ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿದ ಪತ್ನಿಗೆ ತ್ರಿವಳಿ ತಲಾಖ್ ಹೇಳಿದ ಪತಿ
Wednesday, June 7, 2023
ಮುಂಬೈ: 2019ರಲ್ಲಿ ತ್ರಿವಳಿ ತಲಾಖ್ ಅನ್ನು ಅಪರಾಧವೆಂದು ಪರಿಗಣಿಸಲಾಗಿದೆ. ಆದರೂ ತ್ರಿವಳಿ ತಲಾಖ್ ಇನ್ನೂ ಜೀವಂತವಾಗಿರೋದು ಕಂಡು ಬರುತ್ತಿದೆ. ಇದೋಗ ಪತ್ನಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾಳೆಂದು ತಲಾಖ್ ಹೇಳಿರುವ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.
ರುಸ್ಸಾರ್ ಸಿದ್ದಿಕಿ(23) ಎಂಬಾಕೆ ತನ್ನ ಮೊದಲ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ತನ್ನ ಹಾಗೂ ಪತಿ ಮುಸ್ತಾಕಿಮ್ ಫೋಟೋ, ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದರಿಂದ ಕುಪಿತಗೊಂಡ ಪತಿ ಆಕೆಗೆ ತ್ರಿವಳಿ ತಲಾಖ್ ನೀಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರು ದಾಖಲಾಗಿದೆ.
ರುಬ್ಬಾರ್ ಸಿದ್ದಿಕಿ ನೀಡಿರುವ ದೂರಿನಲ್ಲಿ, “ತಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ. ತನ್ನ ಪತಿ ಮನೆಯಲ್ಲಿ ತನ್ನನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ನಾನು ಫೆಬ್ರವರಿಯಲ್ಲಿ ತವರು ಮನೆಗೆ ಹೋಗಿದ್ದೆ. ಮಾರ್ಚ್ 22ರಂದು ನಮ್ಮ ವಿವಾಹ ವಾರ್ಷಿಕೋತ್ಸವದಂದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಫೋಟೋಗಳನ್ನು ಜೋಡಿಸಿ ಒಂದು ವಿಡಿಯೋ ಮಾಡಿ ಹಾಕಿದ್ದೆ. ಇದನ್ನು ಗಮನಿಸಿದ ಪತಿ ತನಗೆ ಫೋನ್ ಮಾಡಿ ಅವುಗಳನ್ನು ತೆಗೆಯಲು ಹೇಳಿದ್ದಾರೆ. ತಾನು ನಿರಾಕರಿಸಿದಾಗ ಅವರು ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಇದಾದ ಬಳಿಕ ಎಪ್ರಿಲ್ 26 ರಂದು ಮನೆಗೆ ಹಿಂದಿರುಗಿದಾಗ, ತನ್ನ ಪತಿ ಮೌಖಿಕವಾಗಿ ತ್ರಿವಳಿ ತಲಾಖ್ ನೀಡಿದ್ದಾನೆ.
ಬಳಿಕ ನನ್ನ ತಾಯಿ ಹಾಗೂ ಸಹೋದರಿ ತನ್ನ ಪತಿಯ ಮನೆಗೆ ನನ್ನೊಂದಿಗೆ ಬಂದ್ದಾರೆ. ಅವರ ಮನೆಯವರು ನನ್ನನ್ನು ಒಳಗೆ ಹೋಗಲು ಬಿಡಲಿಲ್ಲ. ಅಲ್ಲದೆ ಪತಿ ಮನೆಯ ಹೊರಗೆ ತ್ರಿವಳಿ ತಲಾಖ್ ಹೇಳಿದ್ದಾರೆಂದು ಲಿಖಿತ ದೂರು ಸಲ್ಲಿಸಿದ್ದಾಳೆ.
ಮುಸ್ತಾಕಿಮ್ ಜೀವ ಬೆದರಿಕೆ ಹಾಕಿದಾಗ, ಕುರ್ಲಾ ಪೂರ್ವದಲ್ಲಿರುವ ಆಕೆಯ ಪೋಷಕರ ಮನೆ ಚುನಾಭಟ್ಟಿ ಪೊಲೀಸ್ ಠಾಣೆಯಲ್ಲಿ ಈ ಘಟನೆಯ ಬಗ್ಗೆ ದೂರು ದಾಖಲಿಸಿದೆ ಎಂದು ರುಕ್ಸಾರ್ ಪೊಲೀಸರಿಗೆ ತಿಳಿಸಿದ್ದಾರೆ. ಐಪಿಸಿ ಸೆಕ್ಷನ್ 498 ಎ (ಪತಿ/ಅಳಿಯರಿಂದ ಮಹಿಳೆಗೆ ಕಿರುಕುಳ) ಅಡಿಯಲ್ಲಿ ಪತಿ ಮತ್ತು ಅವರ ಕುಟುಂಬವನ್ನು ದಾಖಲಿಸಿದ್ದೇವೆ. ನಾವು ಪತಿಗೆ ಜೀವ ಬೆದರಿಕೆ ಮತ್ತು ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದೇವೆ ಎಂದು ಸಹ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.