿ ಕಿರುಕುಳವನ್ನು ನೀಡುತ್ತಿದ್ದ. ಕೊನೆಗೆ ಸ್ನೇಹಿತರನ್ನೇ ಮನೆಗೆ ಕರೆತಂದು ಗಾಂಜಾ ಪಾರ್ಟಿ ಮಾಡಿ, ಸ್ನೇಹಿತರೊಂದಿಗೆ ಸೇರಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿದೆ.
ಈ ಘಟನೆಯ ಬಳಿಕ ಪತಿ ವಾಪಸ್ ಮನೆಗೆ ಬರುವಂತೆ ಪತ್ನಿಗೆ ಕಿರುಕುಳ ನೀಡಿದ್ದು, ಈ ವಿಚಾರ ಹೊರಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಆದರೆ ನೊಂದು ಮಹಿಳೆ ದೂರು ಕೊಟ್ಟರೂ ಪೊಲೀಸರು ಬಂಧಿಸಿರಲಿಲ್ಲ. ಆದರೀಗ ಆರೋಪಿಯನ್ನು ಬಂಧಿಸಿ ಪೊಲೀಸರು ಕಂಬಿ ಹಿಂದೆ ಕಳಿಸಿದ್ದಾರೆ.