ದ್ವಿಚಕ್ರ ಚಲಾಯಿಸಿದ ಅಪ್ರಾಪ್ತ: ಜೈಲು ಸೇರಿದ ತಂದೆ
Thursday, June 22, 2023
ಕಾಸರಗೋಡು: ಅಪ್ರಾಪ್ತ ಬಾಲಕನಿಗೆ ಚಲಾಯಿಸಲು ದ್ವಿಚಕ್ರ ನೀಡಿದ ತಪ್ಪಿಗೆ ತಂದೆಯೋರ್ವನಿಗೆ ನ್ಯಾಯಾಲಯದ ಕಲಾಪ ಮುಗಿಯುವವರೆಗೆ ಜೈಲು ಶಿಕ್ಷೆ ಹಾಗೂ 25,000 ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪುನೀಡಿದೆ.
ಜೂನ್ 6ಕ್ಕೆ ಚಂದೇರಾ ಪೊಲೀಸರು ಮೂಸಾಹಾಜಿ ಮುಕ್ಕಿಲ್ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತಿದ್ದರು. ಈ ವೇಳೆ 17 ವರ್ಷದ ಬಾಲಕ ಸ್ಕೂಟರ್ ಚಲಾಯಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ತಂದೆ ರಝಾಕ್ ಸ್ಕೂಟರ್ ಚಲಾಯಿಸಲು ಕೊಟ್ಟಿರುವುದಯ ತಿಳಿದುಬಂದಿದೆ. ಸ್ಕೂಟರನ್ನು ವಶಕ್ಕೆ ಪಡೆದ ಪೊಲೀಸರು ಬಾಲಕನಿಗೆ ಸ್ಕೂಟರ್ ನೀಡಿದ ರಜಾಕ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಇದೀಗ ನ್ಯಾಯಾಲಯ ಆತನಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.