ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆಗೈದ ಪಾಪಿ ತಂದೆ
Friday, June 2, 2023
ದಾವಣಗೆರೆ: ಪಾಪಿ ತಂದೆಯೊಬ್ಬ ನಾಲ್ಕು ವರ್ಷದ ತನ್ನ ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಹತ್ಯೆಗೈದಿರುವ ಅಮಾನವೀಯ ಘಟನೆಯೊಂದು ದಾವಣಗೆರೆಯಲ್ಲಿ ನಡೆದಿದೆ.
ನಾಲ್ಕು ವರ್ಷದ ಅದೈತ್ ಮತ್ತು ಅನ್ವಿತ್ ಮೃತಪಟ್ಟ ದುರ್ದೈವಿ ಮಕ್ಕಳು. ವರ್ಷದ ಅಮರ ಕಿತ್ತೂರು ಹತ್ಯೆ ಮಾಡಿದ್ದಾನೆ. ಮೂಲತಃ ಗೋಕಾಕ ನಿವಾಸಿ, ಸದ್ಯ ದಾವಣಗೆರೆ ನಗರದ ಆಂಜನೇಯ ಮಿಲ್ ಬಡಾವಣೆಯಲ್ಲಿ ವಾಸವಿರುವ ಅಮರ ಕಿತ್ತೂರು(35) ತನ್ನ ಮಕ್ಕಳನ್ನೇ ಕೊಲೆಗೈದ ಪಾಪಿ ತಂದೆ.
ಅಮರ ಕಿತ್ತೂರು ಹರಿಹರದ ಕಾರ್ಗಿಲ್ ಫ್ಯಾಕ್ಟರಿಯಲ್ಲಿ ಕೆಮಿಕಲ್ ಇಂಜಿಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಈತನ ಪತ್ನಿ ಜಯಲಕ್ಷ್ಮಿ ಕೆಲ ತಿಂಗಳ ಹಿಂದೆ ಜಗಳ ಮಾಡಿಕೊಂಡು ತವರು ಮನೆಗೆ ಹೋಗಿದ್ದಳು. ಈ ವೇಳೆ ಜಗಳ ನಡೆದಾಗ ಮಕ್ಕಳನ್ನ ಕೊಲ್ಲುವುದಾಗಿ ಪತ್ನಿಗೆ ಹೇಳಿ ಬೆದರಿಸಿದ್ದ. ಆದರೆ ಪತ್ನಿ ಮಾತ್ರ ಮರಳಿ ಬಂದಿರಲಿಲ್ಲ. ಹಠ ಮಾಡುತ್ತವೆ ಎಂದು ಮಕ್ಕಳನ್ನು ತನ್ನ ಕಾರಿನಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಚಳಗೆರೆ ಟೋಲ್ ಗೇಟ್ ಗೆ ಕಾರಿನಲ್ಲಿ ಕರೆದೊಯ್ದ ಆತ ಅಲ್ಲಿ ಇಬ್ಬರ ಬಾಯಿಗೂ ಟೇಪ್ ಅಂಟಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಗುರುವಾರ ಬೆಳಗ್ಗೆ ಪತ್ನಿ ಆತನ ಮೊಬೈಲ್ ಗೆ ಕರೆ ಮಾಡಿದ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. ಮಾಹಿತಿ ಪಡೆದ ಪೊಲೀಸರು ಆತನ ಪತ್ತೆಗೆ ಕಾರ್ಯಾಚರಣೆ ಆರಂಭಿಸಿ ಸಂಪರ್ಕಿಸಿದ ವೇಳೆ ಆತನು ಮಕ್ಕಳ ಮೃತದೇಹಗಳೊಂದಿಗೆ ದಾವಣಗೆರೆಗೆ ಬಂದಿದ್ದಾನೆ. ಮೊಬೈಲ್ ಲೊಕೇಶನ್ ಆಧಾರದ ಮೇಲೆ ಪತ್ತೆ ಮಾಡಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.