-->
ಸೂರ್ಯನ ಸಂಚಾರದಿಂದ ಸರ್ಕಾರಿ ನೌಕರಿಗೆ ಪ್ರಯತ್ನಿಸುತ್ತಿರುವ ಈ ರಾಶಿಯವರಿಗೆ ಶುಭ!

ಸೂರ್ಯನ ಸಂಚಾರದಿಂದ ಸರ್ಕಾರಿ ನೌಕರಿಗೆ ಪ್ರಯತ್ನಿಸುತ್ತಿರುವ ಈ ರಾಶಿಯವರಿಗೆ ಶುಭ!

ಮೇಷ ರಾಶಿ: ಮೇಷ ರಾಶಿಯವರಿಗೆ ಭಾರೀ ಪ್ರಯೋಜನವನ್ನು ನೀಡಲಿದೆ. ಈ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಯತ್ನಿಸುತ್ತಿರುವವರಿಗೆ ವಿಜಯಲಕ್ಷ್ಮಿ ಒಲಿಯಲಿದ್ದಾಳೆ. 

ವೃಷಭ ರಾಶಿ: 
ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ವೃಷಭ ರಾಶಿಯ ಯುವಕರಿಗೆ ಉತ್ತಮ ಸಮಯ ಇದಾಗಿದ್ದು, ನಿಮ್ಮ ನೆಚ್ಚಿನ ಉದ್ಯೋಗವನ್ನು ಪಡೆಯುವ ಸಾಧ್ಯತೆ ಇದೆ. 

ಮಿಥುನ ರಾಶಿ: 
ನಿಮ್ಮ ಮಾತೇ ನಿಮ್ಮ ಬಂಡವಾಳವಾಗಿದ್ದು ಈ ಸಮಯದಲ್ಲಿ ನಿಮ್ಮ ವಾಕ್ ಚಾತುರ್ಯದಿಂದ ಆರ್ಥಿಕ ಲಾಭವಾಗಲಿದೆ. ರಾಜಕೀಯ ರಂಗದಲ್ಲಿರುವವರಿಗೂ ಹೊಸ ಹೊಸ ಅವಕಾಶಗಳು ಲಭ್ಯವಾಗಲಿವೆ. 

ಕರ್ಕಾಟಕ ರಾಶಿ: 
ಸೂರ್ಯ ಸಂಚಾರದ ಪರಿಣಾಮವಾಗಿ ದೀರ್ಘ ಸಮಯದಿಂದ ನೆನೆಗುದಿಗೆ ಬಿದ್ದಿದ್ದ ನಿಮ್ಮ ಕೆಲಸಗಳಿಗೆ ವೇಗ ದೊರೆಯಲಿದೆ. ಮಕ್ಕಳ ಕಡೆಯಿಂದ ಶುಭ ಸುದ್ದಿಗಳು ಕೇಳಿಬರಲಿದ್ದು ಮನಸ್ಸಿಗೆ ಸಂತೋಷವಾಗಲಿದೆ. 

ಸಿಂಹ ರಾಶಿ: 
ಸಿಂಹ ರಾಶಿಯವರು ಈ ಅವಧಿಯಲ್ಲಿ ಶುಭ ಫಲಿತಾಂಶಗಳನ್ನು ಕಾಣುತ್ತಾರೆ. ಸಮಾಜದ ಪ್ರಭಾವಿ ವ್ಯಕ್ತಿಗಳ ಪರಿಚಯವಾಗುತ್ತದೆ. ಉದ್ಯೋಗ ಸಂಬಂಧಿತ ಸಮಸ್ಯೆಗಳು ಕೊನೆಗೊಳ್ಳುತ್ತವೆ. 

ಕನ್ಯಾ ರಾಶಿ: 
ಗ್ರಹಗಳ ರಾಜ ಸೂರ್ಯನ ಸಂಕ್ರಮಣ ಈ ರಾಶಿಯವರಿಗೆ ಉದ್ಯೋಗ-ವ್ಯವಹಾರದಲ್ಲಿ ಭಾರೀ ಯಶಸ್ಸನ್ನು ನೀಡಲಿದೆ. ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. 

ತುಲಾ ರಾಶಿ: 
ಈ ಸಮಯದಲ್ಲಿ ನೀವು ಹಣಕಾಸಿನ ಪ್ರಯೋಜನವನು ಪಡೆಯುತ್ತೀರಿ. ಆದರೂ, ನಿಮ್ಮ ಖರ್ಚುಗಳು ಕೂಡ ಹೆಚ್ಚಾಗಿಯೇ ಇರಲಿವೆ. ಆರೋಗ್ಯ ಸುಧಾರಿಸಲಿದೆ. ವಿದ್ಯಾರ್ಥಿಗಳ ದೃಷ್ಟಿಯಿಂದಲೂ ಸಮಯ ಉತ್ತಮವಾಗಿದೆ. 

ವೃಶ್ಚಿಕ ರಾಶಿ: 
ಈ ಸಮಯದಲ್ಲಿ ನೀವು ದಿಢೀರ್ ಪ್ರಯಾಣ ಕೈಗೊಳ್ಳಬೇಕಾಗಬಹುದು. ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಅತ್ಯುತ್ತಮ ಸಮಯ ಇದಾಗಿದೆ. ವೃತ್ತಿ ಬದುಕಿನಲ್ಲಿ ಕೆಲವು ಧನಾತ್ಮಕ ತಿರುವು ಕಂಡು ಬರಲಿದೆ. 

ಧನು ರಾಶಿ: 
ಸೂರ್ಯನ ರಾಶಿ ಪರಿವರ್ತನೆಯು ಧನು ರಾಶಿಯವರಿಗೆ ಆರೋಗ್ಯದ ವಿಷಯದಲ್ಲಿ ಕೆಲವು ತೊಂದರೆಗಳನ್ನು ತಂದೊಡ್ಡಲಿದೆ. ಈ ಸಮಯದಲ್ಲಿ ವ್ಯಾಪಾರ-ವ್ಯವಹಾರದಲ್ಲಿಯೂ ನಷ್ಟ ಸಾಧ್ಯತೆ ಇರುವುದರಿಂದ, ಹೊಸ ವ್ಯವಹಾರಗಳಿಗೆ ಕೈ ಹಾಕಬೇಡಿ 

ಮಕರ ರಾಶಿ: 
ಉದ್ಯೋಗಸ್ಥರು ಉನ್ನತ ಸ್ಥಾನವನ್ನು ಪಡೆಯಬಹುದು. ವ್ಯಾಪಾರದಲ್ಲಿಯೂ ಉತ್ತಮ ಪ್ರಗತಿ ಕಂಡುಬರಲಿದೆ. ಎಲ್ಲಿಂದಲಾದರೂ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. 

ಕುಂಭ ರಾಶಿ: 
ಸೂರ್ಯ ರಾಶಿ ಪರಿವರ್ತನೆಯಿಂದ ಕುಂಭ ರಾಶಿಯವರಿಗೆ ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಕೆಲಸದ ಸ್ಥಳದಲ್ಲಿ ನೀವು ಹೊಸ ಜವಾಬ್ದಾರಿಯನ್ನು ಪಡೆಯಬಹುದು. ಬಡ್ತಿ ಸಿಗುವ ಸಾಧ್ಯತೆಗಳಿವೆ. ನೀವು ವ್ಯವಹಾರದಲ್ಲಿ ಪ್ರಗತಿ ಸಾಧಿಸಬಹುದು. 

ಮೀನ ರಾಶಿ: 
ವ್ಯಾಪಾರದಲ್ಲಿ ಪ್ರಗತಿ ಕಂಡು ಬರಲಿದೆ. ಆದರೂ, ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯಿಂದ ಮುಂದುವರೆಯುವುದು ಒಳ್ಳೆಯದು. 

­

Ads on article

Advertise in articles 1

advertising articles 2

Advertise under the article