CA ಇಂಟರ್‌ಮೀಡಿಯೇಟ್ 2023: ಆಳ್ವಾಸ್ ರಾಷ್ಟ್ರಮಟ್ಟದಲ್ಲಿ ಅಭೂತಪೂರ್ವ ಸಾಧನೆ
CA ಇಂಟರ್‌ಮೀಡಿಯೇಟ್ 2023: ಆಳ್ವಾಸ್ ರಾಷ್ಟ್ರಮಟ್ಟದಲ್ಲಿ ಅಭೂತಪೂರ್ವ ಸಾಧನೆ
ಚಾರ್ಟರ್ಡ್ ಅಕೌಂಟೆಂಟ್ಸ್ (CA) ಇಂಟರ್‌ಮೀಡಿಯೇಟ್ ಪರೀಕ್ಷೆ 2023ಯಲ್ಲಿ ಮೂಡಬಿದಿರೆಯ ಆಳ್ವಾಸ್ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದೆ. ಆಳ್ವಾಸ್‌ನ ಬಿ.ಕಾಂ. ವಿದ್ಯಾರ್ಥಿಗಳಾದ ದೀಪಕ್ ಹೆಗ್ಡೆ ಮತ್ತು ಪ್ರಜ್ವಲ್ ಎ. ಮೂಲ್ಯ ಅಖಿಲ ಭಾರತ ಮಟ್ಟದಲ್ಲಿ ಕ್ರಮವಾಗಿ 10 ಮತ್ತು 50ನೇ Rank ಗಳಿಸಿದ್ದಾರೆ.
ಇದು ಆಳ್ವಾಸ್ ಇತಿಹಾಸದಲ್ಲೇ ಅತ್ಯತ್ತಮ ಸಾಧನೆಯಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದ್ದಾರೆ.
ಇನ್ಸ್‌ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಆಯೋಜಿಸಿದ್ದ ಗ್ರೂಪ್ 1 ಮತ್ತು ಗ್ರೂಪ್ 2 ಎರಡೂ ವಿಭಾಗಗಳಲ್ಲಿ ಒಟ್ಟು 653 ಮತ್ತು 591 ಅಂಗಳನ್ನು ಗಳಿಸುವ ಮೂಲಕ ದೀಪಕ್ ಹೆಗ್ಡೆ ಮತ್ತು ಪ್ರಜ್ವಲ್ ಎ. ಮೂಲ್ಯ ಪ್ರಥಮ ಪ್ರಯತ್ನದಲ್ಲೇ ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಡಾ. ಮೋಹನ್ ಆಳ್ವ ಪ್ರಶಂಸೆ ವ್ಯಕ್ತಪಡಿಸಿದರು.
ಆಳ್ವಾಸ್ ಕಾಲೇಜು ಇನ್ಸ್‌ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ದಿಂದ ಮಾನ್ಯತೆ ಪಡೆದ ರಾಜ್ಯದ ಏಕೈಕ ವಿದ್ಯಾಸಂಸ್ಥೆ ಎಂಬುದನ್ನು ನೆನಪಿಸಿದ ಅವರು, ಅಂಧ ವಿದ್ಯಾರ್ಥಿ ಜಯೇಶ್ ಇಂಟರ್‌ಮೀಡಿಯೇಟ್ ಗ್ರೂಪ್ 1 ಮತ್ತು ಗ್ರೂಪ್ 2 ಎರಡೂ ವಿಭಾಗಗಳಲ್ಲಿ ಉತ್ತೀರ್ಣರಾಗಿದ್ದಾರೆ. ಅವರ ಫಲಿತಾಂಶವೂ ಅನನ್ಯ ಸಾಧನೆಯಾಗಿದೆ ಎಂದು ತಿಳಿಸಿದರು.
ಕಾಲೇಜಿನ ಬಿ.ಕಾಂ. ವಿದ್ಯಾರ್ಥಿಗಳಾದ ದೀಪಕ್ ಹೆಗ್ಡೆ(653), ಪ್ರಜ್ವಲ್ ಎ. ಮೂಲ್ಯ (591), ಎಂ ಅಭಿಷೇಕ್ ರಾವ್ (580), ದಶಮಿ ಎನ್ (549), ಜಿ. ಸಿ. ಶಿವಪ್ರಸಾದ್ (546), ಹರ್ಷಿತಾ ಪ್ರಭು (544), ಹೆಚ್ ಅತೀಶ್ ಅಕ್ರಮ್ (543), ರಾಹುಲ್ ಕಾಮತ್ (532), ನೇಹಾ ನಾಯಕ್ (524), ಐಶ್ವರ್ಯ ಎಂ.(523), ನಾಗರಾಜ್ ಮಂಜಿತ್ತಾಯ(496), ಮಂಜೂಷಾ (483), ಮೋಹಿತ್ (471), ಜಾಹ್ನವಿ (469), ಆರ್ನಿಯಾ ಸೈನಾ ಡಿಸೋಜಾ(467), ನಂದನಾ (463), ಭುವನಾ ಶೆಣೈ (461), ದೀಕ್ಷಾ (460)
ಎನ್ ನಿತ್ಯಾ(449), ಭೂಮಿಕಾ(466), ಅಂಕಿತಾ (455), ಗೌತಮೀ ಕೆ.ಹೆಚ್ (443), ಸಮೃದ್ಧಿ (443), ಅಮನ್ (438), ಜೋಯ್ಲಿನ್ (434), ಗಗನ (433), ಪ್ರೇರಣಾ (420), ಲೀಸಾ ರೇಗೊ (417), ಜಯೇಶ್ (414), ಪ್ರಿಮಲ್ (409), ಪವನ್ (404) ಮತ್ತು ಶ್ರೀಧರ್(404) ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ.
ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ, ಪ್ರಾಂಶುಪಾಲ ಡಾ. ಕುರಿಯನ್, ಪದವಿ ಪೂರ್ವ ವಾಣಿಜ್ಯ ವಿಭಾಗದ ಪ್ರಶಾಂತ್ ಎಂ.ಡಿ. ಹಾಗೂ ಸಿ.ಎ. ಸಂಯೋಜಕರಾದ ಅಪರ್ಣ ಕೆ., ಅನಂತ ಶಯನ, ಅಶೋಕ್ ಕೆ.ಜಿ. ಅಭಿನಂದಿಸಿದ್ದಾರೆ.