ಪತ್ನಿಗೆ ಡ್ರಗ್ಸ್ ನೀಡಿ ಪರಪುರಷರೊಂದಿಗೆ ಮಂಚಕ್ಕೆ ಕಳಿಸಿದ ಪತಿ ಅರೆಸ್ಟ್
Thursday, June 22, 2023
ಫ್ರಾನ್ಸ್: ಆಘಾತಕಾರಿ ಘಟನೆಯೊಂದರಲ್ಲಿ ಪತಿಯೊಬ್ಬನು ತನ್ನ ಪತ್ನಿಗೆನೇ ದಿನನಿತ್ಯ ಡ್ರಗ್ಸ್ ನೀಡಿ ಆಕೆಯನ್ನು ಪರಪುರುಷರೊಂದಿಗೆ ಮಂಚಕ್ಕೆ ಕಳುಹಿಸುತ್ತಿದ್ದ ಘಟನೆ ಫ್ರಾನ್ಸ್‌ನಲ್ಲಿ ನಡೆದಿದೆ.
10 ವರ್ಷಗಳಲ್ಲಿ ಆ ಮಹಿಳೆ ಮೇಲೆ 92 ಬಾರಿ ಅತ್ಯಾಚಾರ ನಡೆದಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಪ್ರಕರಣದ ಸಂಬಂಧ ಪೊಲೀಸರು ಈಗಾಗಲೇ 26 ರಿಂದ 73ರ ವಯಸ್ಸಿನ 51ಮಂದಿಯನ್ನು ಬಂಧಿಸಿದ್ದು, 41 ಜನರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮಹಿಳೆಯ ಪತಿ ಡೊಮಿನಿಕ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತ ಪತ್ನಿ ಸೇವಿಸುವ ಆಹಾರದಲ್ಲಿ ಆ್ಯಂಟಿ ಡ್ರಗ್ ಲೊರಾಜೆಪಮ್ ಬೆರಸಿ ನೀಡುತ್ತಿದ್ದ. ಬಳಿಕ ಪರಪುರುಷರನ್ನು ತನ್ನ ಮನೆಗೆ ಕರೆಸಿಕೊಳ್ಳುತ್ತಿದ್ದ. ಬಳಿಕ ಆರೋಪಿ ಕೃತ್ಯವನ್ನು ಸೆರೆಹಿಡಿದು ABUSES ಎಂಬ ಫೈಲ್‌ನಲ್ಲಿ ಸ್ಟೋರ್ ಮಾಡುತ್ತಿದ್ದ. 2011-2020ರ ಅವಧಿಯಲ್ಲಿ ಈ ಘಟನೆ ನಡೆದಿದೆ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಆರೋಪಿ ಡೊಮಿನಿಕ್ ವೆಬ್‌ಸೈಟ್ ಒಂದರಲ್ಲಿ ಡ್ರಗ್ಸ್ ಸೇವಿಸಿದವರೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸುವ ಬಗ್ಗೆ ಚರ್ಚೆಯಲ್ಲಿ ಭಾಗಿಯಾಗಿದ್ದ. ಅದಾದ ಬಳಿಕ ಆರೋಪಿ ಇದರಿಂದ ಉತ್ತೇಜನಗೊಂಡು ತನ್ನ ಪತ್ನಿಯ ಮೇಲೆ ಡ್ರಗ್ಸ್ ಪ್ರಯೋಗಿಸಿ ಆಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ಆರೋಪಿ ಪತ್ನಿ ತನ್ನ ಕೋಣೆಯಲ್ಲಿ ಕ್ಯಾಮರಾ ಇರುವುದನ್ನು ನೋಡಿ ಅದನ್ನು ಓಪನ್ ಮಾಡಿ ವೀಕ್ಷಿಸಿದಾಗ ಕೃತ್ಯ ಬಳಕಿಗೆ ಬಂದಿದೆ. ಈ ಬಗ್ಗೆ ತನ್ನ ಪತ್ನಿ ಆತನನ್ನು ವಿಚಾರಿಸಿದ್ದು, ತಪ್ಪೊಪ್ಪಿಕೊಂಡಿದ್ದಾನೆ. ಸಂತ್ರಸ್ತ ಮಹಿಳೆಯೂ ತನ್ನ ಪತಿ ಹಾಗೂ ಅತ್ಯಾಚಾರ ಎಸಗಿದ 92 ಪುರುಷರ ವಿರುದ್ಧ ದೂರು ದಾಖಲಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.