-->
ಲಂಚ ಪಡೆಯುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಂದಾಯ ಅಧಿಕಾರಿ‌ 5000 ರೂ‌. ನೋಟುಗಳನ್ನು ಗಬಗಬನೆ ನುಂಗಿದ

ಲಂಚ ಪಡೆಯುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಂದಾಯ ಅಧಿಕಾರಿ‌ 5000 ರೂ‌. ನೋಟುಗಳನ್ನು ಗಬಗಬನೆ ನುಂಗಿದ

ಭೋಪಾಲ್: ಮಧ್ಯಪ್ರದೇಶದ ಕಂದಾಯ ಅಧಿಕಾರಿಯೊಬ್ಬನು ಲಂಚ ಪಡೆಯುತ್ತಿರುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಈ ವೇಳೆ 5ಸಾವಿರ ರೂ.  ಹಣವನ್ನು ಅಕ್ಷರಶಃ ಜಗಿದು ತಿಂದಿದ್ದಾನೆ.

ಮಧ್ಯಪ್ರದೇಶದ ಕಟ್ಟಿಯಲ್ಲಿ ಜಬಲ್ಪುರ ಲೋಕಾಯುಕ್ತ ವಿಶೇಷ ಪೊಲೀಸ್ ಘಟಕವು (ಎಸ್‌ಪಿಇ) ಲಂಚ ತೆಗೆದುಕೊಳ್ಳುತ್ತಿದ್ದ ಕಂದಾಯ ಅಧಿಕಾರಿ ಗಜೇಂದ್ರ ಸಿಂಗ್ ನನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಈ ವೇಳೆ ತಕ್ಷಣ ಆತ ಕರೆನ್ಸಿ ನೋಟುಗಳನ್ನು ಬಾಯಿಗೆ ತುರುಕಿಕೊಂಡು ಜಗಿದು ಗಬಗಬನೆ ನುಂಗಿದ್ದಾನೆ.‌ ಜಮೀನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗಜೇಂದ್ರ ಸಿಂಗ್, ದೂರುದಾರ ಚಂದನ್ ಸಿಂಗ್ ಲೋಧಿಯಿಂದ 5 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದಾನೆ. ಈ ಬಗ್ಗೆ ಲೋಧಿ, ಜಬಲ್ಪುರ ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದರು.

ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರಿಗೆ ಈ ದೂರಿನಲ್ಲಿ ಸತ್ಯಾಂಶ ಇರುವುದು ಖಚಿತವಾಗಿತ್ತು. ಜಬಲ್ಪುರ ಲೋಕಾಯುಕ್ತರ ತಂಡವೊಂದು ಬಿಲ್ಲಾರಿಗೆ ತೆರಳಿ, ಗಜೇಂದ್ರ ಸಿಂಗ್‌ರನ್ನು ಸಾಕ್ಷಿ ಸಮೇತ ಹಿಡಿಯಲು ಯೋಜನೆ ರೂಪಿಸಿದ್ದರು. ತಮ್ಮ ಖಾಸಗಿ ಕಚೇರಿಯಲ್ಲಿ 5000 ರೂ. ಲಂಚ ಪಡೆದುಕೊಳ್ಳುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಂಧಿಸಿದ ಕೂಡಲೇ ಗಜೇಂದ್ರ ಸಿಂಗ್, ಲಂಚದ ಹಣವನ್ನು ಬಾಯಿಗೆ ತುರುಕಿಸಿಕೊಂಡು ನುಂಗಿಬಿಟ್ಟಿದ್ದಾನೆ. ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ತರಲಾಯಿತು. ಸಾಕಷ್ಟು ಪ್ರಯತ್ನದ ಬಳಿಕ ಕೊನೆಗೂ ಆತನ ಬಾಯಿಯಿಂದ ಕರೆನ್ಸಿ ನೋಟುಗಳ ಮುದ್ದೆಯನ್ನು ಹೊರಗೆ ಕಕ್ಕಿಸುವಲ್ಲಿ ಪೊಲೀಸರು ಮತ್ತು ವೈದ್ಯರು ಸಫಲರಾಗಿದ್ದಾರೆ.‌ ಇದೀಗ ಗಜೇಂದ್ರ ಸಿಂಗ್ ವಿರುದ್ಧ ಲಂಚ ತೆಗೆದುಕೊಂಡ ಆರೋಪದಡಿ ಪ್ರಕರಣ ದಾಖಲಾಗಿದೆ. 

Ads on article

Advertise in articles 1

advertising articles 2

Advertise under the article