-->
ಬಟ್ಟೆ ಅಂಗಡಿಯ ಟ್ರಯಲ್ ರೂಂನೊಳಗೆ ವಸ್ತ್ರ ಧರಿಸಿ ಅಳತೆ ನೋಡುವ ಮೊದಲು ಎಚ್ಚರ

ಬಟ್ಟೆ ಅಂಗಡಿಯ ಟ್ರಯಲ್ ರೂಂನೊಳಗೆ ವಸ್ತ್ರ ಧರಿಸಿ ಅಳತೆ ನೋಡುವ ಮೊದಲು ಎಚ್ಚರ


ತಮಿಳುನಾಡು: ಬಟ್ಟೆ ಅಂಗಡಿಯೊಂದರ ಟ್ರಯಲ್ ಕೊಠಡಿಯಲ್ಲಿ ಕ್ಯಾಮರಾ ಅಳವಡಿಸಿರುವ ಸಹೋದರ - ಸಹೋದರಿಯನ್ನು ಇದೀಗ ತಮಿಳುನಾಡು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲೆಯ ತಿರುಕೋಯಿಲೂರಿನಲ್ಲಿರುವ ಜನಪ್ರಿಯ ಬಟ್ಟೆ ಅಂಗಡಿಯ ಟ್ರಯಲ್ ರೂಂನಲ್ಲಿ ಮೊಬೈಲ್ ಫೋನ್ ಕ್ಯಾಮೆರಾ ಇಡಲಾಗಿತ್ತು. ಜೂನ್ 26 ರಂದು ಗ್ರಾಹಕರೊಬ್ಬರು ಬಟ್ಟೆ ಅಂಗಡಿಗೆ ಹೋಗಿದ್ದರು. ಈ ವೇಳೆ ತಮಗೆ ಸರಿಯಾದ ಅಳತೆ ಹೊಂದುವ ಅಂಗಿ ಧರಿಸಿ ನೋಡಲೆಂದು ಟ್ರಯಲ್ ರೊಂಗೆ ಹೋಗಿದ್ದಾರೆ. ಈ ವೇಳೆ ರೂಮ್‌ನಲ್ಲಿ ಮೊಬೈಲ್ ಫೋನ್ ಕ್ಯಾಮೆರಾ ಇರುವುದು ಪತ್ತೆಯಾಗಿದೆ. ತಕ್ಷಣ ಎಚ್ಚೆತ್ತ ಅವರು ಈ ಬಗ್ಗೆ ಅಂಗಡಿ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ.

ಈ ಘಟನೆಯ ಬಗ್ಗೆ ಬಟ್ಟೆ ಅಂಗಡಿಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ ಪೊಲೀಸರಿಗೆ ಇಬ್ಬರು ಟ್ರಯಲ್ ರೂಂನೊಳಗೆ ಮೊಬೈಲ್ ಕ್ಯಾಮೆರಾವನ್ನು ಇಟ್ಟು ಆಪರೇಟ್ ಮಾಡಿರುವುದು ತಿಳಿದುಬಂದಿದೆ. ತಕ್ಷಣವೇ ಓರ್ವನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅಪರಾಧಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಈ ಕೆಲಸ ಮಾಡಲು ಸಹಕರಿಸಿದ ತನ್ನ ಸಹೋದರಿಯ ಬಗ್ಗೆಯೂ ಮಾಹಿತಿ ನೀಡಿದ್ದಾನೆ. ಶೀಘ್ರವೇ ಪೊಲೀಸರು ಯುವತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Ads on article

Advertise in articles 1

advertising articles 2

Advertise under the article