'ಕೋಟ್ಯಂತರ ಜನರನ್ನು ತಲಪುವ ಪತ್ರಕರ್ತನಿಗೆ ಗುರುತರ ಜವಾಬ್ದಾರಿ ಇದೆ'
'ಕೋಟ್ಯಂತರ ಜನರನ್ನು ತಲಪುವ ಪತ್ರಕರ್ತನಿಗೆ ಗುರುತರ ಜವಾಬ್ದಾರಿ ಇದೆ'
'4 ಗೋಡೆ ಮಧ್ಯೆ ಕೂತು ಬರೆದರೂ ಆ ಬರವಣಿಗೆ ನಾಲ್ಕು ಕೋಟಿ ಜನರನ್ನು ತಲುಪುತ್ತದೆ. ಈ ಎಚ್ಚರವು ಮಾಧ್ಯಮದಲ್ಲಿ ಇರುವವರಿಗೆ ಅತಿ ಮುಖ್ಯ’ ಎಂದು ಕಲರ್ಸ್ ಕನ್ನಡದ ಕಂಟೆಂಟ್ ಡೆವಲಪರ್ ರಂಜಿತ್ ನಿಡಗೋಡು ಅಭಿಪ್ರಾಯಪಟ್ಟರು.
ಮೂಡಬಿದಿರೆಯ ವಿದ್ಯಗಿರಿಯಲ್ಲಿ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಆಯೋಜಿಸಿದ ‘ಮನೋರಂಜನಾ ಮಾಧ್ಯಮ- ವ್ಯಾಪ್ತಿ ಮತ್ತು ಪ್ರವೃತ್ತಿ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ಪತ್ರಕರ್ತರು ಬದುಕು ಹಾಗೂ ವೃತ್ತಿಯನ್ನು ಪ್ರೀತಿಸಬೇಕು. ಪರಿಸ್ಥಿತಿ ಸೂಕ್ಷ್ಮವಾಗಿ ಗ್ರಹಿಸುತ್ತಿರಬೇಕು ಎಂದು ಹೇಳಿದ ಅವರು, ಪತ್ರಕರ್ತರ ನಿರಂತರವಾಗಿ ಓದುವ ಹವ್ಯಾಸವನ್ನು ಬೆಳೆಸಬೇಕು. ಅದು ನಿರಂತರವಾಗಿರಬೇಕು. ಪತ್ರಕರ್ತ ಪ್ರವೃತ್ತಿಯಲ್ಲಿ ಸೃಜನಶೀಲನಾಗಿರಬೇಕು. ವೃತ್ತಿಯನ್ನು ಸರಳ ಎಂದು ತಿಳಿದು, ಕಷ್ಟಪಟ್ಟು ಶ್ರಮಿಸಿದಾಗ ಯಶಸ್ಸು ಖಂಡಿತ ಎಂದು ಅವರು ಹೇಳಿದರು.
ಇತ್ತೀಚಿನ ದಶಕದಲ್ಲಿ ಪತ್ರಿಕೋದ್ಯಮ ವ್ಯಾಪಕವಾಗಿ ಬೆಳೆದಿದೆ. ಹಲವು ಮಜಲುಗಳನ್ನು ದಾಟಿ ಬೆಳೆದಿದೆ. ಪತ್ರಿಕೆ, ಟಿವಿ, ಸುದ್ದಿ, ಮನೋರಂಜನೆ, ನವಮಾಧ್ಯಮ ಹೀಗೆ ಸಾವಿರಾರು ಅವಕಾಶಗಳು ನಿರ್ಮಾಣವಾಗಿದೆ. ಇಲ್ಲಿ ಯಾವುದೇ ಮಜಲಿನಲ್ಲೂ ಯಶಸ್ಸು ಸಿಗಬೇಕಿದ್ದರೆ ನಿರಂತರ ಪರಿಶ್ರಮ ಮತ್ತು ತಾಳ್ಮೆ, ಸ್ಪಂದನೆ ಅತಿ ಮುಖ್ಯ ಎಂದು ಅವರು ಹೇಳಿದರು.
ಪತ್ರಿಕೋದ್ಯಮ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಹಾಗೂ ಉಪನ್ಯಾಸಕ ರವಿ ಶೆಣೈ, ಹಿರಿಯ ವಿದ್ಯಾರ್ಥಿ ವೆನಿಶಾ ರೋಡ್ರಿಗಸ್ ಇದ್ದರು.