-->
ಮಂಗಳೂರಿನ ಯುವತಿ ಶಮಾ ವಾಜಿದ್ 2024 ರ ಇಂಟರ್ ನ್ಯಾಶನಲ್ ಯೂನಿವರ್ಸ್ ಸ್ಪರ್ಧೆಗೆ ಆಯ್ಕೆ

ಮಂಗಳೂರಿನ ಯುವತಿ ಶಮಾ ವಾಜಿದ್ 2024 ರ ಇಂಟರ್ ನ್ಯಾಶನಲ್ ಯೂನಿವರ್ಸ್ ಸ್ಪರ್ಧೆಗೆ ಆಯ್ಕೆ




ಮಂಗಳೂರು:  ಮಂಗಳೂರಿನ ಯುವತಿ ಶಮಾ ವಾಜಿದ್ ಪ್ರತಿಷ್ಠಿತ ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್‌ನ್ಯಾಶನಲ್ ಯೂನಿವರ್ಸ್ 2023 ಪ್ರಶಸ್ತಿಯನ್ನು ಗೆದ್ದು 2024 ರಲ್ಲಿ ನಡೆಯುವ ಗ್ಲೋಬಲ್ ಮಿಸೆಸ್ ಯೂನಿವರ್ಸ್ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.


ನವದೆಹಲಿಯಲ್ಲಿ ಗ್ಲೋಬಲ್ ಇಂಡಿಯಾ ಎಂಟರ್‌ಟೈನ್‌ಮೆಂಟ್‌ ಪ್ರೊಡಕ್ಷನ್ಸ್ ನಡೆಸಿದ ಸ್ಪರ್ಧೆಯಲ್ಲಿ ಮಂಗಳೂರಿನ ಶಮಾ ವಾಜಿದ್ ಅವರು ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್‌ನ್ಯಾಶನಲ್‌ ಯೂನಿವರ್ಸ್ 2023 ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.


 ದೇಶದ 22 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸ್ಪರ್ಧೆಯ ಆಡಿಷನ್‌ಗಳು  ನಡೆದಿದ್ದವು. ಅಲ್ಲಿ ಸಾವಿರಾರು ಪ್ರತಿಭಾವಂತ ಮಹಿಳೆಯರು ಆಡಿಷನ್ ಗಳನ್ನು ಮಾಡಿದ್ದರು ಮತ್ತು ಶಮಾ ವಾಜಿದ್ ಅವರು ನವ ದೆಹಲಿಯಲ್ಲಿ ಗ್ರಾಂಡ್ ಫಿನಾಲೆಗೆ ತಲುಪಿದ ಟಾಪ್ 40 ರಲ್ಲಿ ಒಬ್ಬರಾಗಿದ್ದು, ಎಲ್ಲಾ ಫೈನಲಿಸ್ಟ್‌ಗಳು 5 ದಿನಗಳ ಕಾಲ ಮಾರ್ಗದರ್ಶಕರಿಂದ ಕಠಿಣ ತರಬೇತಿಯನ್ನು ಪಡೆದಿದ್ದರು. ಕ್ಯಾಟ್‌ವಾಕ್, ಗ್ರೂಮಿಂಗ್, ಕೊರಿಯೋಗ್ರಫಿ, ಇಮೇಜ್ ಕನ್ಸಲ್ಟಿಂಗ್, ಆತಂಕ ನಿರ್ವಹಣೆ, ದೈಹಿಕ ಫಿಟ್‌ನೆಸ್ ಇತ್ಯಾದಿಗಳ ಉತ್ತಮ ಅಂಶಗಳಲ್ಲಿ ಅವರಿಗೆ ತರಬೇತಿಯನ್ನು ನೀಡಲಾಗಿತ್ತು. ಎಲ್ಲಾ 5 ದಿನಗಳಲ್ಲಿ ಸ್ಪರ್ಧಿಗಳನ್ನು ನಿರ್ಣಯಿಸಲಾಯಿತು, ಅಲ್ಲಿ ಅವರು ಪ್ರತಿಷ್ಠಿತ ಫ್ಯಾಷನ್ ಡಿಸೈನರ್‌ಗಳೊಂದಿಗೆ ಹಲವಾರು ಫೋಟೋಶೂಟ್‌ಗಳನ್ನು ಮಾಡಿಸಲಾಗಿತ್ತು.


ಕರ್ನಾಟಕವನ್ನು ಪ್ರತಿನಿಧಿಸಿದ ಶಾಮಾ ವಾಜಿದ್  ಅವರು  ಫೂಲ್ ರೌಂಡ್, ಎಕ್ನಿಕ್ ರೌಂಡ್, ಟ್ಯಾಲೆಂಟ್ ರೌಂಡ್ ಮತ್ತು ಫಾರ್ಮಲ್ ಸುತ್ತುಗಳಂತಹ ವಿವಿಧ ಸುತ್ತುಗಳಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದರು. ಬಳಿಕ ಅವರು ಅಗ್ರ 10 ಫೈನಲಿಸ್ಟ್ ಗಳಲ್ಲಿ ಸ್ಥಾನವನ್ನು ಪಡೆದರು ಮತ್ತು ಅಂತಿಮವಾಗಿ ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್ನ್ಯಾಷನಲ್ ಯೂನಿವರ್ಸ್ 2023 ರ ಕಿರೀಟವನ್ನು ಬಾಲಿವುಡ್ ಸೆಲೆಬ್ರಿಟಿ ಮಲೈಕಾ ಅರೋರಾ ಅವರಿಂದ ಪಡೆದುಕೊಂಡರು.


ಮಾಜಿ ಮಿಸೆಸ್ ಇಂಡಿಯಾ 2001ರ  ಅದಿತಿ ಗೋವಿತ್ರಿಕ‌ ಅವರ ಇತರ ತೀರ್ಪುಗಾರರ ಸದಸ್ಯರಾದ ಲೋಕೇಶ್ ಶರ್ಮಾ, ಕೀರ್ತಿ ಮಿಶ್ರಾ ನಾರಂಗ್, ಅಲ್ಲೀ ಶರ್ಮಾ ಸೆಲೆಬ್ರಿಟಿ ಫಿಟ್ಟೆಸ್ ತರಬೇತುದಾರರಾದ ಮನೀಶಾ ಸಿಂಗ್, ರೋಹಿತ್ ಜೆ ಕೆ  ಸೇರಿದಂತೆ ಅನೇಕರು ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಿದ್ದರು.




ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್ನ್ಯಾಷನಲ್ ಯೂನಿವರ್ಸ್ 2023 ಕಿರೀಟವನ್ನು ಮುಡಿಗೇರಿಸಿದ ಶಮಾ ವಾಜಿದ್ ಇದೀಗ ಜಾಗತಿಕ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.  2024 ರಲ್ಲಿ ಗ್ಲೋಬಲ್ ಮಿಸೆಸ್ ಯುನಿವರ್ಸ್ ನಡೆಯಲಿದ್ದು,ಈ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್ನ್ಯಾಷನಲ್ ಯೂನಿವರ್ಸ್ 2023 ಕಿರೀಟ ಮುಡಿಗೇರಿಸಿದ ಶಾಮ ವಾಜಿದ್ ಗೆ 13 ತಿಂಗಳ ಗಂಡು ಮಗು ಇದೆ. ಈ ಸ್ಪರ್ಧೆಯು ವಿವಾಹಿತ ಮಹಿಳೆಯರಿಗೆ ಮಾತ್ರ ಇದೆ. ಪುಟ್ಟ ಮಗುವಿನ‌ ಲಾಲನೆ ಮಾಡುತ್ತಾ ಅವರು ಈ ಸ್ಪರ್ಧೆಯಲ್ಲಿ ವಿಜಯಿಯಾಗಿದ್ದಾರೆ.



ಶಾಮ ವಾಜಿದ್ ಮುಸ್ಲಿಂ ಸಮುದಾಯದಿಂದ ಬಂದವರು. ಮುಸ್ಲಿಂ ಸಮುದಾಯದಿಂದ ಫ್ಯಾಶನ್ ಲೋಕಕ್ಕೆ ಕಾಲಿಡುವುದು ತೀರಾ ವಿರಳವಾಗಿದೆ. ಇಂತಹದರಲ್ಲಿ ಶಾಮ ವಾಜಿದ್ ಕುಟುಂಬಿಕರ ಪ್ರೋತ್ಸಾಹದೊಂದಿಗೆ ಫ್ಯಾಶನ್ ಲೋಕದಲ್ಲಿ ಸಾಧನೆಯನ್ನು ಮಾಡಿದ್ದಾರೆ.ಶಮಾ ಅವರು ಶ್ರೀನಿವಾಸ ಆರ್ಕಿಟೆಕ್ಟ್ ಕಾಲೇಜಿನಲ್ಲಿ ಪ್ರೊಪೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ



Shama vazid from Mangalore wins the title of Global Mrs India International Universe 2023.

New Delhi: Shama vazid from Mangalore wins the title of Global Mrs. India International Universe 2023 in pageant recently conducted by Global India Entertainment Productions in Delhi.

The auditions for the pageant was held in more than 22 states of the country where thousands of talented women auditioned and Shama was one of the top 40 that made it to the Grand finale in New Delhi.

All the finalists underwent rigorous training by trained mentors for 5 days. They were trained in finer aspects of catwalk, grooming, choreography, image consulting, anxiety management, physical fitness, etc. The contestants were judged on all 5 days where they had to do several photoshoots with reputed fashion designers and a question answer round before declaring the winners

Shama had to perform her best in various rounds like regional round (representing Karnataka), pool round, Ethnic round, talent round and formal round after which she made It to the top 10 finalists and was eventually crowned Global Mrs. India International universe 2023 by none other than Bollywood celebrity Malaika Arora.

The grand jury panel had several well-known names from Bollywood industry like former Mrs India 2001, Aditi Govitrikar, along with her other jury members -Lokesh Sharma, Kirti Mishra Narang, Allie Sharma, celebrity fitness trainers Manisha Singh and Rohit jay kay and many more.

Ads on article

Advertise in articles 1

advertising articles 2

Advertise under the article