RBI ಪ್ರಕಟಣೆ: ಮಂಗಳೂರಿನಲ್ಲಿ ಕಾರು ಬಾಡಿಗೆ ನೀಡುವ ಏಜೆನ್ಸಿಗಳ ಹೆಸರು ಸೇರ್ಪಡೆ
Friday, June 9, 2023
RBI ಪ್ರಕಟಣೆ: ಮಂಗಳೂರಿನಲ್ಲಿ ಕಾರು ಬಾಡಿಗೆ ನೀಡುವ ಏಜೆನ್ಸಿಗಳ ಹೆಸರು ಸೇರ್ಪಡೆ
ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಕಚೇರಿಯ ಉಪಯೋಗಕ್ಕೆ ಕಾರು ಬಾಡಿಗೆ ಪಡೆಯಲು ಹೆಸರಾಂತ ಕಾರು ಬಾಡಿಗೆ ನೀಡುವ ಏಜೆನ್ಸಿಗಳ ಪಟ್ಟಿ ಮಾಡುತ್ತಿದ್ದು, ಹೆಸರು ಸೇರ್ಪೆ ಮಾಡಲು ಇಚ್ಚಿಸುವವರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ. 4, 2023,
ಆಗಸ್ಟ್ 1ರಂದು ಜಾರಿಗೆ ಬರುವಂತೆ ಕಚೇರಿಯ ಉಪಯೋಗಕ್ಕೆ ಮಂಗಳೂರಿನಲ್ಲಿ ಕಾರುಗಳನ್ನು ಬಳಸಲು ಈ ಏಜೆನ್ಸಿಗಳ ನೆರವನ್ನು ಪಡೆಯಲಾಗುವುದು. ತನ್ನ ಪ್ಯಾನಲ್‌ನಲ್ಲಿ ಇರುವ ಏಜೆನ್ಸಿಗಳ ಕಾರುಗಳನ್ನು ಮಾತ್ರ ವಾಣಿಜ್ಯ ಮತ್ತು ಕಚೇರಿ ಬಳಕೆಗೆ ಉಪಯೋಗಿಸಲಾಗುವುದು.
ಈ ಕುರಿತ ಅರ್ಜಿ ನಮೂನೆ, ಷರತ್ತುಗಳು ಮತ್ತು ಇತರ ಮಾಹಿತಿಗಳನ್ನು ಆರ್‌ಬಿಐ ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದೆ ಎಂದು RBI ಪ್ರಾದೇಶಿಕ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.
.