-->
ಜು. 30 ರಂದು ದ.ಕ ಮತ್ತು ಉಡುಪಿ ಜಿಲ್ಲೆಯ ಸಮಸ್ತ ಪರಿಶಿಷ್ಟರ ಮಹಾಸಂಗಮ

ಜು. 30 ರಂದು ದ.ಕ ಮತ್ತು ಉಡುಪಿ ಜಿಲ್ಲೆಯ ಸಮಸ್ತ ಪರಿಶಿಷ್ಟರ ಮಹಾಸಂಗಮ



ಮಂಗಳೂರು; ಜುಲಾಯಿ 30ರಂದು ಮಂಗಳೂರಿನ ಉರ್ವಸ್ಟೋರ್‌ನಲ್ಲಿರುವ ಅಂಬೇಡ್ಕರ್ ಭವನದಲ್ಲಿ ದ.ಕ ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಗಳ ಪ.ಜಾತಿ/ಪ.ಪಂಗಡಗಳ , ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಧ್ಯೆ ಸಾಮರಸ್ಯವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಮತ್ತು ಪರಿಶಿಷ್ಟ ಸಮುದಾಯವನ್ನು ಕಾಡುತ್ತಿರುವ ಹಲವಾರು ಮೂಲಭೂತ ಸಮಸ್ಯೆಗಳ ಈಡೇರಿಕೆಗಾಗಿ ಒತ್ತಾಯಿಸಿ ಜಿಲ್ಲೆಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ದ.ಕ ಮತ್ತು ಉಡುಪಿ ಜಿಲ್ಲೆಯ ಸಮಸ್ತ ಪರಿಶಿಷ್ಟರ ಮಹಾಸಂಗಮ ಕಾರ್ಯಕ್ರಮವು ಜುಲಾಯಿ 30 ಭಾನುವಾರ ಬೆಳಗ್ಗೆ 10.00ಗಂಟೆಯಿಂದ ಮಂಗಳೂರಿನ ಉರ್ವಸ್ಟೋರ್‌ನಲ್ಲಿರುವ ಡಾ| ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಸಂಘಟನೆಯ ಮುಖಂಡ ಎಂ ದೇವದಾಸ್ ಹೇಳಿದರು.


ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಉಭಯ ಜಿಲ್ಲೆಯಲ್ಲಿ ಪರಿಶಿಷ್ಟ ಸಮುದಾಯಕ್ಕಾಗಿ ಮೀಸಲಾಗಿರಿಸಿದ ಡಿ.ಸಿ. ಮಂಜೂರಾತಿಗಾಗಿ ಸರಕಾರಕ್ಕೆ ಹಲವಾರು ಮನವಿ ಸಲ್ಲಿಸಿ ಚಳುವಳಿಗಳನ್ನು ನಡೆಸಿದರೂ ಸರಕಾರವು ಮನ್ನಾ ಭೂಮಿಯ ಈವರೆಗೆ ನಮ್ಮ ಬೇಡಿಕೆಗೆ ಸ್ಪಂದಿಸಿ ಭೂಮಂಜೂರಾತಿ ನಿಯಮಾವಳಿಗೆ ತಿದ್ದುಪಡಿಗೊಳಿಸಿ ಅರ್ಹ ಅರ್ಜಿದಾರರಿಗೆ ಭೂಮಿ ಮಂಜೂರಾತಿ ಮಾಡುವಲ್ಲಿ ವಿಫಲಗೊಂಡಿದೆ. ನಗರದ ಜ್ಯೋತಿ ವೃತ್ತವನ್ನು ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡಲು ಸಂಘಟನೆಗಳು ಒತ್ತಾಯಿಸುತ್ತಾ ಬಂದರೂ ಜಿಲ್ಲಾಡಳಿತವು ನಿರ್ಲಕ್ಷ್ಯ ವಹಿಸುತ್ತಾ ಬಂದಿದೆ. ಪರಿಶಿಷ್ಟ ಸಮುದಾಯದ ನಿರುದ್ಯೋಗಿ ಯುವಜನರಿಗೆ ಸ್ವ ಉದ್ಯೋಗ ಮಾಡಲು ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ನೀಡುವ ಅನುದಾನವನ್ನು ಗಣನೀಯ ಕಡಿತಗೊಳಿಸಿರುವುದರಿಂದ ಫಲಾನುಭವಿಗಳಿಗೆ ಸೌಲಭ್ಯ ದೊರಕದೆ ಅವಕಾಶ ವಂಚಿತರಾಗುತ್ತಿದ್ದಾರೆ. ಪರಿಶಿಷ್ಟರ ಹೆಸರಿನಲ್ಲಿ ಉ.ಕನ್ನಡ ಜಿಲ್ಲೆಯ ಪ್ರವರ್ಗ 1 ರಲ್ಲಿನ ಮೀನುಗಾರ ಮೊಗೇರರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ವಂಚಿಸಿರುತ್ತಾರೆ. ರಾಜ್ಯ ಸರಕಾರವು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ಹೀಗಾಗಿ ಮೀಸಲಾತಿಯ ದುರುಪಯೋಗವನ್ನು ತಡೆಗಟ್ಟಲು ಸಾಧ್ಯವಾಗದೆ ಪರಿಶಿಷ್ಟರಿಗೆ ಇದರಿಂದಾಗಿ ಮಹಾ ಅನ್ಯಾಯವಾಗಿರುತ್ತದೆ. ಹೀಗೆ ಹತ್ತಾರು ಪ್ರಮುಖ ಬೇಡಿಕೆಗಳ ಬಗ್ಗೆ ಸಮಸ್ತ ಪರಿಶಿಷ್ಟ ಸಮುದಾಯದ ಪರವಾಗಿ ಸಭೆಯಲ್ಲಿ ಸರಕಾರಕ್ಕೆ ಹಕ್ಕೊತ್ತಾಯ ಸಲ್ಲಿಸಲಾಗುವುದು ಎಂದರು.


ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಮಾಜಿ ಉಸ್ತುವಾರಿ ಸಚಿವರಾದ ಮಾನ್ಯ ಬಿ.ರಮಾನಾಥ ರೈ ಇವರು ಸಮಾರಂಭವನ್ನು ಉದ್ಘಾಟಿಸಲಿರುವರು. ಸಮನ್ವಯ ಸಮಿತಿಯ ಪ್ರಧಾನ ಸಂಚಾಲಕರಾದ ಎಮ್.ದೇವದಾಸ್ ಇವರು ಅಧ್ಯಕ್ಷತೆ ವಹಿಸಅರುವರು. ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಂಚಾಡಿ ಇವರು ಕಾರ್ಯಕ್ರಮದ ಪ್ರಸ್ತಾವನೆಯನ್ನು ಮಾಡಲಿದ್ದಾರೆ. ವಿಧಾನ ಸಭೆಯ ಸ್ವೀಕ‌ ಸನ್ಮಾನ್ಯ ಯು.ಟಿ ಖಾದರ್ ಫರೀದ್,  ಮಾಜಿ ಉಸ್ತುವಾರಿ ಸಚಿವರಾದ ರಮಾನಾಥ ರೈ ಸೇರಿದಂತೆ ಪ್ರಮುಖ ಗಣ್ಯರು ಹಾಗೂ ಪ.ಜಾತಿ ಮತ್ತು ಪ.ಪಂಗಡದ ಸಂಘ ಸಂಸ್ಥೆಗಳ ಮುಖಂಡರಿಗೆ ಸನ್ಮಾನ ಹಾಗೂ ಗೌರವಾರ್ಪಣೆ ನಡೆಯಲಿದೆ. ಖ್ಯಾತ ಕೊಳಲು ಮತ್ತು ಸ್ಯಾಕ್ಟೋಫೋನ್ ವಾದಕ ಪಾಂಡುರಂಗ ಪಡ್ಡಮೆ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.

ಸಮಾರಂಭದಲ್ಲಿ ಸಮಾಜ ಕಲ್ಯಾಣ ಸಚಿವರಾದ ಡಾ| ಹೆಚ್.ಸಿ ಮಹದೇವಪ್ಪ, ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ‌, ಮಾಜಿ ಸಚಿವರಾದ ಗಂಗಾಧರ ಗೌಡ, ಅಭಯಚಂದ್ರ ಜೈನ್, ಪುತ್ತೂರು ಕ್ಷೇತ್ರದ ಶಾಸಕರಾದ ಅಶೋಕ್‌ ಕುಮಾರ್ ರೈ, ಜಿಲ್ಲಾಧಿಕಾರಿ ಮುಲೈ ಮುಹಿಲನ್, ನಗರ ಪಾಲಿಕೆ ಆಯುಕ್ತರಾದ ಆನಂದ ಸಿ.ಎಲ್. ಕಾರ್ನಾಡು ಮುಕ್ತ ಸರಕಾರಿ ಪದವಿ ಪೂರ್ವ ಕಾಲೇಜು ಇದರ ಪ್ರಾಂಶುಪಾಲರಾದ ಡಾ| ವಾಸುದೇವ ಬೆಳೆ, ತುಳು ಪರಿಷತ್ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ತಾರನಾಥ ಗಟ್ಟಿ ಕಾಪಿಕಾಡು, ದ.ಕ ಜಿಲ್ಲಾ ದಂತ ಸಂಘಟನೆಗಳ ಸಮನ್ವಯ ಸಮಿತಿಯ ಉಪ ಪ್ರಧಾನ ಸಂಚಾಲಕ ಶ್ರೀ ರಮೇಶ್ ಕೋಟ್ಯಾನ್, ದಂತ ಸಂಘಟನೆಗಳ ಐಕ್ಯತಾ ಸಮಿತಿ ಉಡುಪಿ ಜಿಲ್ಲೆಯ ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯೂರು, ದ.ಕ ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಜಿಲ್ಲಾ ಮಹಿಳಾ ಸಂಚಾಲಕಿ ಶ್ರೀಮತಿ ಸರೋಜಿನಿ ಬಂಟ್ವಾಳ, ಕಾಂಗ್ರೆಸ್ ನಾಯಕರಾದ ಇನಾಯತ್ ಅಲಿ, ರಕ್ಷಿತ್ ಶಿವರಾಮ್‌, ಜೆ.ಆರ್ ಲೋಬೋ, ಕೃಷ್ಣಪ್ಪ ಜಿ, ಮಿಥುನ್ ರೈ, ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

 ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರೊ.ಡಾ। ಅಭಯ್ ಕುಮಾರ್, ಜಿಲ್ಲಾ ಕಾಂಗ್ರೆಸ್ SC/ST ಘಟಕದ ಅಧ್ಯಕ್ಷ ಶ್ರೀ ಶೇಖರ್ ಕುಕ್ಕೇಡಿ. JDS ರಾಜ್ಯ ವಕ್ತಾರ ಶ್ರೀ ಎಂ.ಚಿ ಸದಾಶಿವ, CPI(M) ಜಿಲ್ಲಾ ಕಾರ್ಯದರ್ಶಿ ಶ್ರೀ ಕೆ. ಯಾದವ್ ಶೆಟ್ಟಿ, DYFI ರಾಜಾ ದಕ ಶ್ರೀ ಮುನೀರ್ ಕಾಟಪಳ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ ಎಂದರು.



ಪರಿಶಿಷ್ಟ ಸಮುದಾಯದ ವಿದ್ಯಾರ್ಥಿ, ಯುವಜನರು, ಡಿ.ಸಿ ಮನ್ನಾ ಭೂಮಿಗಾಗಿ ಅರ್ಜಿ ಸಲ್ಲಿಸಿದವರು. ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಮನ್ವಯ ಸಮಿತಿಯ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ. 

ಪತ್ರಿಕಾಗೋಷ್ಠಿಯಲ್ಲಿ ಸಮನ್ವಯ ಸಮಿತಿಯ ನಾಯಕರಾದ ಎಂ.ದೇವದಾಸ್, ರಮೇಶ್ ಕೋಟ್ಯಾನ್, ಅಶೋಕ್ ಕೊಂಚಾಡಿ, ರಘು ಕೆ ಎಕ್ಕಾರ್, ಸುಧಾಕರ್ ಬೋಳೂರು, ಎಸ್.ಪಿ ಆನಂದ, ಶೇಖರ್ ಚಿಲಿಂಬಿ, ಗಿರೀಶ್ ಕುಮಾರ್ ಯು.ಕೆ, ಸೇಸಪ್ಪ ಬೆದ್ರಕಾಡ್, ಚಂದ್ರಕುಮಾರ್, ಸರೋಜಿನಿ ಬಂಟ್ವಾಳ, ದಿನೇಶ್ ಮೂಳೂರು, ರಾಮದಾಸ್ ಮೇರೆಮಜಲು ಹಾಗೂ ವಿವಿಧ ಪರಿಶಿಷ್ಟ ಜಾತಿಯ ಸಂಘ ಸಂಸ್ಥೆಗಳ ಮುಖಂಡರಾದ ಸುಂದರ ಮೇರ, ಪ್ರಶಾಂತ್ ಕಾಟಿಪಳ್ಳ, ನವೀನ್‌ಚಂದ್ರ ಅತ್ತಾವರ, ವಿಷ್ಣುಪ್ರಸಾದ್ ಕುಕ್ಕಾಜೆ, ಭಾಸ್ಕರ ಬಂಗೇರ, ಪದ್ಮನಾಭ ಮೂಡಬಿದ್ರೆ, ಸುಂದರ ಬೆಳುವಾಯಿ, ಮಂಗಳೂರು ವಿ.ವಿ ವಿದ್ಯಾರ್ಥಿ ಸಂಘದ ನಾಯಕರಾದ ಮೋಹನ್ ಕುಮಾರ್ ಮತ್ತು ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article