ಬಿಟ್ ಕಾಯಿನ್ ದಂಧೆಯ ಮಾಸ್ಟರ್ ಮೈಂಡ್ ಶ್ರೀಕಿ 16ನೇ ವಯಸ್ಸಿಗೇ ರಾಹುಲ್ ಗಾಂಧಿ ಟ್ವಿಟ್ಟರ್ ಹ್ಯಾಕ್ ಮಾಡಿದ್ನಂತೆ
Wednesday, July 5, 2023
ಬೆಂಗಳೂರು: ಬಿಟ್ ಕಾಯಿನ್ ದಂಧೆಯ ಮಾಸ್ಟರ್ ಮೈಂಡ್ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ ಹ್ಯಾಕಿಂಗ್ ಸ್ಟೋರಿ ಕೇಳಿದರೆ ಯಾರಾದರೂ ಒಂದು ಬಾರಿ ಬೆಚ್ಚಿಬೀಳಿಸುವಂತಿದೆ. ನ್ಯಾಯಾಲಯಕ್ಕೆ ನೀಡಿದ ಸ್ವಯಂಪ್ರೇರಿತ ಹೇಳಿಕೆಯಲ್ಲಿ ಶ್ರೀಕಿಯ ಅಸಲಿ ಮುಖ ಬಯಲಾಗಿದೆ.
ಶ್ರೀಕಿ ಬೆಂಗಳೂರಿನ ಕಮಲಾಗಾರ್ಡನ್ಸ್‌ನಲ್ಲಿ 10ನೇ ತರಗತಿವರೆಗೆ CBSC ಶಿಕ್ಷಣ ಪಡೆದಿದ್ದ ಶ್ರೀಕಿ 4ನೇ ತರಗತಿಯಲ್ಲಿ ಇರುವಾಗಲೇ ಹ್ಯಾಕಿಂಗ್ ನಲ್ಲಿ ಪಳಗಿದ್ದ. ಆಗಲೇ ಅವನು ವೆಬ್ ಶೋಷಣೆಯ ಮೂಲಭೂತ ಅಂಶಗಳನ್ನು ಕಲಿತಿದ್ದ. ತನಗೆ ಶಾಲಾ ದಿನಗಳಲ್ಲೇ ಬ್ಲ್ಯಾಕ್ ಹ್ಯಾಟ್ ಹ್ಯಾಕರ್‌ಗಳ ಗುಂಪು ಐಆರ್‌ಸಿಗೆ ಸೇರಿದ್ದಂತೆ. ಹ್ಯಾಕರ್ ಶ್ರೀಕಿಯನ್ನು ಇಂಟರ್‌ನೆಟ್ ಲೋಕದಲ್ಲಿ ಎಪಿ ಹೆಸರಿನಿಂದ ಕರೆಯಲಾಗುತ್ತಿತ್ತು. 50,000 ಸದಸ್ಯರಿರುವ h4ckyou ಗುಂಪಿಗೆ ಸೇರಿದ್ದ ಶ್ರೀಕಿ ಬಿಟ್ ಕಾಯಿನ್ ದಂಧೆಗೆ ಬಿಟ್ ಕಾಯಿನ್ ಕೋರ್ ಸಾಫ್ಟ್ ವೇರ್ ಬಳಸುತ್ತಿದ್ದನಂತೆ.
ಬಹಳ ಆಘಾತಕಾರಿ ವಿಚಾರವೆಂದರೆ ಶ್ರೀಕಿ 2016ರಲ್ಲಿ ರಾಹುಲ್ ಗಾಂಧಿ, ಎಸ್‌ಡಿಟಿವಿ, ವಿಜಯ್ ಮಲ್ಯ, ಬರ್ಕಾ ದತ್ತಾ ಅವರ ವೆಬ್ ಸೈಟ್, ಟ್ವಿಟ್ಟರ್ ಖಾತೆಗಳ ಹ್ಯಾಕ್ ಮಾಡಿದ್ದ ಎಂದು ತನ್ನ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾನೆ. ರಿಮೋಟ್ ಕೋಡ್ ಎಕ್ಸಿಕ್ಯೂಷನ್ ದುರ್ಬಲತೆ ಬಳಸಿಕೊಂಡು net4india ಡೇಟಾ ಸೆಂಟರ್ ಹ್ಯಾಕ್ ಮಾಡಿ ಸರ್ವಗಳ ಮೇಲ್ ಸರ್ವರ್ ದಾಖಲೆಗಳನ್ನು ಬದಲಿಸಿ ಟ್ವಿಟ್ಟರ್ ಖಾತೆಗಳನ್ನು ಸರ್ವರ್ ದಾಖಲೆಗಳನ್ನು ಬದಲಿಸಿ ಟ್ವಿಟ್ಟರ್ ಖಾತೆಗಳನ್ನು ಮರು ಹೊಂದಿಸಿ ಉನ್ನತ ಪ್ರೊಫೈಲ್ ಖಾತೆಗಳ ಪ್ರವೇಶ ಮಾಡುತ್ತಿದ್ದನಂತೆ. ಈ ಬಗ್ಗೆ ದೆಹಲಿಯ EOW ನಲ್ಲಿ ಲೀಜನ್ ಎಂಬ ಗುಪ್ತನಾಮದ ವಿರುದ್ಧ ಪ್ರಕರಣ ದಾಖಲಾಗಿದೆ.
ಬಿಟ್ ಕ್ಲಬ್ ನೆಟ್ ವರ್ಕ್ ಎಕ್ಸ್ ಚೇಂಜ್ ಸರ್ವ‌್ರಗಳಿಗೆ ಹ್ಯಾಕ್ ಮಾಡಿ 100 ಬಿಟಿಸಿ ಪಡೆದಿದ್ದ ಶ್ರೀಕಿ 2017-18ರಲ್ಲಿ PPPoker ಚೈನಿಸ್ ವೆಬ್ ಸೈಟ್ ಹ್ಯಾಕ್ ಮಾಡಿ ಸುನೀಶ್ ಗೆ 2 ಕೋಟಿ ಲಾಭ ಮಾಡಿಕೊಟ್ಟಿದ್ದ. 2017ರಲ್ಲಿ ಕಡಲಾಚೆಯ ಹೋಸ್ಟಿಂಗ್ CCI ಪನಾಮ ವೆಬ್ ಸೈಟ್ ಹ್ಯಾಕ್ ಮಾಡಿದ್ದ. ರಾಜ್ಯ ಸರ್ಕಾರದ ಇ ಪ್ರೊಕ್ಯೂರ್ ಮೆಂಟ್ ಹ್ಯಾಕ್ ಮಾಡಿ 18 ಕೋಟಿ ಹಾಗೂ ಮತ್ತೊಮ್ಮೆ 28 ಕೋಟಿ ಹ್ಯಾಕ್ ಮಾಡಿದ್ದನಂತೆ. ತನ್ನ 4ನೇ ತರಗತಿಯಲ್ಲೇ ರೂನ್ ಸ್ಟೇಪ್ ಆಟಕ್ಕಾಗಿ ಬೈನರಿ ಕೋಡ್ ಬರೆದ ಪರಿಣಿತ ಶ್ರೀಕಿಯು ರೂನ್ ಸ್ಟೆಪ್ ಗೇಮ‌್ ಹ್ಯಾಕ್ ಮಾಡಿ ಮಿಲಿಯನ್ ಗಟ್ಟಲೆ ಸಂಪಾದಿಸಿದ್ದೆ ಎಂದು ಹೇಳಿಕೊಂಡಿದ್ದಾನೆ.
ಬ್ಲ್ಯಾಕ್ ಹ್ಯಾಟ್ ಗುಂಪು ವಿಭಜನೆಯಾದಾಗ ಒಂದು ತಂಡವನ್ನು ಶ್ರೀಕಿ ಮುನ್ನಡೆಸುತ್ತಿದ್ದ. ಈ ವೇಳೆ ಇಂಟರ್‌ನೆಟ್ ಮೂಲಕ ದೇಶ ವಿದೇಶಗಳಲ್ಲಿ ಅಕ್ರಮ ಚಟುವಟಿಕೆಗಳಿಗಾಗಿ ಸ್ನೇಹಿತರೊಂದಿಗೆ ಹಣ ಸಂಪಾದನೆ ಮಾಡಿದ್ದ. ಆಸ್ಟ್ರೇಲಿಯಾ ಮೂಲದ ಶೇನ್ ಡಪ್ಪಿ ಮೂಲಕ ಪೇಪಲ್ ಅಕೌಂಟ್ ತೆರೆದು ಆ ಮೂಲಕ ರೂನ್ ಸ್ಕೇಪ್ ಗೇಮರ್ ಹ್ಯಾಕ್ ಮಾಡಿದ್ದ. ಈ ಕಾನೂನು ಬಾಹಿರ ರೂನ್ ಸ್ಟೇಪ್ ಗೇಮರ್ ನಲ್ಲಿ ಚಿನ್ನ ಅಥವಾ ಕಾಯಿನ್ ವಿನಿಮಯ ಮಾಡಿ ಪೇಪಲ್ ಅಕೌಂಟ್ ಮೂಲಕ ರೂನ್ ಸ್ಟೇಪ್ ಹ್ಯಾಕ್ ಗೇಮರ್ ಹ್ಯಾಕ್ ಮಾಡಿ ಮಿಲಿಯನ್ ಗಟ್ಟಲೆ ಡಾಲರ್ ವಂಚನೆ ಮಾಡಿದ್ದಾನೆ.
ವಿವಿ ಪುರಂನ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಗಲೇ ಶ್ರೀಕಿ ಮಾದಕವಸ್ತು ಸೇವನೆ, ಕುಡಿತ, ಸಿಗರೇಟ್ ಚಟಗಳನ್ನು ಬೆಳೆಸಿಕೊಂಡಿದ್ದ. ಇದಕ್ಕೆ ಹಣ ಒದಗಿಸುವುದಕ್ಕಾಗಿ ಹ್ಯಾಕಿಂಗ್ ಕಲಿತ ಶ್ರೀಕಿ ಪಿಯುಸಿ ಓದುವಾಗಲೇ ಪೇಪಲ್ ಹಣ ವರ್ಗಾವಣೆ ಆ್ಯಪ್ ಅನ್ನು ಹ್ಯಾಕ್ ಮಾಡಿದ್ದ. ಬಿಟ್ ಕಾಯಿನ್ ಅಷ್ಟೇನು ದುಬಾರಿ ಅಲ್ಲದ ವೇಳೆ ಪಿಯುಸಿಯಲ್ಲಿದ್ದಾಗಲೇ ಶ್ರೀಕಿ ಅದರ ದಂಧೆಯನ್ನು ಅರಿತಿದ್ದ. ಆನ್‌ಲೈನ್ ಹಣ ವರ್ಗಾವಣೆ ಸಂಸ್ಥೆಗಳ ಮೂಲಕ ಡಾರ್ಕ್ ನೆಟ್ ಬಳಸಿ ಬಿಟ್ ಕಾಯಿನ್ ಕದಿಯುತ್ತಿದ್ದ. ಅಲ್ಲಿಂದ ಬಂದ ಎಲ್ಲ ಹಣವನ್ನೂ ತನ್ನ ಐಷಾರಾಮಿ ಜೀವನ, ವ್ಯಸನಗಳಿಗೆ ಬಳಸುತ್ತಿದ್ದ.
ಆಡುಭಾಷೆಯಲ್ಲಿ ಬಿಟ್ ಕಾಯಿನ್ ಅನ್ನು BTC ಎನ್ನುತ್ತಾರೆ. ಈ ವೇಳೆ ಡಾರ್ಕ್ ನೆಟ್ ಮೂಲಕ ರೋಸ್ ಅಲ್ ಬ್ರೆಕ್ ನನ್ನು ಸ್ನೇಹಿತನನ್ನಾಗಿ ಮಾಡಿಕೊಂಡ ಶ್ರೀಕಿ ಮಾದಕ ದ್ರವ್ಯಗಳನ್ನು ಆಮದು ಮಾಡಿಕೊಳ್ಳುತ್ತಿದ್ದ. ನಿರಂತರ ಎರಡು ವರ್ಷಗಳ ಕಾಲ ಹೀಗೆ ಮಾದಕ ವಸ್ತು ಆಮದು ಮಾಡಿಕೊಳ್ಳುತ್ತಿದ್ದ. ಈ ಕಾನೂನು ಬಾಹಿರ ಮಾರ್ಕೆಟ್ ಗೆ ಸಿಲ್ಕ್ ರೋಡ್ 1.0 ಎಂದು ಹೆಸರು ಕೂಡ ಇತ್ತು. ತನ್ನ 17ನೇ ವಯಸ್ಸಿಗೆ ತನ್ನ ಸ್ನೇಹಿತ ಋತ್ವಿಕ್ ನೊಂದಿಗೆ ಮನೆ ಬಿಟ್ಟು ಹಿಮಾಲಯ, ಬದರಿನಾಥಕ್ಕೆ ಹೋಗಿದ್ದ. ಆ ವೇಳೆಗೆ ಶ್ರೀಕಿ ಮೇಲೆ ಸಿದ್ದಾಪುರ ಮತ್ತು ತಿಲಕನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಾಗಿತ್ತು. ತಿಲಕನಗರ ಪೊಲೀಸರು ಶ್ರೀಕಿಯನ್ನು ಮಥುರಾದ ಇಸ್ಕಾನ್ ನಲ್ಲಿ ಪತ್ತೆ ಮಾಡಿ ಬೆಂಗಳೂರಿಗೆ ಕರೆ ತಂದಿದ್ದರು. ಪೋಷಕರು ಮಗನನ್ನು ಸರಿದಾರಿಗೆ ತರುವ ಉದ್ದೇಶದಿಂದ ಉನ್ನತ ವ್ಯಾಸಂಗಕ್ಕಾಗಿ ನೆದರ್ ಲ್ಯಾಂಡ್ಸ್ ಗೆ ಕಳುಹಿಸಿದ್ದರು. ಶ್ರೀಕಿ ಅಲ್ಲಿಯೂ ಇದೇ ವ್ಯವಹಾರ ಮುಂದುವರಿಸಿದ್ದ. ಸದ್ಯ ಶ್ರೀಕಿಯ ಜೀವನ ಸಂಪೂರ್ಣ ರಿವಿಲ್ ಆಗಿದೆ.