ಹಿಂದೂ ಯುವತಿಯನ್ನು ಅಪಹರಿಸಿ ಮದುವೆಯಾದ ಐವರು ಪತ್ನಿಯರ ಇಸ್ಲಾಂ ಪತಿ: ಈತನ ಮೇಲಿದೆ ಮತಾಂತರ ಆರೋಪ
Tuesday, June 20, 2023
ಉತ್ತರಪ್ರದೇಶ: ಐವರು ಪತ್ನಿಯರುಳ್ಳ ಪತಿಯೋರ್ವನು ಇದೀಗ 19 ವರ್ಷದ ಹಿಂದು ಯುವತಿಯನ್ನು ಅಪಹರಿಸಿ ವಿವಾಹವಾಗಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ಶಾಮಿ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಹಿಂದೂಪರ ಸಂಘಟನೆಗಳು ಹಾಗೂ ಬಜರಂಗದಳ ಕಾರ್ಯಕರ್ತರು ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿ, ಆರೋಪಿ ರಶೀದ್ ವಿರುದ್ಧ ಕಠಿಣ ಕ್ರಮಕ್ಕೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಆರೋಪಿ ರಶೀದ್ ಹಿಂದೂ ಯುವತಿಯನ್ನು ಅಪಹರಿಸಿ, ಇಸ್ಲಾಂಧರ್ಮಕ್ಕೆ ಮತಾಂತರ ಮಾಡಿ ವಿವಾಹವಾಗಿದ್ದಾನೆಂದು ಹಿಂದೂ ಸಂಘಟನೆಗಳು ಆರೋಪಿಸಿದೆ. ಈ ಬಗ್ಗೆ ಪೊಲೀಸ್ ದೂರು ದಾಖಲಾಗುತ್ತಿದ್ದಂತೆ ಆರೋಪಿ, ಸಂತ್ರಸ್ತ ಯುವತಿಯ ಮನೆಗೆ ಕರೆ ಮಾಡಿ, ಎಫ್‌ಐಆರ್ ಹಿಂತೆಗೆದುಕೊಳ್ಳದಿದ್ದರೆ ನಿಮ್ಮ ಇನ್ನೊಬ್ಬ ಪುತ್ರಿಯನ್ನೂ ಅಪಹರಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ.
ಹಿಂದೂ ಯುವತಿ ಇನ್ನೂ ಕೂಡ ಆರೋಪಿಯ ವಶದಲ್ಲೇ ಇದ್ದಾಳೆ. ಜೂನ್ 22ರೊಳಗಾಗಿ ಯುವತಿಯನ್ನು ಪೊಲೀಸರು ಪತ್ತೆ ಮಾಡಿ, ರಕ್ಷಿಸದೇ ಹೋದಲ್ಲಿ ಇಡೀ ಗ್ರಾಮದಲ್ಲಿ ಪ್ರತಿಭಟನೆ ನಡೆಸುವುದಾಗಿ ಹಿಂದೂ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
ಶಾಮಿ ಜಿಲ್ಲೆಯ ಆದಂಪುರ ಗ್ರಾಮದ ನಿವಾಸಿ 19 ವರ್ಷದ ಯುವತಿ ಸನ್‌ಲಿ ನಾಗ್ಲಾ ಗ್ರಾಮದಲ್ಲಿರುವ ತನ್ನ ಸಂಬಂಧಿಕರ ಮನೆಗೆ ಬಂದಿದ್ದಳು. ಈ ವೇಳೆ ಮುಸ್ಲಿಂ ವ್ಯಕ್ತಿ ರಶೀದ್ ಆಮಿಷವೊಡ್ಡಿ ಅಪಹರಿಸಿದ್ದಾನೆ. ಬಳಿಕ ಸಂಬಂಧಿಕರು ನಾಪತ್ತೆಯಾದ ಬಗ್ಗೆ ಛಪ್ರೌಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು ಎಂದು ವರದಿಯಾಗಿದೆ. ಆರೋಪಿ ರಶೀದ್ ಈವರೆಗೆ ಐದು ಮದೆಯಾಗಿದ್ದಾನೆ. ಈ ಐವರಲ್ಲಿ ಒಬ್ಬಾಕೆ ಮಾತ್ರ ಮುಸ್ಲಿಂ ಧರ್ಮಕ್ಕೆ ಸೇರಿದ್ದು, ಉಳಿದ ನಾಲ್ವರು ಹಿಂದೂ ಧರ್ಮಕ್ಕೆ ಸೇರಿದ್ದಾರೆ. ಈತ ಉದ್ದೇಶಪೂರ್ವಕವಾಗಿ ಹಿಂದು ಮಹಿಳೆಯರನ್ನು ಮತಾಂತರ ಮಾಡಿ ವಿವಾಹವಾಗುತ್ತಾನೆ ಎಂದು ಪ್ರತಿಭಟನೆ ವೇಳೆ ಹಿಂದು ಸಂಘಟನೆ ಕಾರ್ಯಕರ್ತರು ಆರೋಪಿಸಿರುವುದು ವರದಿಯಾಗಿದೆ.