Nelyady:- ಲೋಕಾಯುಕ್ತ ದಾಳಿ ಲಂಚ ಪಡೆಯುತ್ತಿದ್ದ ಪಿಡಿಓ ವಶಕ್ಕೆ..!
Thursday, June 22, 2023
ಕಡಬ ತಾಲೂಕಿನ ಕೌಕ್ರಾಡಿ ಪಂಚಾಯತ್‌ನಲ್ಲಿ ಲಂಚ ತೆಗೆದುಕೊಳ್ಳುತ್ತಿದ್ದ ಪಿಡಿಓ ಓರ್ವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಲಂಚವಾಗಿ ಪಿಡಿಓ ಮಹೇಶ್ ಎಂಬವರು 20 ಸಾವಿರ ರೂಪಾಯಿ ಸ್ವೀಕರಿಸುತಿದ್ದಾಗ ಲೋಕಾಯುಕ್ತ ಬಲೆಗೆ
ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತ್ ಪಿಡಿಓ ಮಹೇಶ್ ಎಂಬವರು ಭೂಮಿ ಖಾತಾ ಮಾಡಿಕೊಡಲು 20 ಸಾವಿರ ರೂಪಾಯಿ ಬೇಡಿಕೆಯಿಟ್ಟವರು. ಲೋಕಾಯುಕ್ತ ಎಸ್ ಪಿ ಸೈಮನ್ ಮಾರ್ಗದರ್ಶನದಲ್ಲಿ ಡಿ ವೈ ಎಸ್ ಪಿ ಚೆಲುವರಾಜ್ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಮಹೇಶ್ ಅವರನ್ನು ವಶಕ್ಕೆ ಪಡೆದು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.ಇವರ ಬಂಧನದ ಬಗ್ಗೆ ಅಧಿಕೃತ ಮಾಹಿತಿ ಇನಷ್ಟೇ ಲಭ್ಯವಾಗಬೇಕಿದೆ.