5 ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣ- ಕ್ಷಮಿಸು ಮಗಳೇ ಎಂದ ಪೊಲೀಸರು
Monday, July 31, 2023
ತಿರುವನಂತಪುರಂ: ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ ಐದು ವರ್ಷದ ಬಾಲಕಿಯ ಶವ ಗೋಣಿ ಚೀಲದಲ್ಲಿ ಪತ್ತೆಯಾಗಿದೆ. ಬಾಲಕಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ ಆರೋಪದ ಮೇಲೆ ಅಸ್ಪಾಕ್ ಅಸ್ಲಾಮ್ ಎಂಬಾತನನ್ನು ಬಂಧಿ ಸಲಾಗಿದೆ.
ಈತ ಬಿಹಾರ ಮೂಲದ ವ್ಯಕ್ತಿ. ಈ ಘಟನೆ ಕುರಿತು ಖೇದ ವ್ಯಕ್ತಪಡಿಸಿರುವ ಪೊಲೀಸ್ ಇಲಾಖೆ 'ಕ್ಷಮಿಸು ಮಗಳೇ' ಎಂದು ಟ್ವಿಟ್ ಮಾಡಿದೆ. ಬಾಲಕಿಯನ್ನು ಸುರಕ್ಷಿತವಾಗಿ ಕರೆತರುವ ನಮ್ಮ ಹಾಗೂ ಪೋಷಕರ ಪ್ರಯತ್ನ ಯಶಸ್ವಿಯಾಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದೆ.
''ಬಾಲಕಿ ಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಿದ ಅಸ್ಟಾಕ್‌ನಂಥವರು ಪಶುಗಳಿದ್ದಂತೆ. ಇಂತಹವರನ್ನು ಮನುಷ್ಯರು ಎಂದು ಕರೆಯಲು ಕೂಡ ಆಗದಷ್ಟು ಅನರ್ಹರು. ಈತನ ವಿರುದ್ಧ ಕಠಿಣ ಕ್ರಮ ಜರುಗಿ ಸಬೇಕು. ಎಲ್ಲಿಯೇ ಆಗಲಿ ಮಹಿಳೆಯರ ವಿರುದ್ಧ ನಡೆಯುವ ದೌರ್ಜನ್ಯಗಳು ನಾಚಿಕೆಗೇಡು,'' ಎಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.