27ರ ಐಐಎಂ ವಿದ್ಯಾರ್ಥಿ ಹೃದಯಾಘಾತದಿಂದ ಸಾವು
Thursday, July 27, 2023
ಬೆಂಗಳೂರು: ಸಣ್ಣ ವಯಸ್ಸಿನವರೇ ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಪ್ರಕರಣ ಇನ್ನೂ ಮುಂದುವರಿದಿದೆ. ಇದೀಗ ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ 27 ವರ್ಷದ ಯುವಕನೋರ್ವನು ಹೃದಯಾಘಾತದಿಂದ ಸಾವಿಗೀಡಾದ ಪ್ರಕರಣ ನಡೆದಿದೆ.
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್(ಐಐಎಂ)ನ ವಿದ್ಯಾರ್ಥಿ ಆಯುಷ್ ಗುಪ್ತ ಹೃದಯಾಘಾತದಿಂದ ಮೃತಪಟ್ಟವರು. ಐಐಎಂಬಿಯಲ್ಲಿ ಪೋಸ್ಟ್ ಗ್ರ್ಯಾಜುವೇಟ್ ಪ್ರೋಗ್ರಾಮ್ ಇನ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡುತ್ತಿದ್ದ ಆಯುಷ್ ರವಿವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ನಮ್ಮ ಎರಡನೇ ವರ್ಷದ ಪಿಜಿಪಿ ವಿದ್ಯಾರ್ಥಿ ಆಯುಷ್ ಗುಪ್ತ ಸಾವಿಗೆ ನಾವು ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದೇವೆ. ಅವರು ಈ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆಯುಷ್ ಪಿಜಿಪಿಯ ಸ್ಟುಡೆಂಟ್ ಅಲುಮ್ನಿ ಕಮಿಟಿಯ ಸೀನಿಯರ್ ಕೋಆರ್ಡಿನೇಟರ್ ಆಗಿದ್ದರು ಎಂದು ಐಐಎಂಬಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಟ್ವೀಟ್ ಮಾಡಲಾಗಿದೆ. ಇದಕ್ಕೆ ಅಪಾರ ಪ್ರತಿಕ್ರಿಯೆ ಬಂದಿದೆ.