ಬಸ್ ನಲ್ಲಿ ಮಹಿಳೆಯ ಮುಂಭಾಗವೇ ಹಸ್ತಮೈಥುನ ಮಾಡಿದ ಕಾಮುಕ ಅರೆಸ್ಟ್
ಪಯ್ಯನೂರು: ಬಸ್ಸಿನಲ್ಲಿ ಮಹಿಳೆಯೊಬ್ಬರ ಮುಂಭಾಗದಲ್ಲಿಯೇ ಹಸ್ತಮೈಥುನ ಮಾಡಿ ವಿಕೃತಿ ಮೆರೆದಿದ್ದ 44 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ನಲ್ಲೊಂಪುಳ ಮೂಲದ ಬಿನು ಎನ್ ಕೆ ಬಂಧಿತ ಆರೋಪಿ.
ಭಾನುವಾರ ಪಯ್ಯನೂರು ಬಳಿಯ ಚೆರುಪುಳ ಎಂಬಲ್ಲಿ ಮಹಿಳೆಯೊಬ್ಬರು ಖಾಸಗಿ ಬಸ್ ಹತ್ತಿದ್ದಾರೆ. ಆದರೆ ಯಾರೂ ಇಲ್ಲದ ವೇಳೆ ಪತ್ರಿಕೆ ಓದುತ್ತ ಕುಳಿತಿದ್ದ ಆತ ತನ್ನ ಗುಪ್ತಾಂಗವನ್ನು ಹೊರಹಾಕಿ ಬಹಿರಂಗವಾಗಿ ಹಸ್ತಮೈಥುನ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಮಹಿಳೆ ಸಂಪೂರ್ಣ ದೃಶ್ಯವನ್ನು ವೀಡಿಯೋ ಮಾಡಿ, ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ಸುಮಾರು ಎರಡು ವಾರಗಳ ಹಿಂದೆ, ಎರ್ನಾಕುಲಂ ಜಿಲ್ಲೆಗೆ ತೆರಳುವ ಬಸ್‌ನಲ್ಲಿ ಈತ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಅಲ್ಲದೆ ಅವನ ಗುಪ್ತಾಂಗವನ್ನು ಬಹಿರಂಗಪಡಿಸಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆ ಸ್ಥಳದಲ್ಲೇ ಆತನ ವರ್ತನೆಯನ್ನು ಸಾರ್ವಜನಿಕವಾಗಿ ಪ್ರಶ್ನಿಸಿ ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಳು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ನಾವು ಆರೋಪಿಯನ್ನು ಹಿಡಿಯಲು ಹುಡುಕಾಟ ನಡೆಸುತ್ತಿದ್ದೆವು. ವೀಡಿಯೋದಲ್ಲಿ ಮಾಸ್ಕ್ ಧರಿಸಿದ್ದರಿಂದ ಆತನನ್ನು ಗುರುತಿಸಲು ಸ್ವಲ್ಪ ಸಮಯ ಹಿಡಿಯಿತು. ಕಡೆಗೂ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.