-->
ಅವಳಿ ಶಿಶುಗಳ ಪ್ರಾಣ ತೆಗೆದ ಪಾಪಿ ತಾಯಿ - 13ದಿನಗಳ ಬಳಿಕ ಕೃತ್ಯ ಬಯಲಿಗೆ

ಅವಳಿ ಶಿಶುಗಳ ಪ್ರಾಣ ತೆಗೆದ ಪಾಪಿ ತಾಯಿ - 13ದಿನಗಳ ಬಳಿಕ ಕೃತ್ಯ ಬಯಲಿಗೆ



ದಾನೋಡ: ಪಾಪಿ ಹೆತ್ತತಾಯಿಯೊಬ್ಬಳು ತನ್ನ ಅವಳಿ - ಜವಳಿ ಶಿಶುಗಳನ್ನು ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆಯೊಂದು 13ದಿನಗಳ ಬಳಿಕ ಹರಿಯಾಣದ ದಾನೋಡ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಒಂಬತ್ತು ತಿಂಗಳ ಜಾನಕಿ ಮತ್ತು ಜಾನ್ವಿ ಮೃತ ದುರ್ದೈವಿ ಶಿಶುಗಳು‌. ಶೀತಲ್ ಎಂಬಾಕೆಯೇ ಅವಳಿ ಶಿಶುಗಳನ್ನು ಕೊಲೆಗೈದ ಆರೋಪಿ.

ಶೀತಲ್ ನನ್ನು ಒಂಬತ್ತು ತಿಂಗಳ ಅವಳಿ ಹೆಣ್ಣುಮಕ್ಕಳನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆಂಬ ಆರೋಪದಡಿ ಬಂಧಿಸಲಾಗಿದೆ. ಘಟನೆ ನಡೆದ 13 ದಿನಗಳ ಬಳಿಕ ಆರೋಪಿಯು ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಆಕೆಯ ಪತಿ ದೂರು ದಾಖಲಿಸಿದ್ದಾರೆ.

ಪತಿಯು ಜುಲೈ 12ರಂದು ಹೊಲಕ್ಕೆ ಕೆಲಸಕ್ಕೆ ಹೋಗಿದ್ದನು. ಆದರೆ ಮಧ್ಯಾಹ್ನ ಮನೆಗೆ ಊಟಕ್ಕೆಂದು ಬಂದಾಗ ಮನೆಯ ಹೊರಗೆ ಜನಸಂದಣಿ ಸೇರಿತ್ತು. ಮನೆಯೊಳಗೆ ಹೋದಾಗ ಮಕ್ಕಳು ಸತ್ತಿದ್ದಾರೆ ಎಂದು ಶೀತಲ್ ಗೊಳೋ ಎಂದು ಕಣ್ಣೀರು ಹಾಕಿದ್ದಾಳೆ. ಈ ಮಾತನ್ನು ನಂಬಿದ್ದ ಪತಿ ಹಾಗೂ ಕುಟುಂಬದವರು ಆಘಾತಕ್ಕೊಳಗಾಗಿದ್ದು ಮರಣೋತ್ತರ ಪರೀಕ್ಷೆ ನಡೆಸದೇ ಮಕ್ಕಳನ್ನು ಹಾಗೇ ಸಮಾಧಿ ಮಾಡಿದ್ದರು.

ಸದ್ಯ, ಕೊನೆಗೆ ತಾಯಿಯೇ ಮಕ್ಕಳನ್ನು ಹತ್ಯೆ ಮಾಡಿರುವುದನ್ನು ಒಪ್ಪಿರುವುದರಿಂದ ಪೊಲೀಸರು ಸಮಾಧಿ ಮಾಡಿದ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ. ಕೊಲೆಗೆ ನೈಜ ಕಾರಣವು ತನಿಖೆಯಿಂದ ತಿಳಿದು ಬರಬೇಕಿದೆ.​

Ads on article

Advertise in articles 1

advertising articles 2

Advertise under the article