-->
ಲೋನ್ App ನಲ್ಲಿ ಸಾಲ  ಪಡೆದರೆ ಮಾನ ಕಳೆಯುವುದು ಗ್ಯಾರಂಟಿ- ಮಂಗಳೂರಿನಲ್ಲಿ ವ್ಯಕ್ತಿಯ ಅಶ್ಲೀಲ ಪೊಟೋ ವೈರಲ್

ಲೋನ್ App ನಲ್ಲಿ ಸಾಲ ಪಡೆದರೆ ಮಾನ ಕಳೆಯುವುದು ಗ್ಯಾರಂಟಿ- ಮಂಗಳೂರಿನಲ್ಲಿ ವ್ಯಕ್ತಿಯ ಅಶ್ಲೀಲ ಪೊಟೋ ವೈರಲ್


ಮಂಗಳೂರು: ಲೋನ್ ಆ್ಯಪ್‌ನಲ್ಲಿ ಸಾಲ ಪಡೆದ  ವ್ಯಕ್ತಿಯ ಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಘಟನೆ ನಡೆದಿದ್ದು ಈ  ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ದೂರುದಾರರು ಲೋನ್ ಆ್ಯಪ್ ಹಾಕಿ 3500ರೂ. ಸಾಲಕ್ಕೆ ಅರ್ಜಿ ಹಾಕಿದ್ದರು.  ಅವರ ಬ್ಯಾಂಕ್ ಖಾತೆಗೆ 2800ರೂ ಸಾಲ ಜಮೆಯಾಗಿತ್ತು. ಈ ಸಾಲವನ್ನು ಜು.26ಕ್ಕೆ ಮುಂಚಿತವಾಗಿ ಮರುಪಾವತಿ ಮಾಡಬೇಕಾಗಿದುದ್ದರಿಂದ ಜು.19ರಂದು 1400ರೂ, ಬ್ಯಾಂಕ್ ಖಾತೆಯಿಂದ ಪಾವತಿ ಮಾಡಿದ್ದಾರೆ. ಉಳಿದ ಹಣವನ್ನು ಜು.26ರಂದು  ಆ್ಯಪ್ ಕಳುಹಿಸಿಕೊಟ್ಟ ವ್ಯಕ್ತಿಗೆ ಹಂತಹಂತವಾಗಿ 4,200ರೂ. ಪಾವತಿ ಮಾಡಿದ್ದಾರೆ.

ಇದಾದ ಬಳಿಕ ಅಪರಿಚಿತ ವ್ಯಕ್ತಿ ದೂರುದಾರರ ಕಾಂಟಾಕ್ಟ್ ಲೀಸ್ಟ್‌ನಲ್ಲಿರುವ ತಂದೆಯ, ಸಂಬಂಧಿಕರ ಹಾಗೂ
ಕಾಲೇಜಿನ ಅಧ್ಯಾಪಕರ ವಾಟ್ಸ್ ಆ್ಯಪ್ ನಂಬರ್‌ಗಳಿಗೆ ಲೋನ್ ಪಡೆದ ವ್ಯಕ್ತಿಯ ಭಾವಚಿತ್ರವನ್ನು ಮತ್ತು  ಸಂಪರ್ಕದಲ್ಲಿರುವ ಇತರರ ಭಾವಚಿತ್ರವನ್ನು ಅಶ್ಲೀಲ ಭಾವಚಿತ್ರದೊಂದಿಗೆ ಎಡಿಟ್  ಮಾಡಿ ಹಾಕಿ ಲೋನ್ ಪಾವತಿ ಮಾಡಿರುವುದಿಲ್ಲವೆಂದು ಅಶ್ಲೀಲ ಸಂದೇಶವನ್ನು ರವಾನೆ ಮಾಡಿದ್ದಾನೆ

ದೂರುದಾರರು ಲೋನ್ ತೆಗೆಯುವ ಬಗ್ಗೆ ಆಪ್‌ನ್ನು ಇನ್‌ಸ್ಟಾಲ್ ಮಾಡುವ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳು ಅವರ ಮೊಬೈಲ್‌ನಲ್ಲಿ ಶೇಖರಣೆಗೊಂಡಿದ್ದ  ಮೊಬೈಲ್ ನಂಬರ್ ಗಳನ್ನು ಅವರ ಅರಿವಿಲ್ಲದೇ ಶೇಖರಿಸಿಕೊಂಡಿದ್ದಾರೆ. ಅವರಿಗೆ ತೊಂದರೆ ನೀಡುವ ಉದ್ದೇಶದಿಂದ  ಭಾವಚಿತ್ರವನ್ನು ಹಾಗೂ ಸಂಪರ್ಕದಲ್ಲಿರುವ ಇತರರ ಭಾವಚಿತ್ರಗಳನ್ನು ಅಶ್ಲೀಲ ರೀತಿಯಲ್ಲಿ ಎಡಿಟ್ ಮಾಡಿ ವಾಟ್ಸ್ ಆ್ಯಪ್ ಮೂಲಕ ವೈರಲ್ ಮಾಡಿದ್ದಾರೆ. ಈ ಬಗ್ಗೆ ದೂರುದಾರರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article