![ಠಾಣೆಯಲ್ಲಿಯೇ ವಿಚಾರಣಾಧೀನ ಕೈದಿ ಆತ್ಮಹತ್ಯೆ: ಪಿಐ, ಪಿಎಸ್ಐ ಸೇರಿದಂತೆ ಐವರು ಪೊಲೀಸರು ಅಮಾನತು ಠಾಣೆಯಲ್ಲಿಯೇ ವಿಚಾರಣಾಧೀನ ಕೈದಿ ಆತ್ಮಹತ್ಯೆ: ಪಿಐ, ಪಿಎಸ್ಐ ಸೇರಿದಂತೆ ಐವರು ಪೊಲೀಸರು ಅಮಾನತು](https://blogger.googleusercontent.com/img/b/R29vZ2xl/AVvXsEjiJ9O5hT5jycmlzcgkES8MU_K1cc3boYqYwOFeot7gPRrS1TCPS08THiAXJkEj0gLtASSlWVIOcr7sJHe9gVRV0qjl3Ei7VBq4s-RLlK52jb_ramLz7HEIJmwML_26oo5clWqREdsAFmUN/s1600/1687689405835038-0.png)
ಠಾಣೆಯಲ್ಲಿಯೇ ವಿಚಾರಣಾಧೀನ ಕೈದಿ ಆತ್ಮಹತ್ಯೆ: ಪಿಐ, ಪಿಎಸ್ಐ ಸೇರಿದಂತೆ ಐವರು ಪೊಲೀಸರು ಅಮಾನತು
Sunday, June 25, 2023
ಉತ್ತರಕನ್ನಡ: ವಿಚಾರಣಾಧೀನ ಕೈದಿಯೋರ್ವನು ಠಾಣೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸ್ ಠಾಣೆಯ ಪಿಐ, ಪಿಎಸ್ಐ ಸೇರಿದಂತೆ ಐವರು ಅಮಾನತುಗೊಂಡಿದ್ದಾರೆ.
ಪಾಲೀಷ್ ಮಾಡುವ ನೆಪದಲ್ಲಿ ಚಿನ್ನ ಕದಿಯುತ್ತಿದ್ದ ಆರೋಪದ ಮೇಲೆ ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ಹೊನ್ನಾವರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಅದರಲ್ಲಿ ದಿಲೀಪ್ ಮಂಡಲ್ ಎಂಬಾತ ಶನಿವಾರ ವಿಷ ಸೇವಿಸಿ ಠಾಣೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆರೋಪಿ ದಿಲೀಪ್ ಮಂಡಲ್ ಠಾಣೆಯಲ್ಲಿ ವಿಚಾರಣೆ ವೇಳೆ ಪೊಲೀಸರಲ್ಲಿ ತನಗೆ ನೀರು ಬೇಕು ಎಂದು ಕೇಳಿದ್ದಾನೆ. ಈ ವೇಳೆ ನೀರು ಕುಡಿಯಲು ಹೋಗಿದ್ದ ಆತ ನೀರನೊಂದಿಗೆ ವಿಷಮಿಶ್ರಣ ಮಾಡಿ ಸೇವಿಸಿದ್ದಾನೆ. ಕೃತ್ಯ ಗಮನಕ್ಕೆ ಬರುತ್ತಿದ್ದಂತೆ ತಕ್ಷಣ ಆತನನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಆತ ಸಾವನ್ನಪ್ಪಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾವರ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಮಂಜುನಾಥ್, ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಮಂಜೇಶ್ವರ್ ಚಂದಾವರ, ಪೊಲೀಸ್ ಸಿಬ್ಬಂದಿಗಳಾದ ಮಹಾವೀರ, ರಮೇಶ್, ಸಂತೋಷ್ ಅಮಾನತುಗೊಂಡಿದ್ದಾರೆ. ಸ್ಥಳಕ್ಕೆ ಎಸ್‌ಪಿ ವಿಷ್ಣುವರ್ಧನ್ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.