ಮತ್ತೊಂದು ಲವ್ ಜಿಹಾದ್ ಪ್ರಕರಣ ಬಯಲು: ಪ್ರೀತಿಯ ಹೆಸರಲ್ಲಿ ಹಿಂದೂ ಯುವತಿಗೆ ಮೋಸ
Monday, June 12, 2023
ಆನೇಕಲ್: ರಾಜ್ಯದ ರಾಜಧಾನಿಯಲ್ಲಿ ಲವ್ ಜಿಹಾದ್ ಗೆ ಯತ್ನಿಸಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಮುಸ್ಲಿಂ ಯುವಕನೋರ್ವನು ಹಿಂದೂ ಯುವತಿಗೆ ಸುಳ್ಳು ಹೇಳಿ ಪ್ರೀತಿಯ ನಾಟಕವಾಡಿದ್ದಾನೆ. ಅಲ್ಲದೆ ಮದುವೆಯಾಗೋಲ್ಲ ಎಂದಿದ್ದಕ್ಕೆ ಕೊಲೆ ಬೆದರಿಕೆಯನ್ನೂ ಒಡ್ಡಿದ್ದಾನೆ ಎಂದು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾಳೆ.
ಅಸ್ಸಾಂ ಮೂಲದ ಅಲ್ ಮೆಹಪ್ಯೂಸ್ ಬರಪೂಯಾ ಎಂಬಾತ ಲವ್ ಜಿಹಾದ್ ಗೆತ್ನಿಸಿದ ಆರೋಪಿ. ಸಂತ್ರಸ್ತೆ ಮಹಾರಾಷ್ಟ್ರ ಮೂಲದ ಹಿಂದೂ ಯುವತಿ ಇಲೆಕ್ಟ್ರಾನಿಕ್ ಸಿಟಿ ನಿವಾಸಿಯಾಗಿದ್ದಾನೆ. ಈಕೆ ಬ್ಲ್ಯಾಕ್ ಬೆರಿಸ್ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಆರೋಪಿ ರೇಮಂಡ್ ರಿಟೇಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಕೋರಮಂಗಲದಲ್ಲಿ ವಾಸ್ತವ್ಯವಿದ್ದ.
ಈತ ಪ್ರಾರಂಭದಲ್ಲಿ ತನ್ನನ್ನು ಕ್ರಿಶ್ಚಿಯನ್ ಎಂದು ಪರಿಚಯಿಸಿ ತನ್ನ ಹೆಸರನ್ನು ಮೆಲ್ವಿನ್ ಎಂದು ಹೇಳಿಕೊಂಡಿದ್ದ. ಬಳಿಕ ಪರಿಚಯವನ್ನು ಸಲುಗೆಗೆ ತಿರುಗಿಸಿ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ. ಆದರೆ ಒಂದೂವರೆ ವರ್ಷದ ಬಳಿಕ ಆಕಸ್ಮಿಕವಾಗಿ ಆಧಾರ್ ಕಾರ್ಡ್‌ನಿಂದ ಈತ ಮುಸ್ಲಿಂ ಎಂಬ ನಿಜ ತಿಳಿದಿದೆ. ಆದ್ದರಿಂದ ಯುವತಿ ಮದುವೆಯಾಗಲು ನಿರಾಕರಿಸಿದ್ದಾಳೆ. ಯುವತಿಯ ಮನೆಯವರು ಕೂಡ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಆದ್ದರಿಂದ ಇಬ್ಬರ ನಡುವೆ ಬ್ರೇಕಪ್ ಆಗಿದೆ. ಆದರೆ ಈತ ಆಗಾಗ ಯುವತಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ರಾತ್ರಿ ವೇಳೆ ಮನೆಗೆ ಬಂದು ಜಗಳವಾಡಿ ಕೊಲೆ ಬೆದರಿಕೆ ಒಡ್ಡುತ್ತಿದ್ದ. ಯುವತಿ ಮತ್ತು ಕುಟುಂಬದವರನ್ನು ಮುಗಿಸುವುದಾಗಿ ಹೆದರಿಸಿದ್ದ. ಮಾತ್ರವಲ್ಲ, ಯುವತಿ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲೂ ಇಲ್ಲಸಲ್ಲದ್ದನ್ನು ಹೇಳಿ ಕೆಲಸಕ್ಕೂ ತೊಂದರೆ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಯುವತಿ ಕೆಲಸ ಮಾಡುತ್ತಿದ್ದ ಕೋರಮಂಗಲದ ಬ್ಲ್ಯಾಕ್ ಬೆರಿಸ್ ಸ್ಟೋರ್‌ನ ಸಹೋದ್ಯೋಗಿಗಳು ಅಲ್ ಮೆಹಪ್ಯೂಸ್ ಬರಪೂಯಾ ಜೊತೆ ಕೈಜೋಡಿಸಿದ್ದಾರೆ ಅಲ್ಲಿನ ಮಹಮದ್ ಸಕ್ಸೆನ್, ಸೈಯ್ಯದ್, ಮುಜಿಬ್ ಸೈಫ್ ಶೇಖ್, ಅಸ್ಲಂ ತಬ್ರೆಜ್ ಇವರೆಲ್ಲರ ಕುತಂತ್ರದಿಂದ ಕೆಲಸ ಹೋಗಿದೆ. ಕಂಪೆನಿಯ ಜಿಎಂ ಸಾಯಾಕ್ ಅರೋರಾ ಅವ್ಯಾಚ ಶಬ್ದಗಳಿಂದ ನಿಂದನೆ ಮಾಡಿ, ಇಲ್ಲಸಲ್ಲದ ಸುಳ್ಳು ಆರೋಪ ಹೊರಿಸಿ ಕಿರುಕುಳ ನೀಡಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಎಚ್‌ಆರ್ ಅಂಕುಷ್ ಠಾಕೂರ್, ಎಂಐಎಸ್ ಅವಿನಾಶ್ ವರ್ಮ, ಜಿಎಂ ಸಯಾಕ್ ಆರೋರಾ, ಫ್ರಾಂಚೈಸಿ ಹರೀಶ್ ಅವರು ಬ್ಲ್ಯಾಕ ಮೇಲ್ ಮಾಡುತ್ತಿದ್ದಾರೆ. ನಾಲ್ಕು ಲಕ್ಷ ರೂ. ನೀಡಿ ರಾಜಿ ಮಾಡಿಕೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ. ಇಲ್ಲದಿದ್ದರೆ ಕೆಲಸದಿಂದ ತೆಗೆಯುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ. ಹೆದರಿಸಿ ಬೆದರಿಸಿ ರಾಜಿನಾಮೆ ಪತ್ರ ನೀಡುವಂತೆ ಒತ್ತಡ ಹೇರುತ್ತಿರುವುದಲ್ಲದೆ, ಸೀನಿಯರ್ಸ್ ಜೊತೆ ಅಫೇರ್ ಇದೆ ಅಂತ ಕುಟುಂಬದವರಿಗೆ ತಿಳಿಸುತ್ತೇವೆ ಎಂದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂಬುದಾಗಿ ಯುವತಿ ವಂಚಕ ಪ್ರೇಮಿ ಮತ್ತು ಕಂಪನಿ ಆಡಳಿತ ಮಂಡಳಿ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.