ಬೆಂಗಳೂರಿಗೆ ಹೋಗುತ್ತಿದ್ದೇನೆಂದು ಮೆಸೇಜ್ ಕಳುಹಿಸಿ ನಾಪತ್ತೆಯಾದ ಬಂಟ್ವಾಳದ ಯುವತಿ
Tuesday, June 13, 2023
ಬಂಟ್ವಾಳ: ಬೆಂಗಳೂರಿಗೆ ಹೋಗುತ್ತೇನೆಂದು ಮೊಬೈಲ್ ಮೆಸೇಜ್ ರವಾನಿಸಿರುವ ಯುವತಿಯೋರ್ವಳು ನಾಪತ್ತೆಯಾಗಿದ್ದಾಳೆಂದು ಆಕೆಯ ಮನೆಯವರು ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಿ.ಮೂಡ ಕಸ್ಬಾ ಗ್ರಾಮದ ಲೆಕ್ಕಸಿರಿಪಾದೆ ನಿವಾಸಿ ನೇಹಾ (22) ಎಂಬಾಕೆ ನಾಪತ್ತೆಯಾಗಿರುವ ಯುವತಿ.
ನೇಹಾ ಮಂಗಳೂರಿನ ಸೇಫ್ಟಿ ಇನ್ ಸ್ಟ್ರುಮೆಂಟ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಆಕೆಗೆ ಮನೆಯವರು ಮದುವೆ ಮಾಡುವ ಉದ್ದೇಶದಿಂದ ಸಂಬಂಧ ನೋಡಲು ಮುಂದಾಗಿದ್ದರು. ಆದರೆ ಆಕೆ ತನಗೆ ಮದುವೆಯಾಗಲು ಸದ್ಯ ಮನಸ್ಸಿಲ್ಲ. ತಾನು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕಾಗಿದೆ ಹೇಳಿದ್ದಳು. ಅ ಬಳಿಕ ಮೇ.27 ರಂದು ನೇಹಾ ಎಂದಿನಂತೆ ಮಂಗಳೂರಿಗೆ ಕೆಲಸಕ್ಕೆಂದು ಹೋದವಳು ಅದೇ ದಿನ ಸಂಜೆ 4 ಗಂಟೆಗೆ ತನ್ನ ಚಿಕ್ಕಮ್ಮನ ಮೊಬೈಲ್ ಗೆ ಮೆಸೇಜ್ ಮಾಡಿ ನಾನು ಬೆಂಗಳೂರಿಗೆ ಹೋಗುವುದಾಗಿ ಹೇಳಿದ್ದಾಳೆ. ಆ ಬಳಿಕದಿಂದ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ.
ಮೇ 29 ಹಾಗೂ ಜೂನ್ 6ರಂದು ಒಟ್ಟು ಎರಡು ಪತ್ರ ಮನೆಯವರಿಗೆ ಬಂದಿದೆ. ಆ ಪತ್ರದಲ್ಲಿ ತಾನು ಬೆಂಗಳೂರಿನಲ್ಲಿ ಇರುವುದಾಗಿ ತನ್ನನ್ನು ಹುಡುಕಬೇಡಿ ಎಂದು ಬರೆದಿದ್ದಾಳೆ. ಅ ಬಳಿಕದಿಂದ ಯಾವುದೇ ಮೊಬೈಲ್ ಕರೆ ಹಾಗೂ ಯಾವುದೇ ಮೆಸೆಜ್ ಮಾಡಿಲ್ಲ. ಆದ್ದರಿಂದ ನೇಹ ನಾಪತ್ತೆಯಾಗಿರುವ ಸಂಶಯವಿದ್ದು ಆಕೆಯನ್ನು ಹುಡುಕಿಕೊಡುವಂತೆ ಮನೆಯವರು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.