ಹಿಂದೂ ಎಂದು ನಂಬಿಸಿ ಪ್ರೇಮದ ನಾಟಕ: ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಮತಾಂತರ ಮಾಡಿ ಕೂಡಿಹಾಕಿ ಚಿತ್ರಹಿಂಸೆ
Saturday, June 3, 2023
ಲಕ್ನೋ: ತನ್ನನ್ನು ಹಿಂದೂಯೆಂದು ನಂಬಿಸಿ ಬಳಿಕ ಸ್ನೇಹ ಬೆಳೆಸಿ, ಯುವತಿಯನ್ನು ಮದುವೆಯಾಗಿದ್ದಲ್ಲದೆ, ಬಳಿಕ ಆಕೆಯನ್ನು ಬ್ಲಾಕ್ಮೇಲ್ ಮಾಡಿ ಮುಸ್ಲಿಂ ಆಗಿ ಮತಾಂತರಗೊಳಿಸಿ ಮನೆಯಲ್ಲಿ ಕೂಡಿಹಾಕಿದ್ದ ಪ್ರಕರಣ ಉತ್ತರ ಪ್ರದೇಶದ ರಾಯ್ ಬರೇಲಿ ಜಿಲ್ಲೆಯಲ್ಲಿ ಘಟನೆ ಬೆಳಕಿಗೆ ಬಂದಿದೆ.
ಅಬೀದ್ ಎಂಬ ಮುಸ್ಲಿಂ ಯುವಕ ತನ್ನನ್ನು ಅಂಕಿತ್ ಪರಿಚಯಿಸಿಕೊಂಡು ಯುವತಿಯನ್ನು ಪ್ರೇಮಿಸುವ ನಾಟಕವಾಡಿದ್ದಾನೆ. ಬಳಿಕ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಅದರ ವಿಡಿಯೋ ಇದೆಯೆಂದು ಬ್ಲಾಕ್ಮೇಲ್ ಮಾಡಿ ಮತಾಂತರಗೊಳಿಸಿದ್ದಾನೆ. ಅಲ್ಲದೆ ತನ್ನನ್ನು ಮದುವೆಯಾಗದಿದ್ದಲ್ಲಿ ಆ ವೀಡಿಯೋವನ್ನು ಜಾಲತಾಣದಲ್ಲಿ ಹರಿಯ ಬಿಡುವುದಾಗಿ ಬ್ಲಾಕ್ಮೇಲ್ ಮಾಡಿದ್ದಾನೆ.
ಮದುವೆಯ ಬಳಿಕ ಮತಾಂತರ ಮಾಡಿದ್ದಲ್ಲದೆ, ಮನೆಯಲ್ಲಿ ಕೂಡಿಹಾಕಿದ್ದಾನೆ. ಮನೆಯಲ್ಲಿ ದನದ ಮಾಂಸ ತಿನ್ನಲು ಒತ್ತಾಯಪಡಿಸಿದ್ದು, ಯುವಕನ ತಂದೆಯೊಂದಿಗೂ ಅಕ್ರಮ ಸಂಬಂಧ ಇರಿಸುವಂತೆ ಒತ್ತಾಯಪಡಿಸಿದ್ದಾನೆ. ಮನೆಯಲ್ಲಿ ದಿನವೂ ಹಲ್ಲೆ ಮಾಡುತ್ತಿದ್ದರು. ಆನಂತರ, ಅವರ ಹಿಡಿತದಿಂದ ಹೊರಬಂದು ಪೊಲೀಸ್ ದೂರು ನೀಡುತ್ತಿರುವುದಾಗಿ 24 ವರ್ಷದ ಯುವತಿಯೊಬ್ಬಳು ದೂರಿನಲ್ಲಿ ಹೇಳಿದ್ದಾಳೆ. ಪೊಲೀಸರು ಉತ್ತರ ಪ್ರದೇಶದ ಮತಾಂತರ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಆಲೀಂ ಎಂಬ ಯುವಕ ತನ್ನ ಹೆಸರನ್ನು ಆನಂದ್ ಎಂದು ಹೇಳಿಕೊಂಡು 20 ವರ್ಷದ ಯುವತಿಯನ್ನು ಪ್ರೇಮಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಆ ಬಳಿಕ ತನ್ನೊಂದಿಗೆ ಖಾಸಗಿಯಾಗಿ ಇದ್ದ ಸಂದರ್ಭದ ವೀಡಿಯೋ ಇದೆಯೆಂದು ಹೇಳಿ ಬ್ಲಾಕ್ಮೇಲ್ ಮಾಡಿದ್ದಾನೆ. ಬಳಿಕ ಯುವತಿಯ ಒತ್ತಾಯದಂತೆ ದೇವಸ್ಥಾನದಲ್ಲಿ ಮದುವೆಯಾಗಿದ್ದು, ಯುವತಿ ಗರ್ಭಿಣಿಯಾದಾಗ ಗರ್ಭಪಾತ ಮಾಡಿಸಿದ್ದಾನೆ. ಯುವತಿ ಸಂಶಯದಿಂದ ದೇವರ್ನಿಯಾ ಠಾಣೆಗೆ ದೂರು ನೀಡಿದಾಗ, ಆತನ ನಿಜ ಬಣ್ಣ ಬಯಲಾಗಿದೆ.