ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲವೆಂದು ಯುವಕ ನೇಣಿಗೆ ಶರಣು
Thursday, June 29, 2023
ಕಾರವಾರ: ವಿವಾಹವಾಗಲು ಹೆಣ್ಣು ಸಿಗುತ್ತಿಲ್ಲವೆಂದು ಮನನೊಂದು ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ.
ಯಲ್ಲಾಪುರ ತಾಲೂಕಿನ ತೇಲಂಗಾರ ಕಿರಗಾರಿಮನೆ ನಿವಾಸಿ ನಾಗರಾಜ ಗಣಪತಿ ಗಾಂವ್ಕರ್ (35) ಮೃತಪಟ್ಟ ಯುವಕ. ಕೃಷಿಯಲ್ಲಿ ತೊಡಿಗಿಸಿಕೊಂಡಿಕೊಂಡಿದ್ದ ನಾಗರಾಜ್ ಮದುವೆಯಾಗಲು ಹೆಣ್ಣಿನ ಹುಡುಕಾಟದಲ್ಲಿದ್ದರು. ಆದರೆ ಎಷ್ಟು ಪ್ರೊಪೊಸಲ್ ಬಂದರೂ ಏನಾದರೊಂದು ನೆಪದಿಂದ ಹೆಣ್ಣು ಸೆಟ್ ಆಗುತ್ತಿರಲಿಲ್ಲ.
ಸಂಬಂಧಿಕರು, ಬೋಕರ್ ಗಳ ಬಳಿಯೂ ಹೆಣ್ಣು ಹುಡುಕಲು ಹೇಳುತ್ತಿದ್ದರು. ಆದರೆ ಮದುವೆಯಾಗಲು ಹೆಣ್ಣು ಸಿಗಿದ್ದುದರಿಂದ ಖಿನ್ನರಾಗಿದ್ದ ನಾಗರಾಜ ಗಣಪತಿ ಗಾಂವ್ಕರ್ ಅದೇ ಖಿನ್ನತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಮನೆಯ ಸಮೀಪದ ಗುಡ್ಡದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿದ್ದಾರೆ.