ಬಿಜೆಪಿ ಆತ್ಮಾವಲೋಕನ: ಮಿಷನ್ 2024ಗೆ ಮಹಾಪ್ಲ್ಯಾನ್- ಲೋಕಸಭಾ ಚುನಾವಣೆಯಲ್ಲಿ ಈ 13 ಹಾಲಿ ಸಂಸದರಿಗೆ ಟಿಕೆಟ್ ಇಲ್ಲ!
ಬಿಜೆಪಿ ಆತ್ಮಾವಲೋಕನ: ಮಿಷನ್ 2024ಗೆ ಮಹಾಪ್ಲ್ಯಾನ್- ಲೋಕಸಭಾ ಚುನಾವಣೆಯಲ್ಲಿ ಈ 13 ಹಾಲಿ ಸಂಸದರಿಗೆ ಟಿಕೆಟ್ ಇಲ್ಲ!
ಕರ್ನಾಟಕ ವಿಧಾನಸಭಾ ಚುನಾವಣೆಯ ಸೋಲು ಬಿಜೆಪಿಗೆ ದೊಡ್ಡ ಶಾಕ್ ನೀಡಿದೆ. ಈ ಸೋಲಿನ ಆತ್ಮಾವಲೋಕನ ಮಾಡಿರುವ ಬಿಜೆಪಿ ವರಿಷ್ಠರು ರಾಜ್ಯ ಬಿಜೆಪಿ ನಾಯಕತ್ವವನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.
ಮತ್ತೊಮ್ಮೆ "ಮೋದಿ ಸರ್ಕಾರ"ಕ್ಕೆ ಸವಾಲಾಗಿರುವ ಸಂಖ್ಯಾಬಲವನ್ನು ಕ್ರೋಢೀಕರಿಸಿಕೊಳ್ಳಲು ಈಗಿನಿಂದಲೇ ಬಿಜೆಪಿ ಮಹಾ ಪ್ಲ್ಯಾನ್ ಮಾಡಿಕೊಂಡಿದೆ. ಲೋಕಸಭಾ ಚುನಾವಣೆಗೆ ಕರ್ನಾಟಕದ 13 ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸುವ ಸಾಧ್ಯತೆ ನಿಚ್ಚಳವಾಗಿದೆ ಎನ್ನಲಾಗಿದೆ.
ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ ಜೈತ್ರಯಾತ್ರೆ ನಡೆಸಿತ್ತು. ಕರ್ನಾಟಕದ 28 ಕ್ಷೇತ್ರಗಳ ಪೈಕಿ 25ನ್ನು ಗೆದ್ದು ಮಹಾ ವಿಜಯ ಸಂಪಾದಿಸಿತ್ತು.
ಈ ಸಂಖ್ಯಾಬಲ ಕಾಯ್ದುಕೊಳ್ಳುವುದು ಬಿಜೆಪಿಗೆ ಈಗ ಸವಾಲಾಗಿದೆ. ಕಾಂಗ್ರೆಸ್‌ನ ಗ್ಯಾರಂಟಿ ಜನಪ್ರಿಯತೆ ಈಗಲೂ ಮುಂದುವರಿದಿರುವುದು ಕಮಲ ಪಕ್ಷಕ್ಕೆ ತಲೆನೋವು ತಂದಿದೆ. ಜೊತೆಗೆ ಯಡಿಯೂರಪ್ಪ, ಈಶ್ವರಪ್ಪರಂತಹ ಮುಂಚೂಣಿ ನಾಯಕರು ಹಿನ್ನೆಲೆಗೆ ಸರಿದಿರುವುದು, ಉತ್ತರ ಕರ್ನಾಟಕದಲ್ಲಿ ಪಕ್ಷ ಪ್ರಾಬಲ್ಯ ಕಳೆದುಕೊಂಡಿರುವುದು ಬಿಜೆಪಿ ವರಿಷ್ಠರನ್ನು ಚಿಂತೆಗೀಡು ಮಾಡಿದೆ. ಇದರೊಂದಿಗೆ ಬಿಜೆಪಿಯಲ್ಲಿನ ಬಂಡಾಯವನ್ನುಮೆಟ್ಟಿನಿಲ್ಲಬೇಕಾಗಿದೆ.
ಈ ಎಲ್ಲ ಕಾರಣಕ್ಕೆ ಅಳೆದು ತೂಗಿ ಈ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗುತ್ತಿದೆ ಎಂಬ ಮಾತು ಕೇಳಿ ಬಂದಿದೆ. ಟಿಕೆಟ್ ಕಳೆದುಕೊಳ್ಳುವ ಸಂಭಾವ್ಯ ಸಂಸದರ ಪಟ್ಟಿ ಇಲ್ಲಿದೆ.
ತುಮಕೂರು- ಬಿ.ಎಸ್. ಬಸವರಾಜು
ಚಾಮರಾಜನಗರ - ವಿ. ಶ್ರೀನಿವಾಸ್ ಪ್ರಸಾದ್
ಚಿಕ್ಕಬಳ್ಳಾಪುರ- ಬಿ.ಎನ್. ಬಚ್ಚೇಗೌಡ
ಉತ್ತರ ಕನ್ನಡ- ಅನಂತ್ ಕುಮಾರ್ ಹೆಗಡೆ
ಬೆಂಗಳೂರು ಉತ್ತರ- ಡಿ.ವಿ. ಸದಾನಂದ ಗೌಡ
ವಿಜಯಪುರ- ರಮೇಶ್ ಜಿಗಜಿಣಗಿ
ಕೊಪ್ಪಳ- ಸಂಗಣ್ಣ ಕರಡಿ
ಬಳ್ಳಾರಿ- ವೈ ದೇವೇಂದ್ರಪ್ಪ
ಬೆಳಗಾವಿ - ಮಂಗಳಾ ಅಂಗಡಿ
ದಕ್ಷಿಣ ಕನ್ನಡ - ನಳಿನ್ ಕುಮಾರ್ ಕಟೀಲ್
ಬಾಗಲಕೋಟೆ- ಪಿ.ಸಿ. ಗದ್ದಿಗೌಡರ್
ಹಾವೇರಿ- ಶಿವಕುಮಾರ್ ಉದಾಸಿ
ದಾವಣಗೆರೆ- ಜಿ.ಎಂ. ಸಿದ್ದೇಶ್ವರ
ಕೆಲವೊಂದು ಕ್ಷೇತ್ರಗಳಲ್ಲಿ ಸೋಲಿನ ರುಚಿ ಕಂಡಿರುವ ರಾಜ್ಯ ನಾಯಕರನ್ನು ಲೋಕಸಭಾ ಚುನಾವಣೆಗೆ ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ. ಈ ಸಂಭಾವ್ಯ ನಾಯಕರ ಪಟ್ಟಿ ಇಲ್ಲಿದೆ.
ವಿಜಯಪುರ- ಗೋವಿಂದ ಕಾರಜೋಳ/ ಅರವಿಂದ ಲಿಂಬಾವಳಿ
ತುಮಕೂರು- ವಿ. ಸೋಮಣ್ಣ
ಬೆಂಗಳೂರು ಉತ್ತರ- ಡಾ. ಕೆ. ಸುಧಾಕರ್
ಹಾವೇರಿ- ಬಿ.ಸಿ. ಪಾಟೀಲ್
ಬಳ್ಳಾರಿ- ಬಿ. ಶ್ರೀರಾಮುಲು
ಉತ್ತರ ಕನ್ನಡ- ವಿಶ್ವೇಶ್ವರ ಹೆಗಡೆ ಕಾಗೇರಿ
ಕೊಪ್ಪಳ - ಆನಂದ್ ಸಿಂಗ್
ಬಾಗಲಕೋಟೆ- ಮುರುಗೇಶ್ ನಿರಾಣಿ
.