
ರಿಯಾಲಿಟಿ ಶೋನಲ್ಲಿ ಭಾರೀ ಶೋಷಣೆ: ಗಂಭೀರ ಆರೋಪ ಮಾಡಿದ ರಮಾನಂದ ಸಾಗರ್ ಮರಿಮೊಮ್ಮಗಳು
Sunday, June 25, 2023
ನವದೆಹಲಿ: ಪ್ರಸಿದ್ಧ 'ರಾಮಾಯಣ' ದೀರಿಯಲ್ ನಿರ್ದೇಶಕ ರಮಾನಂದ ಸಾಗರ್ ರವರ ಮರಿ ಮೊಮ್ಮಗಳು ಸಾಕ್ಷಿ ಚೋಪ್ರಾ ತಮ್ಮ ಬೋಲ್ಡ್ ಲುಕ್ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಹರಿಯಬಿಟ್ಟು ಗಮನ ಸೆಳೆಯುತ್ತಿರುತ್ತಾರೆ. ಈ ಮೂಲಕ ಅವರು ಸದಾ ಸುದ್ದಿಯಲ್ಲಿರುತ್ತಾರೆ.
ಇದೀಗ ಸಾಕ್ಷಿ ಚೋಪ್ರಾ ಅವರು ರಿಯಾಲಿಟಿ ಶೋವೊಂದರ ನಿರ್ಮಾಪಕರ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಶೂಟಿಂಗ್ ಸಂದರ್ಭ ತನಗೆ ಕಿರುಕುಳ ನೀಡಲಾಗಿದೆ ಎಂದು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಆರೋಪಿಸಿದ್ದಾರೆ.
ರಿಯಾಲಿಟಿ ಶೋನ ಒಪ್ಪಂದದನ್ವಯ ತಮ್ಮ ತಾಯಿಯೊಂದಿಗೆ ಪ್ರತಿದಿನ ಒಂದು ಬಾರಿ ಫೋನ್ ಕರೆ ಮಾಡಿ ಮಾತನಾಡಲು ಅವಕಾಶವಿತ್ತು. ಆದರೆ ಸೆಟ್ ನಲ್ಲಿ ಶೋ ಮೇಕರ್‌ಗಳ ವರ್ತನೆ ಸರಿಯಿರಲಿಲ್ಲ. ಇದನ್ನು ಬಹಿರಂಗಪಡಿಸಲೆತ್ನಿಸಿದಾಗ, ಫೋನ್ ಕಸಿದುಕೊಂಡಉ ಕಿರುಕುಳ ನೀಡಿದ್ದಾರೆ. ಅಲ್ಲದೆ ಅಪರಿಚಿತರು ಬೆನ್ನು ಸ್ಪರ್ಶಿಸಿ ಗಾಯ ಮಾಡುವುದು, ಊಟ ಪಡೆದುಕೊಳ್ಳುವ ವೇಳೆ ಅಶ್ಲೀಲ ಪದ ಬಳಸುವುದು ಸೇರಿದಂತೆ ಕೆಲ ಅಹಿತಕರ ದೃಶ್ಯಗಳನ್ನು ಮಾಡುವಂತೆ ಒತ್ತಾಯಿಸುತ್ತಿದ್ದರು ಎಂದು ಸಾಕ್ಷಿ ಚೋಪ್ರಾ ಆರೋಪಿಸಿದ್ದಾರೆ.
ಒಂದು ವರ್ಷಕ್ಕೂ ಅಧಿಕ ಕಾಲ ಕಿರುಕುಳ ಅನುಭವಿದ್ದೇನೆ. ಈ ಬಗ್ಗೆ ಆರಂಭದಲ್ಲಿಯೇ ತಿಳಿಸಿದ್ದೆ. ಕರೆ ಮಾಡುವ ಅವಕಾಶ ಕಸಿದುಕೊಂಡದ್ದರಿಂದ, ಇಲ್ಲಿ ಏನಾಗುತ್ತಿದೆ ಎಂಬುದು ನನ್ನ ತಾಯಿಗೆ ಗೊತ್ತಾಗುತ್ತಿರಲಿಲ್ಲ. ಸಾಕಷ್ಟು ಬಾರಿ ದೂರು ನೀಡಿದ ನಂತರ ಸಭೆಗಳನ್ನು ನಡೆಸಿ ನಿಮಗೆ ಯಾವುದೇ ತೊಂದರೆ ಇಲ್ಲದಂತೆ ನೋಡಿಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಇದು ಕೇವಲ ಹಾಡುಗಾರಿಕೆ ಹಾಗೂ ಮನರಂಜನಾ ಕಾರ್ಯಗಳಿರುವ ರಿಯಾಲಿಟಿ ಶೋ. ಗಾಸಿಪ್, ನಾಟಕ ಇಲ್ಲ ಎನ್ನುತ್ತಲೇ ನನ್ನನ್ನು ದಾರಿ ತಪ್ಪಿಸಲಾಯಿತು. ರಿಯಾಲಿಟಿ ಶೋನಲ್ಲಿ ಪಾಲ್ಗೊಂಡು ಸಾಕಷ್ಟು ಮಾನಸಿಕವಾಗಿ ನೊಂದುಕೊಳ್ಳುವಂತಹ ಸನ್ನಿವೇಶಗಳು ಎದುರಾದವು. ಅಲ್ಲದೆ ಒಬ್ಬ ವ್ಯಕ್ತಿಯಂತೂ ನನ್ನ ದೇಹದ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದ್ದಾನೆ. ಕೆಲ ಶೋ ನಿರ್ಮಾಪಕರು ಕೇವಲ ಕೊಳಕು ಮನರಂಜನೆಗಾಗಿ ಏನು ಮಾಡಲು ಸಿದ್ಧರಿದ್ದಾರೆ ಎಂಬುದನ್ನು ಇದು ತೋರಿಸಿದೆ ಎಂದು ಸಾಕ್ಷಿ ಚೋಪ್ರಾ ಆರೋಪಿಸಿದ್ದಾರೆ.