-->
ನಷ್ಟದಲ್ಲಿ ಇದ್ದ KSRTC ಲಾಭದತ್ತ!- ಬಲ ಕೊಟ್ಟ ಶಕ್ತಿ ಯೋಜನೆ !

ನಷ್ಟದಲ್ಲಿ ಇದ್ದ KSRTC ಲಾಭದತ್ತ!- ಬಲ ಕೊಟ್ಟ ಶಕ್ತಿ ಯೋಜನೆ !

ನಷ್ಟದಲ್ಲಿ ಇದ್ದ KSRTC ಲಾಭದತ್ತ!- ಬಲ ಕೊಟ್ಟ ಶಕ್ತಿ ಯೋಜನೆ





ಮಹಿಳೆಯರ ಉಚಿತ ಪ್ರಯಾಣದ ಸೌಲಭ್ಯ ಶಕ್ತಿ ಯೋಜನೆಯನ್ನು ಬಹುತೇಕರು ಅಪಹಾಸ್ಯ ಮಾಡಿದ್ದರು. ರಾಜ್ಯ ದಿವಾಳಿಯಾಗಬಹುದು, ಶ್ರೀಲಂಕಾದ ಪರಿಸ್ಥಿತಿ ಎದುರಾಗಬಹುದು ಎಂದು ಲೇವಡಿ ಮಾಡಿದ್ದರು.



ಆದರೆ, ಈ ಎಲ್ಲ ಟೀಕೆಗಳು ಅರ್ಥಹೀನ ಎಂದು ಕೆಲವೇ ವಾರಗಳಲ್ಲಿ ಸ್ಪಷ್ಟವಾಗಿ ಪ್ರತಿಫಲಿಸಿದೆ. ರಾಜ್ಯ ಸಾರಿಗೆ ಸಂಸ್ಥೆಯ ಎಲ್ಲ ನಾಲ್ಕು ನಿಗಮಗಳು ನಷ್ಟದಿಂದ ಮೈಕೊಡವಿ ಲಾಭದತ್ತ ದಾಪುಗಾಲು ಹಾಕುತ್ತಿದೆ.



ಪ್ರಯಾಣಿಕರ ಸಂಖ್ಯೆಯಲ್ಲಿ ನಿತ್ಯ ಸರಾಸರಿ 25 ಲಕ್ಷ ಹೆಚ್ಚಳವಾಗಿದ್ದು, ನಷ್ಟದ ಭಾರ ಇಳಿಸಿಕೊಂಡ KSRTC ಈಗ ಲಾಭದತ್ತ ಹೆಜ್ಜೆ ಹಾಕುತ್ತಿದೆ.



ಉಚಿತ ಪ್ರಯಾಣದ ಕಾರಣದಿಂದ ಮಹಿಳೆಯರು ಖಾಸಗಿ ಬಸ್ ಬಿಟ್ಟು ಸಾರಿಗೆ ಸಂಸ್ಥೆ ಬಸ್‌ನತ್ತ ಮುಖ ಮಾಡಿದ್ದಾರೆ. ಅದರ ಜೊತೆಗೆ ಅವರ ಕುಟುಂಬದ ಪುರುಷ ಸದಸ್ಯರೂ ಕೂಡ ಅದೇ ಬಸ್‌ ಹತ್ತುತ್ತಿದ್ದು, ಸಾರಿಗೆ ಸಂಸ್ಥೆಗೆ ಹಿತವಾದ ಆದಾಯ ಕಲ್ಪಿಸುತ್ತಿದೆ. ಇದರಿಂದ ಬಸ್ ಪ್ರಯಾಣದ ಆದಾಯದಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ.



KSRTC ಒಂದರಲ್ಲೇ 1.56 ಕೋಟಿ ರೂ.ಗಳಷ್ಟು ಆದಾಯ ಹೆಚ್ಚಳವಾಗಿದೆ. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವರಮಾನದಲ್ಲೂ ನಿತ್ಯ ಸರಾಸರಿ ರೂ. 90 ಲಕ್ಷದಷ್ಟು ಹೆಚ್ಚಳವಾಗಿದೆ.

ಶಕ್ತಿ ಯೋಜನೆ ಜಾರಿಗೊಂಡ ಮೇಲೆ KSRTC ಬಸ್‌ಗಳ ಓಡಾಟವನ್ನು ಹೆಚ್ಚಿಸಲಾಗಿದೆ. 22 ಸಾವಿರ ಟ್ರಿಪ್ ಇದ್ದದ್ದು 23 ಸಾವಿರಕ್ಕೆ ಏರಿಕೆಯಾಗಿದೆ. ಟ್ರಿಪ್ ಹೆಚ್ಚಿದಂತೆ ಚಾಲಕರ ಮತ್ತು ನಿರ್ವಾಹಕರ ಭತ್ಯೆಯಲ್ಲೂ ಹೆಚ್ಚಳವಾಗಿದೆ.



2017-18ರಲ್ಲಿ KSRTC 300 ಕೋಟಿ ರೂ. ನಷ್ಟದಲ್ಲಿ ಇತ್ತು. 2021-22ರಲ್ಲಿ ಈ ನಷ್ಟ 4000 ಕೋಟಿ ರೂ.ಗೆ ಏರಿತ್ತು. ಈ ನಷ್ಟವನ್ನು ಭರಿಸಲು ಸರ್ಕಾ ಸುಮಾರು ರೂ. 3000 ಕೋಟಿ ಅನುದಾನ ಒದಗಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

(ಕೃಪೆ/ಮಾಹಿತಿ: ಪ್ರಜಾವಾಣಿ)

.

Ads on article

Advertise in articles 1

advertising articles 2

Advertise under the article