ಪ್ರವಾಹಕ್ಕೆ 400 ಕಾರುಗಳ ಮುಳುಗಡೆ- VIDEO ನೋಡಿ
Wednesday, July 26, 2023
ಹೊಸದಿಲ್ಲಿ: ಭಾರಿ ಮಳೆ ಹಾಗೂ ಹಿಂಡನ್ ನದಿಯಲ್ಲಿ ಉಂಟಾದ ಪ್ರವಾಹದಿಂದ ದಿಲ್ಲಿ ಹೊರ ವಲಯದ ನೊಯ್ಡಾ ಬಳಿ 400 ಕಾರುಗಳು ನೀರಿನಲ್ಲಿ ಮುಳುಗಡೆಯಾಗಿವೆ ಎಂದು ತಿಳಿದುಬಂದಿದೆ.
ನೊಯ್ಡಾ ಎಕೊಟೆಕ್-3 ಪ್ರದೇಶದಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ಹಿಂಡನ್ ನದಿ ನೀರಿನಲ್ಲಿ ನೂರಾರು ಕಾರುಗಳು ಮುಳುಗಿರುವ ಹಾಗೂ ತೇಲುತ್ತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ಎಕೊಟೆಕ್ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 500 ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ
ಹಿಂಡನ್ ನದಿ ನೀರಿನ ಮಟ್ಟ ಮತ್ತಷ್ಟು ಹೆಚ್ಚುವ ಅಪಾಯವಿದೆ. ಹೀಗಾಗಿ ಗೌತಮ್ ಬುದ್ಧ ನಗರದ ತಗ್ಗುಪ್ರದೇಶದಲ್ಲಿರುವ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ದಿಲ್ಲಿ ಸರಕಾರ ಸೂಚನೆಯನ್ನು ನೀಡಿದೆ.
ಕಳೆದ ವಾರ ಯಮುನಾ ನದಿ ಪ್ರವಾಹದಲ್ಲಿ ಹೈರಾಣಾಗಿದ್ದ ದಿಲ್ಲಿ ಜನತೆಗೆ ಹಿಂಡನ್ ನದಿ ನೀರಿನ ಮಟ್ಟ 205.4 ಮೀಟರ್‌ಗೆ ಏರಿಕೆಯಾಗಿರುವುದು ಮತ್ತಷ್ಟು ಮತ್ತಷ್ಟು ಆತಂಕ ತಂದಿಟ್ಟಿದೆ.