ಮಂಗಳೂರು: ಬ್ರೇಕ್ ಬದಲು ಕ್ಲಚ್ ಅದುಮಿದ ಚಾಲಕ - ಕಾಲೇಜು ಕಂಪೌಂಡ್ ಒಡೆದು ನುಗ್ಗಿದ ಕಾರು
Wednesday, June 14, 2023
ಮಂಗಳೂರು: ಚಾಲಕನೊಬ್ಬ ಬ್ರೇಕ್ ಬದಲು ಕ್ಲಚ್ ಅದುಮಿದ ಪರಿಣಾಮ ಕಾರೊಂದು ಕಾಲೇಜು ತಡೆಗೋಡೆಯನ್ನೇ ಒಡೆದು ಕಂಪೌಂಡ್ ನೊಳಗೆ ನುಗ್ಗಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಮಣ್ಣಗುಡ್ಡದ ಗೋಕರ್ಣನಾಥ ಕಾಲೇಜು ಕಂಪೌಂಡ್ ಅನ್ನೇ ಒಡೆದು ಈ ಕಾರು ನುಗ್ಗಿದೆ. ದಂಪತಿ ಕಾರಿನಲ್ಲಿದ್ದು, ಚಾಲಕ ಪತಿ ಬ್ರೇಕ್ ಬದಲು ಕ್ಲಚ್ ಅದುಮಿದ್ದಾರೆ. ಪರಿಣಾಮ ಕಾರು ವೇಗವಾಗಿ ರಸ್ತೆ ಬಿಟ್ಟು ಸಂಚರಿಸಿ ಕಾಲೇಜು ಕಂಪೌಂಡ್ ಒಡೆದು ನುಗ್ಗಿದೆ. ಈ ವೇಳೆ ಕಾರು ಕಂಪೌಂಡ್ ನೊಳಗೆ ಸಿಲುಕಿದೆ. ಕಾರಿನಲ್ಲಿದ್ದವರು ಕಂಗಾಲಾಗಿದ್ದು, ಕ್ರೇನ್ ಮೂಲಕವೇ ಕಾರನ್ನು ಅಲ್ಲಿಂದ ತೆರವುಗೊಳಿಸಬೇಕಿದೆ.