ಡೇಟಿಂಗ್ ಆ್ಯಪ್ ನಲ್ಲಿ ಪರಿಚಿತನಾದ ಯುವಕನಿಗೆ ದೇಹ ಅರ್ಪಿಸಿದವಳಿಗೆ ಸಾಲು ಸಾಲು ಆಘಾತ: ಹಿಂದೂವೆಂದು ನಂಬಿಸಿದಾತನ ಜೈಲಿಗಟ್ಟಿದ ಪೊಲೀಸರು
Saturday, June 10, 2023
ಬೆಂಗಳೂರು: ಡೇಟಿಂಗ್ ಆ್ಯಪ್ ನಲ್ಲಿ ಪರಿಚಿತಗಿದ್ದ ಯುವಕನೋರ್ವನನ್ನು ನಂಬಿದ ಯುವತಿಯೋರ್ವಳು ತನ್ನದೆನ್ನುವ ಎಲ್ಲವನ್ನೂ ಅರ್ಪಿಸಿ ಇದೀಗ ಆತ ಮಾಡಿರುವ ಮೋಸದಿಂದ ಕಂಗಾಲಾಗಿ ಕುಳಿತಿದ್ದಾಳೆ. ಸಂತ್ರಸ್ತೆಯು ಕೇವಲ ಹಣ ಮಾತ್ರವಲ್ಲ ತನ್ನ ದೇಹವನ್ನೇ ಆತನಿಗರ್ಪಿಸಿ ಮೋಸ ಹೋಗಿದ್ದೇನೆಂದು ಯುವತಿ ಇದೀಗ ಠಾಣೆಯ ಮೆಟ್ಟಿಲೇರಿದ್ದಾಳೆ.
ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಬಂಬಲ್ ಎಂಬ ಡೇಟಿಂಗ್ ಆ್ಯಪ್‌ನಲ್ಲಿ ಸಂತ್ರಸ್ತ ಯುವತಿ, ಸಂಗಾತಿಯನಯ ಹುಡುಕುತ್ತಿದ್ದಳು. ಈ ವೇಳೆ ಅನಿರುದ್ಧ್ ಎಂಬಾತನ ಪ್ರೊಫೈಲ್‌ನಿಂದ ಮೆಸೇಜ್ ಬಂದಿದೆ. ಬಳಿಕ ಇಬ್ಬರೂ ಚಾಟಿಂಗ್ ಆರಂಭಿಸಿದ್ದಾರೆ. ಮೆಸೇಜ್ ಮೂಲಕವೇ ಯುವತಿಯನ್ನು ಅನಿರುದ್ಧ ಪುಸಲಾಯಿಸಿದ್ದನು. ಪರಿಣಾಮ ತಾನು ಆತನನ್ನೇ ಮದುವೆಯಾಗುವುದಾಗಿ ಯುವತಿ ನಿಶ್ಚಯ ಮಾಡಿಕೊಂಡಿದ್ದಳು. ಆದರೆ, ಮುಖಾಮುಖಿ ಭೇಟಿಯಾದ ವೇಳೆ ಯುವತಿಗೆ ಭಾರೀ ಶಾಕ್ ಕಾದಿತ್ತು.
ಯಾವುದು ಆ ಶಾಕ್ ಅಂದರೆ, ಆ್ಯಪ್‌ನಲ್ಲಿ ಮೆಸೇಜ್ ಮಾಡುತ್ತಿದ್ದ ಅನಿರುದ್ಧ ಹಿಂದುವಲ್ಲ, ಬದಲಾಗಿ ಆತ ಮುಸ್ಲಿಂ ಎಂದು ತಿಳಿದು ಬಂದಿದೆ. ಆತನ ನಿಜ ಹೆಸರು ಮುದಾಸಿರ್ ಎಂಬುದು ತಿಳಿದು ಬಂದಿದೆ. ಆತನ ಮುಖವಾಡ ಕಳಚಿಬಿದ್ದ ಬಳಿಕ ಶಾಕ್‌ನಲ್ಲಿದ್ದ ಸಂತ್ರಸ್ತೆಗೆ ಸಂತೈಸಿದ ಆತ 'ತನ್ನನ್ನ ಪ್ರೀತಿಸುವುದಿಲ್ಲವೆಂದು ಸುಳ್ಳು ಹೇಳಿದೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ ಎಂದು ಹೇಳಿ ಮನವೊಲಿಸಿದ್ದಾನೆ. ಆ ಬಳಿಕ ಸಂತ್ರಸ್ತೆ ಆತನ ಪ್ರೀತಿಯನ್ನು ಒಪ್ಪಿಕೊಂಡಿದ್ದಾಳೆ.
ಇದನ್ನೇ ಬಂಡವಾಳ ಮಾಡಿಕೊಂಡು ಮುದಾಸಿರ್ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಬಳಿಕ ತನ್ನ ತಾಯಿಗೆ ಹುಷಾರಿಲ್ಲವೆಂದು ಹೇಳಿ ಯುವತಿ ಬಳಿ 1 ಲಕ್ಷ ರೂ. ಹಣ ಪೀಕಿಸಿದ್ದಾನೆ. ಈ ಮಧ್ಯೆ ನಾನು ನನ್ನ ತಮ್ಮನನ್ನು ನೋಡಲು ದುಬೈಗೆ ಹೋಗಿ ಬರುತ್ತೇನೆಂದು ಕಥೆ ಕಟ್ಟಿದ್ದಾನೆ. ಇದಾದ ಮೂರ್ನಾಲ್ಕು ದಿನಗಳ ಬಳಿಕ ಆತನ ಫೋನ್ ಸ್ವಿಚ್ ಆಫ್ ಆಗಿದೆ. ಇದರಿಂದ ಮತ್ತೆ ಆಘಾತಕ್ಕೆ ಒಳಗಾದ ಸಂತ್ರಸ್ತೆ ಮುದಾಸಿರ್ ಸಹೋದರನನ್ನು ಸಂಪರ್ಕಿಸಿದ್ದಾಳೆ. ಮುದಾಸಿರ್‌ನ ತಾಯಿ ತೀರಿ ಹೋಗಿಲ್ಲ ಕಾಶ್ಮೀರದಲ್ಲಿ ವಾಸವಾಗಿದ್ದಾರೆ ಮತ್ತು ಮುದಾಸಿರ್ ಬೆಂಗಳೂರಿನಲ್ಲೇ ವಾಸವಾಗಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.
ಮಾಹಿತಿ ಪಡೆದ ಯುವತಿ ಮನೆಯ ಬಳಿ ಹೋದಾಗ ಮತ್ತೊಂದು ಆಘಾತ ಕಾದಿತ್ತು. ಅದೇನೆಂದರೆ ಮುದಾಸಿರ್‌ಗೆ ಈಗಾಗಲೇ ಮದುವೆಯಾಗಿದ್ದು, ಬೆಂಗಳೂರಿನಲ್ಲೇ ಪತ್ನಿಯೊಂದಿಗೆ ವಾಸವಿದ್ದಾನೆ. ತಾನು ಮೋಸ ಹೋಗಿರುವುದು ಗೊತ್ತಾದ ಬಳಿಕ ನೊಂದ ಯುವತಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಳು. ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.