-->
ದ್ವಿಚಕ್ರ ವಾಹನ ಮಾಲೀಕರೇ..! ಎಚ್ಚರ.. ಈ ಸುದ್ದಿಯನ್ನು ತಪ್ಪದೇ ಓದಿ

ದ್ವಿಚಕ್ರ ವಾಹನ ಮಾಲೀಕರೇ..! ಎಚ್ಚರ.. ಈ ಸುದ್ದಿಯನ್ನು ತಪ್ಪದೇ ಓದಿ

ದ್ವಿಚಕ್ರ ವಾಹನ ಮಾಲೀಕರೇ..! ಎಚ್ಚರ.. ಈ ಸುದ್ದಿಯನ್ನು ತಪ್ಪದೇ ಓದಿ





ಕೆಲ ದಿನಗಳಿಂದ ಈಚೆಗೆ ಕರಾವಳಿ ನಗರಿ ಮಂಗಳೂರಿನ ವಸತಿ ಪ್ರದೇಶದಲ್ಲಿ ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ.



ಮನೆಯ ಹೊರಗೆ, ಬೀದಿಯಲ್ಲಿ ನಿಲ್ಲಿಸಿದ ವಾಹನಗಳು ಅನಾಮತ್ತಾಗಿ ಕಣ್ಮರೆಯಾಗುತ್ತಿವೆ. ಇಂತಹ ದ್ವಿಚಕ್ರ ವಾಹನಗಳನ್ನೇ ಗುರಿಯಾಗಿರಿಸಿ ಕಾರ್ಯಾಚರಿಸುವ ಗ್ಯಾಂಗ್‌ವೊಂದು ಇಲ್ಲಿ ಸಕ್ರಿಯವಾಗಿದೆ.



ಹಾಗಾಗಿ ದ್ವಿಚಕ್ರ ವಾಹನ ಮಾಲಿಕರೇ, ನಿಮ್ಮ ವಾಹನಗಳ ಬಗ್ಗೆ ನೀವು ಎಚ್ಚರ ವಹಿಸಲೇ ಬೇಕಾದ ಅಗತ್ಯ ಇದೆ.



ನಗರದ ಅತ್ತಾವರದ ನ್ಯೂರೋಡ್ ಬಳಿಯ ಫ್ಲಾಟ್ ಹೊರಗೆ ಪಾರ್ಕ್ ಮಾಡಿರುವ ದ್ವಿಚಕ್ರ ವಾಹನಗಳು ಇತ್ತೀಚೆಗೆ ಕಾಣೆಯಾಗುತ್ತಿದ್ದ ಪ್ರಕರಣಗಳು ವರದಿಯಾಗಿತ್ತು.



ಈ ಫ್ಲಾಟ್ ಹೊರಗೆ ಅಳವಡಿಸಿದ ಸಿಸಿಟಿವಿ ಕ್ಯಾಮೆರಾಗಳ ಮೂಲಕ ವೀಡಿಯೋ ನೋಡಿದಾಗ ಶಾಕ್ ಕಾದಿತ್ತು. ಖದೀಮರು ತಮ್ಮ ಕೈಚಳಕ ತೋರಿಸುತ್ತಿರುವುದು ಈ ಮೂಲಕ ದೃಢಪಟ್ಟಿದೆ.



ಈ ಸಿಸಿಟಿವಿ ದೃಶ್ಯಾವಳಿಯಲ್ಲಿ ಇಬ್ಬರು ಕಳ್ಳರು ಮಧ್ಯರಾತ್ರಿಯಲ್ಲಿ ಸ್ಕೂಟರ್ ಗಳನ್ನು ಕದ್ದುಕೊಂಡು ಹೋಗುತ್ತಿರುವುದು ಸ್ಪಷ್ಟವಾಗಿದ್ದು, ಈ ದೃಶ್ಯ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.


ಇಂತಹ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

.

Ads on article

Advertise in articles 1

advertising articles 2

Advertise under the article