ಆ.24ರಂದು ನಟಿ ಹರ್ಷಿಕಾ ಪೂಣಚ್ಚ - ನಟ ಭುವನ್ ಪೊನ್ನಣ್ಣ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
Monday, July 3, 2023
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಛ ಹಾಗೂ ನಟ ಭುವನ್ ಪೊನ್ನಣ್ಣ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಆಗಸ್ಟ್ 24ರಂದು ಕೊಡವ ಸಂಪ್ರದಾಯದಂತೆ ಇವರ ವಿವಾಹ ನೆರವೇರಲಿದೆಯಂತೆ. ಕೊಡವ ಭಾಷೆಯಲ್ಲಿ ಮುದ್ರಿಸಲಾಗಿರುವ ಇವರ ವಿವಾಹ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹರ್ಷಿಕಾ ಹಾಗೂ ಭುವನ್ ಕೊರೊನಾ ಕಾಲದಲ್ಲಿ ಜೊತೆಯಾಗಿ ಸಾಕಷ್ಟು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡು ಅನೇಕರಿಗೆ ನೆರವು ನೀಡಿದ್ದರು. ಇವರ ಕಾರ್ಯಕ್ಕೆ ಶ್ಲಾಘನೆ ಕೂಡಾ ವ್ಯಕ್ತವಾಗಿತ್ತು. ಈಗ ಈ ಜೋಡಿ ಹಸೆಮಣೆ ಏರುತ್ತಿದೆ.