ರಾಜ್ಯದೆಲ್ಲೆಡೆ ಶೇ. 22ರಷ್ಟು ಟೋಲ್ ದರ ಏರಿಕೆ: ನಿರ್ಧಾರ ಸಮರ್ಥಿಸಿದ ಸಂಸದ ಪ್ರತಾಪ ಸಿಂಹ
ರಾಜ್ಯದೆಲ್ಲೆಡೆ ಶೇ. 22ರಷ್ಟು ಟೋಲ್ ದರ ಏರಿಕೆ: ನಿರ್ಧಾರ ಸಮರ್ಥಿಸಿದ ಸಂಸದ ಪ್ರತಾಪ ಸಿಂಹ
ರಾಜ್ಯದ ಎಲ್ಲೆಡೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರವನ್ನು ಏರಿಸಲಾಗಿದ್ದು, ಹೆದ್ದಾರಿ ಸಂಚಾರ ದುಬಾರಿಯಾಗಿ ಪರಿಣಮಿಸಿದೆ.
ಹೆದ್ದಾರಿ ಪ್ರಾಧಿಕಾರ ಈ ದರ ಏರಿಕೆ ಬಗ್ಗೆ ಯಾವುದೇ ಮುನ್ಸೂಚನೆಯಾಗಲೀ ಮಾಹಿತಿಯನ್ನಾಗಲೀ ನೀಡಿರಲಿಲ್ಲ. ಏಕಾಏಕಿ ಜೂನ್ 1ರಿಂದಲೇ ಈ ಹೆಚ್ಚಿನ ದರವನ್ನು ಪ್ರಯಾಣಿಕರಿಂದ ವಸೂಲು ಮಾಡುತ್ತಿದೆ ಎನ್ನಲಾಗಿದೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಶೇ. 22ರಷ್ಟು ದರ ಏರಿಕೆ ಮಾಡಲಾಗಿದ್ದು, ಈ ದರ ಏರಿಕೆ ಕ್ರಮವನ್ನು ಬಿಜೆಪಿ ಸಂಸದ ಪ್ರತಾಪ ಸಿಂಹ ಸಮರ್ಥಿಸಿಕೊಂಡಿದ್ದಾರೆ.
ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ ರಾಷ್ಟ್ರದಾದ್ಯಂತ ಟೋಲ್ ಏರಿಕೆ ಮಾಡುವುದು ಸಹಜ ಪ್ರಕ್ರಿಯೆ. ಅದೇ ರೀತಿ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲೂ ದರ ಏರಿಕೆ ಮಾಡಲಾಗಿದೆ. ಎಂದು ಸಂಸದರು ಕೇಂದ್ರದ ಕ್ರಮವನ್ನು ಸಮರ್ಥಿಸಿಕೊಂಡರು.
ರಾಜ್ಯದ ಎಲ್ಲ ಹೆದ್ದಾರಿಗಳ ನಿರ್ಮಾಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿ ಮತ್ತು ಟೋಲ್ ದರವನ್ನು ತೆಗೆದುಹಾಕಲಿ ಎಂದು ಅವರು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು.
.