ಹೊರಡುವುದು ತಡವಾಯ್ತೆಂದು ಮದ್ಯದ ಮತ್ತಿನಲ್ಲಿ ಕೆಎಸ್ಆರ್ ಟಿಸಿ ಬಸ್ ಅನ್ನೇ ಚಲಾಯಿಸಿದ ಭೂಪ
Wednesday, June 7, 2023
ಔರದ್: ಮದ್ಯದ ನಶೆಯಲ್ಲಿ ಕೆಲವರು ಏನೇನನ್ನೋ ಮಾಡುತ್ತಿರುತ್ತಾರೆ. ಸ್ಥಿಮಿತದಲ್ಲಿರದ ಇವರು ಕೆಲವೊಮ್ಮೆ ತಮ್ಮನ್ನು ಅಪಾಯಕ್ಕೆ ಸಿಲುಕಿಸುವುದರೊಂದಿಗೆ ಇತರರನ್ನೂ ತೊಂದರೆಗೆ ಸಿಲುಕಿಸುತ್ತಾರೆ. ಇಂತಹದ್ದೇ ಘಟನೆಯೊಂದು ಔರದ್ ನಲ್ಲಿ ಬೆಳಕಿಗೆ ಬಂದಿದೆ.
ಔರದ್ ಡಿಪೋದಿಂದ ಕೆಎಸ್ಆರ್ ಟಿಸಿ ಬಸ್ ಒಂದು ಗಂಟೆ ಕಳೆದರೂ ಹೊರಡಲಿಲ್ಲ. ಈ ವೇಳೆ ಸುಮಾರು ಹೊತ್ತಿನಿಂದ ಬಸ್ ಇನ್ನೂ ಹೊರಡದ ಕಾರಣ ಮದ್ಯದ ನಶೆಯಲ್ಲಿದ್ದ ಭೂಪನೋರ್ವನು ಕುಡಿದ ಮತ್ತಿನಲ್ಲಿದ್ದ ಡಿಪೋದಲ್ಲಿ ನಿಲ್ಲಿಸಿದ್ದ ಬಸ್ ಅನ್ನೇ ಚಲಾಯಿಸಿದ್ದಾನೆ. ಈ ಘಟನೆ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಬೀದರ್ ಜಿಲ್ಲೆಯ ಕಾರಂಜಿ ನಿವಾಸಿ ಸೂರ್ಯವಂಶಿ ಬಸ್ ಚಲಾಯಿಸಿದ ಆರೋಪಿ. ಈತ ಇನ್ನೇನು ಬಸ್ ಹೊರಡಲಿದೆ ಎಂದು ಕಾದು ಬೇಸತ್ತು ಕೊನೆಗೆ ಕುಡಿದ ನಶೆಯಲ್ಲೇ ಬಸ್ ಚಲಾಯಿಸಿದ್ದಾನೆ. ಈ ಸಂದರ್ಭ ಒಳಗೆ ಕುಳಿತಿದ್ದ ಪ್ರಯಾಣಿಕರು ಭಯಭೀತರಾಗಿದ್ದಾರೆ.
ಈತ ಬಸ್ಸನ್ನು ನಿಲ್ಲಿಸುವ ಮೊದಲು ಮತ್ತೊಂದು ಬಸ್ ಹಾಗೂ ಜೀಪಿಗೆ ಡಿಕ್ಕಿ ಹೊಡೆದಿದ್ದಾನೆ. ಪೊಲೀಸರು ಈತನ್ನು ತಕ್ಷಣ ಬಂಧಿಸಿದ್ದಾರೆ. ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.