ತಮನ್ನಾಗೆ 2ಕೋಟಿ ರೂ. ಬೆಲೆಬಾಳುವ ವಜ್ರದುಂಗುರ ಗಿಫ್ಟ್ ಮಾಡಿದ ಸ್ಟಾರ್ ನಟನ ಪತ್ನಿ
Monday, July 24, 2023
ಹೈದರಾಬಾದ್: ನಟಿ ತಮನ್ನಾ ಭಾಟಿಯಾ ವಿಶ್ವದ ಐದನೇ ಅತಿ ದೊಡ್ಡ ವಜ್ರದ ಒಡತಿಯಾಗಿದ್ದಾರೆ. ಮಿಲ್ಕಿ ಬ್ಯೂಟಿ ತಮಾನ್ನಾ ಅವರು ತಮ್ಮ ಬೆರಳುಗಳಿಗೆ ಬೃಹತ್ ವಜ್ರದಿಂದ ಮಾಡಿದ ಉಂಗುರವನ್ನು ಧರಿಸಿದ್ದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ, ತಮನ್ನಾ ಅವರು ಜೀ ಕರ್ದಾ ಮತ್ತು ಲಸ್ಟ್ ಸ್ಟೋರೀಸ್ 2 ನಲ್ಲಿ ನಟಿಸಿದರು. ಮಿಲ್ಕಿ ಬ್ಯೂಟಿ ಬೋಲ್ಡ್ ಸೀನ್ ಗಳಲ್ಲಿ ನಟಿಸಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು. ಇದೀಗ ತಮನ್ನಾ ಬಗ್ಗೆ ಒಂದು ಕುತೂಹಲಕಾರಿ ಸಂಗತಿ ಹೊರಬಿದ್ದಿದೆ. ಅದೇನೆಂದರೆ. ವಿಶ್ವದ ಐದನೇ ಅತಿ ದೊಡ್ಡ ವಜ್ರ ತಮನ್ನಾ ಅವರ ಬಳಿ ಇದೆ ಎನ್ನಲಾಗಿದೆ.
ಈ ವಜ್ರದ ಉಂಗುರದ ಬೆಲೆ ಬರೋಬ್ಬರಿ 2 ಕೋಟಿ ರೂಪಾಯಿ. ವಜ್ರವನ್ನು ಅತ್ಯಂತ ಸುಂದರವಾದ ಆಕಾರದಲ್ಲಿ ತಯಾರಿಸಿರುವುದೇ ಅದರ ಬೆಲೆ ಇಷ್ಟೊಂದು ಹೆಚ್ಚಾಗಲು ಕಾರಣ. ಈ ಉಂಗುರವನ್ನು ಸೂಪರ್ ಸ್ಟಾರ್ ರಾಮ್ ಚರಣ್ ಪತ್ನಿ ಉಪಾಸನಾ ಕಾಮಿನೇನಿ ಅವರು ತಮನ್ನಾಗೆ ಉಡುಗೊರೆಯಾಗಿ ನೀಡಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ತಮನ್ನಾ ಪವರ್ ಫುಲ್ ಪಾತ್ರ ನಿರ್ವಹಿಸಿದ್ದಾರೆ. ಈ ಸಿನಿಮಾದಲ್ಲಿ ತಮನ್ನಾ ಅಭಿನಯವೂ ಮನಮೋಹಕವಾಗಿತ್ತು. ಆದ್ದರಿಂದ ಆಕೆಯ ಮೇಲಿನ ಅಭಿಮಾನದಿಂದ ಈ ವಜ್ರದ ಉಂಗುರವನ್ನು ಉಪಾಸನಾ ಅವರು ಉಡುಗೊರೆಯಾಗಿ ನೀಡಿದ್ದಾರೆ.