![ಪಾರ್ವತಮ್ಮ ರಾಜ್‍ಕುಮಾರ್ ಸಹೋದರನ ಪುತ್ರನಿಗೆ ಅಪಘಾತ - ಕಾಲು ಕಳೆದುಕೊಂಡ ನಟ ಸೂರಜ್ ಪಾರ್ವತಮ್ಮ ರಾಜ್‍ಕುಮಾರ್ ಸಹೋದರನ ಪುತ್ರನಿಗೆ ಅಪಘಾತ - ಕಾಲು ಕಳೆದುಕೊಂಡ ನಟ ಸೂರಜ್](https://blogger.googleusercontent.com/img/b/R29vZ2xl/AVvXsEgfIUoBhMMEA9h0YOUCu4cL4kZVcgcJ6fTFjNttpHYk6NlwyM1j1zFXHECg10kPYCn2f6Ze4klHhq7AfS6Nm8A-WCo8t563Jr9HxXjpnUO_NVUcYLNQcRgc_XT-zotTXGuHSm846VS0L9Lg/s1600/1687688338154081-0.png)
ಪಾರ್ವತಮ್ಮ ರಾಜ್‍ಕುಮಾರ್ ಸಹೋದರನ ಪುತ್ರನಿಗೆ ಅಪಘಾತ - ಕಾಲು ಕಳೆದುಕೊಂಡ ನಟ ಸೂರಜ್
Sunday, June 25, 2023
ಗುಂಡ್ಲುಪೇಟೆ: ಭೀಕರ ಅಪಘಾತದಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಸಹೋದರನ ಪುತ್ರ ನಟ ಸೂರಜ್ ಕಾಲಿಗೆ ಗಂಭೀರವಾಗಿ ಗಾಯಗೊಂಡ ಪರಿಣಾಮ ಕಾಲು ಕತ್ತರಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೈಸೂರಿನ ಸರಸ್ವತಿಪುರಂ ನಿವಾಸಿ ಸೂರಜ್ (28) ತೀವ್ರವಾಗಿ ಗಾಯಗೊಂಡಿದ್ದಾರೆ. ಶನಿವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ನಂಜನಗೂಡು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ಸೂರಜ್ ಎನ್ ಫೀಲ್ಡ್ ಬೈಕ್‌ನಲ್ಲಿ ಊಟಿಗೆ ಪ್ರವಾಸ ಹೊರಟಿದ್ದರು. ಈ ವೇಳೆ ಬೇಗೂರಿನಿಂದ ಹಿರಿಕಾಟಿ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಲಾರಿಯೊಂದು ಮೈಸೂರು ಕಡೆಯಿಂದ ಬರುತ್ತಿದ್ದ ಬುಲೆಟ್ ಬೈಕ್‌ಗೆ ನಂಜನಗೂಡು ಡಿಕ್ಕಿ ಹೊಡೆದಿದೆ. ಈ ಅಪಘಾತದ ವೇಳೆ ಟಿಪ್ಪರ್ ಸೂರಜ್ ಕಾಲಿನ ಮೇಲೆ ಹರಿದಿದೆ. ಪರಿಣಾಮ ಅವರ ಬಲಗಾಲು ಸಂಪೂರ್ಣ ನಜ್ಜುಗುಜ್ಜಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಕಾಲಿಗೆ ತೀವ್ರ ಪೆಟ್ಟಾಗಿದ್ದರಿಂದ ಬಲಗಾಲು ಕತ್ತರಿಸಲಾಗಿದೆ ಎನ್ನಲಾಗಿದೆ.
ಮಾಹಿತಿ ತಿಳಿದ ಬೇಗೂರು ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಗಾಯಾಳವನ್ನು ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಶಿವರಾಜ್‌ಕುಮಾರ್ ಹಾಗೂ ಕುಟುಂಬಸ್ಥರು ಮೈಸೂರಿನ ಆಸ್ಪತ್ರೆಗೆ ತೆರಳಿದ್ದಾರೆ. ಪಾರ್ವತಮ್ಮ ಸಹೋದರ ಮೀಸೆ ಶ್ರೀನಿವಾಸ್ ಪುತ್ರ ಸೂರಜ್, 'ಭಗವಾನ್ ಶ್ರೀಕೃಷ್ಣ ಪರಮಾತ್ಮ ಸಿನಿಮಾದಲ್ಲಿ ನಟಿಸಿದ್ದರು.