'ಮಲ್ಪೆ' ಗೂಗಲ್ ನಲ್ಲಿ ಸರ್ಚ್ ಮಾಡಿ ನಾಪತ್ತೆಯಾದ ಬೆಂಗಳೂರು ಬಾಲಕ: ಆತಂಕದಲ್ಲಿ ಪೋಷಕರು
Tuesday, June 6, 2023
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಪುಟ್ಟ ಬಾಲಕನೋರ್ವನು ಮೊಬೈಲ್ ಗೂಗಲ್‌ನಲ್ಲಿ 'ಮಲ್ಪೆ' ಎಂದು ಹುಡುಕಾಡಿ ನಾಪತ್ತೆಯಾದ 'ವಿಚಿತ್ರ ಘಟನೆ'ಯೊಂದು ಬೆಳಕಿಗೆ ಬಂದಿದೆ. ಇದೀಗ ಬಾಲಕ ಪೋಷಕರು ಕಂಗಾಲಾಗಿದ್ದು, ಉಡುಪಿ - ದ.ಕ.ಜಿಲ್ಲೆ ಭಾಗದಲ್ಲಿ ಹುಡುಕಾಡುತ್ತಿದ್ದಾರೆ.
9ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಆದಿತ್ಯ ಮಲ್ಪೆ ಎಂದು ಸರ್ಚ್ ಮಾಡಿ ನಾಪತ್ತೆಯಾದ ಬಾಲಕ. ಈತ ಹೇರ್ ಕಟ್ಟಿಂಗ್ ಮಾಡೋದಕ್ಕೆಂದು ಮನೆಯಿಂದ 120 ರೂಪಾಯಿ ಪಡೆದು ತೆರಳಿದ್ದು, ಆ ಬಳಿಕದಿಂದ ನಾಪತ್ತೆಯಾಗಿದ್ದಾನೆ. ಆತ ತನ್ನ ಕೈಯಲ್ಲಿದ್ದ ಮೊಬೈಲ್‌ನಲ್ಲಿ ಮಲ್ಪೆ ಎಂದು ಸರ್ಜ್ ಮಾಡಿರುವುದು ತಿಳಿದು ಬಂದಿದೆ. ಅಲ್ಲದೇ ಮನೆಯಲ್ಲಿದ್ದ ತನ್ನ ಬಟ್ಟೆಯನ್ನು ಬಾಲಕ ಆದಿತ್ಯ ತೆಗೆದುಕೊಂಡು ಹೋಗಿದ್ದಾನೆ. ಈ ವಿಚಾರ ತಿಳಿದು ಪುತ್ರನನ್ನು ಕಳೆದುಕೊಂಡ ಪೋಷಕರು ಆತಂಕಗೊಂಡಿದ್ದಾರೆ.
ಬಾಲಕ ಆದಿತ್ಯ ಮೊಬೈಲ್‌ನಲ್ಲಿ ಮಲ್ಪೆ ಎಂದು ಸರ್ಚ್ ಮಾಡಿದ್ದನ್ನು ಕಂಡು ಕರಾವಳಿಗೆ ತೆರಳಿರಬಹುದು ಎಂದು ಶಂಕಿಸಿದ್ದಾರೆ. ಅಲ್ಲದೇ ಉಡುಪಿ ಜಿಲ್ಲೆಯ ಎಲ್ಲಾ ಠಾಣೆಗಳಿಗೆ ಬಾಲಕನ ಪೋಷಕರು ದೂರು ನೀಡಿದ್ದಾರೆ. ಅಲ್ಲದೆ ಆತನ ಪತ್ತೆಗೆ ಜ್ಯೋತಿಷಿಗಳ ಮೊರೆ ಹೋಗಿದ್ದಾರೆ. ಅಲ್ಲದೇ ದಕ್ಷಿಣ ಕನ್ನಡ ಭಾಗದಲ್ಲಿ ಬಾಲಕ ಇದ್ದಾನೆಂದು ಜ್ಯೋತಿಷ್ಯರು ಸೂಚನಾ ಮಾಹಿತಿ ನೀಡಿದ್ದಾರೆ ಹುಡುಕಾಟ ನಡೆಸಲಾಗುತ್ತಿದೆ. ಬಾಲಕನಿಗಾಗಿ ಹುಡುಕಾಟ ಮುಂದುವರಿದಿದೆ.