-->
ಅಪ್ರಾಪ್ತೆಯ ಅತ್ಯಾಚಾರಗೈದ ಕಾಮುಕ ವೃದ್ಧ: ಮೊಬೈಲ್ ನಲ್ಲಿ ಚಿತ್ರೀಕರಿಸಿದ ಪುತ್ರ

ಅಪ್ರಾಪ್ತೆಯ ಅತ್ಯಾಚಾರಗೈದ ಕಾಮುಕ ವೃದ್ಧ: ಮೊಬೈಲ್ ನಲ್ಲಿ ಚಿತ್ರೀಕರಿಸಿದ ಪುತ್ರ

ನವದೆಹಲಿ: 68ರ ಕಾಮುಕ ವೃದ್ಧನೋರ್ವನು ತನಗೆ ಪರಿಚಿತಳಾದ ಬಾಲಕಿಯನ್ನು ಮನೆಗೆ ಕರೆದು ಅತ್ಯಾಚಾರ ಎಸಗಿದ್ದು, ಆತನ ಪುತ್ರ ಈ ಕೃತ್ಯವನ್ನು ಮೊಬೈಲ್ ನಲ್ಲಿ‌ ಚಿತ್ರೀಕರಿಸಿದ್ದಾನೆ. ಆಘಾತಕಾರಿ ಘಟನೆ ನವದೆಹಲಿಯಲ್ಲಿ ನಡೆದಿದೆ.‌ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. 

ಬಂಧಿತ ಆರೋಪಿ ವೃದ್ಧನು ಸಂತ್ರಸ್ತ ಅಪ್ರಾಪ್ತೆಯ ಕುಟುಂಬಸ್ಥರಿಗೆ ಹಲವು ವರ್ಷಗಳಿಂದ ಪರಿಚಯವಿದ್ದ ವ್ಯಕ್ತಿಯಾಗಿದ್ದ. ಅವರೊಂದಿಗೆ ಪ್ರವಾಸಕ್ಕೂ ಜೊತೆಯಾಗಿ ತೆರಳುತ್ತಿದ್ದ. ಎರಡು ಕುಟುಂಬಗಳ ನಡುವಿನ ಸಂಬಂಧವನ್ನೇ ಆರೋಪಿ ಬಂಡವಾಳ ಮಾಡಿಕೊಂಡು ಈ ಕೃತ್ಯ ಎಸಗಿದ್ದಾನೆ.

ಈ ದುರ್ಘಟನೆ ಎಪ್ರಿಲ್ 20-30ರ ಅವಧಿಯಲ್ಲಿ ನಡೆದಿದೆ. ಸಂತ್ರಸ್ತೆಯನ್ನು ಆರೋಪಿ ತನ್ನ ಮನೆಗೆ ಬರುವಂತೆ ಹೇಳಿ ಆಮಿಷವೊಡ್ಡಿದ್ದಾನೆ. ಇದನ್ನು ನಂಬಿ ಆಕೆ ಮನೆಗೆ ಬಂದ ವೇಳೆ ಆರೋಪಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ.

ವೃದ್ಧನ ಪುತ್ರ ತನ್ನ ತಂದೆ ಯಾರು ಇಲ್ಲದ ವೇಳೆ ಮಾಟ ಮಂತ್ರ ಮಾಡುತ್ತಿದ್ದಾನೆ ಎಂದು ಶಂಕಿಸಿ ಆತನ ರೂಮಿನಲ್ಲಿ ಮೊಬೈಲ್ ಕ್ಯಾಮರಾ ಇರಿಸಿದ್ದ. ಆದರೆ ಅತ್ಯಾಚಾರಗೈದ ಕೃತ್ಯವು ಸಂಪೂರ್ಣವಾಗಿ ಮೊಬೈಲ್ ಫೋನಿನಲ್ಲಿ ಸೆರೆಯಾಗಿದೆ. ಆರೋಪಿಯ ಪುತ್ರ ಮೊಬೈಲ್ ಪರಿಶೀಲಿಸಿದಾಗ ಸಂಪೂರ್ಣ ವಿಚಾರ ಬೆಳಕಿಗೆ ಬಂದಿದೆ. ಇದನ್ನು ಸಂತ್ರಸ್ತೆಯ ತಂದೆಗೆ ಕಳುಹಿಸಿದಾಗ ಅವರು ದೂರು ದಾಖಲಿಸಿದ್ದಾರೆ.

ಅತ್ಯಾಚಾರ ಪ್ರಕರಣ ಸಂಬಂಧ ಆರೋಪಿ ಹಾಗೂ ಆತನ ಮಗನನ್ನು ವಶಕ್ಕೆ ಪಡೆಯಲಾಗಿದ್ದು, ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಅಪ್ರಾಪ್ತಯೊಂದಿಗೆ ಆಪ್ತಸಮಾಲೋಚನೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಬಂಧಿತರ ವಿರುದ್ಧ ಭಾರತ ದಂಡ ಸಂಹಿತೆ(IPC Section) 354, 376, 504, ಪೋಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮೊಬೈಲ್ ಫೋನ್ ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.

Ads on article

Advertise in articles 1

advertising articles 2

Advertise under the article