ಮಂಗಳೂರು ವಿವಿ ವೇಯ್ಟ್‌ಲಿಫ್ಟಿಂಗ್: ಆಳ್ವಾಸ್ ಮಹಿಳಾ ತಂಡಕ್ಕೆ ಸತತ 19ನೇ ಬಾರಿ ಚಾಂಪಿಯನ್ ಪಟ್ಟ
ಮಂಗಳೂರು ವಿವಿ ವೇಯ್ಟ್‌ಲಿಫ್ಟಿಂಗ್: ಆಳ್ವಾಸ್ ಮಹಿಳಾ ತಂಡಕ್ಕೆ ಸತತ 19ನೇ ಬಾರಿ ಚಾಂಪಿಯನ್ ಪಟ್ಟ!
ಆತಿಥೇಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕ್ರೀಡಾಪಟುಗಳು ಅದ್ಭುತ ಸಾಧನೆ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.
ಆಳ್ವಾಸ್ ಮಹಿಳಾ ತಂಡ ಮಂಗಳೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ವೇಯ್ಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಸಮಗ್ರ ಚಾಂಪಿಯನ್ ಶಿಪ್ ಪ್ರಶಸ್ತಿ ಪಡೆದುಕೊಂಡಿದೆ. ಇದು ಮಹಿಳಾ ತಂಡದ ಸತತ 19ನೇ ಪ್ರಶಸ್ತಿಯಾಗಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಆಳ್ವಾಸ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಆಳ್ವಾಸ್ ಮಹಿಳಾ ತಂಡ 19ನೇ ಬಾರಿಗೆ ಅಗ್ರ ಪ್ರಶಸ್ತಿ ಬಾಚಿದರೆ, ಪುರುಷರ ತಂಡ ಸತತ 17ನೇ ಬಾರಿಗೆ ಚಾಂಪಿಯನ್ ಶಿಪ್ ಪ್ರಶಸ್ತಿ ಪಡೆದುಕೊಂಡರು.
ಪುರುಷರ ವಿಭಾಗದಲ್ಲಿ ಆಳ್ವಾಸ್ ತಂಡ 61 ಅಂಕಗಳನ್ನು ಕಲೆ ಹಾಕಿತು. ಉಜಿರೆಯ ಎಸ್‌ಡಿಎಂ ತಂಡ 58 ಅಂಕಗಳೊಂದಿಗೆ ರನ್ನರ್ ಅಪ್ ಸ್ಥಾನ ಪಡೆಯಿತು. ಸೈಂಟ್ ಫಿಲೋಮಿನಾ 19 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆಯಿತು.
ಮಹಿಳೆಯ ವಿಭಾಗದಲ್ಲಿ ಆಳ್ವಾಸ್ 71 ಅಂಕ ಪಡೆದರೆ, ಉಜಿರೆಯ ಎಸ್‌ಡಿಎಂ ತಂಡ 39 ಅಂಕದೊಂದಿಗೆ ಎರಡನೇ ಸ್ಥಾನ ಪಡೆಯಿತು. ಸೈಂಟ್ ಫಿಲೋಮಿನಾ 10 ಅಂಕ ಗಳಿಸಿ ಮೂರನೇ ಸ್ಥಾನ ಪಡೆಯಿತು.
49 ಕೆ.ಜಿ. ವಿಭಾಗದಲ್ಲಿ ಮೂರು ಕೂಟ ದಾಖಲೆ ಬರೆದ ಆಳ್ವಾಸ್ ನ ಲಕ್ಷ್ಮಿ ಬಿ ಉತ್ತಮ ಲಿಫ್ಟರ್ ಪ್ರಶಸ್ತಿ ಪಡೆದರೆ, ಸ್ನ್ಯಾಚ್‌ನಲ್ಲಿ
59 ಕೆ.ಜಿ. ವಿಭಾಗದಲ್ಲಿ SDMನ ಅಶ್ವಿತಾ ಕೂಡ ಮೂರು ಕೂಟ ದಾಖಲೆ ಬರೆದು ಗಮನ ಸೆಳೆದರು.
ಆಳ್ವಾಸ್ ಪುರುಷರ ವಿಭಾಗದಲ್ಲಿ 109 ಕೆ.ಜಿ. ವಿಭಾಗದಲ್ಲಿ ಪ್ರತ್ಯೂಷ್ ಮೂರು ದಾಖಲೆ ವರೆದರು. ಉಜಿರೆ ಎಸ್‌ಡಿಎಂ ಕಾಲೇಜಿನ ಪೃಥ್ವಿರಾಜ್ 115 ಕೆ.ಜಿ. ಎತ್ತಿ ಇನ್ನೊಂದು ಕೂಟ ದಾಖಲೆಗೆ ಭಾಜನರಾದರು.