-->
ಕೇರಳದಲ್ಲಿ ಅಜ್ಜ ಅಜ್ಜಿಯನ್ನು ಕೊಂದ-  ಮಂಗಳೂರಿಗೆ ಬಂದು ಸಿಕ್ಕಾಕಿಕೊಂಡ!

ಕೇರಳದಲ್ಲಿ ಅಜ್ಜ ಅಜ್ಜಿಯನ್ನು ಕೊಂದ- ಮಂಗಳೂರಿಗೆ ಬಂದು ಸಿಕ್ಕಾಕಿಕೊಂಡ!

 

ಮಂಗಳೂರು: ಕೇರಳದಲ್ಲಿರುವ ತನ್ನ ಅಜ್ಜ ಅಜ್ಜಿಯನ್ನು‌ ಕೊಲೆ ಮಾಡಿ ಅವರ ಚಿನ್ನಾಭರಣವನ್ನು ದೋಚಿ ಮಂಗಳೂರಿಗೆ ಮಾರಲು ಬಂದಿದ್ದ ಆರೋಪಿ ಮೊಮ್ಮಗನನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

ಕೇರಳದ ತ್ರಿಶೂರಿನ ವೈಲತ್ತೂರು  ಪನಾಂಗೈಟ್ ಹೌಸ್ ನಿವಾಸಿ ಅಹಮ್ಮದ್ ಆಕ್ಕಲ್ ( 27) ಬಂಧನಕ್ಕೊಳಗಾದವನು.


ಈತ ಜುಲೈ 23 ರಂದು ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ವಡೆಕಾಡ್ ಎಂಬಲ್ಲಿ ರಾತ್ರಿ ತನ್ನ ಅಜ್ಜ ಮತ್ತು ಅಜ್ಜಿಯನ್ನು ಕೊಲೆ ಮಾಡಿ ಅವರ ಚಿನ್ನಾಭರಣಗಳನ್ನು ದೋಚಿ ಬಂದಿದ್ದನು.

ಈತ ನಿನ್ನೆ ಮಂಗಳೂರು ಕಾರ್ ಸ್ಟ್ರೀಟ್ ಪರಿಸರದಲ್ಲಿ ಅನುಮಾನಸ್ಪದವಾಗಿ ತಿರುಗುತ್ತಿದ್ದನು. ಈತ  ಚಿನ್ನಾಭರಣಗಳನ್ನು ಮಾರಾಟ ಮಾಡಲು ಬಂದಿದ್ದಾನೆ  ಎಂಬ ಮಾಹಿತಿ ಮಂಗಳೂರು ಉತ್ತರ ಠಾಣೆ ಪೊಲೀಸರಿಗೆ ಬಂದಿದ್ದು ಅದರಂತೆ ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದ್ದಾರೆ.

ಮಂಗಳೂರು ಉತ್ತರ ಠಾಣಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆತನು ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ವಡೆಕಾಡ್ ಎಂಬಲ್ಲಿ  ತನ್ನ ಅಜ್ಜ ಮತ್ತು ಅಜ್ಜಿಯನ್ನು ಕೊಲೆ ಮಾಡಿ ಅವರ ಚಿನ್ನಾಭರಣಗಳನ್ನು ದೋಚಿ ಬಂದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಆತನ ಬಳಿಯಲ್ಲಿ ಒಂದು ಮುತ್ತಿನ ಎರಡು ಎಳೆಯ ಬಂಗಾರದ ಸರ, ಸಣ್ಣ ಪದಕವಿರುವ ಒಂದು ಜೈನ್,  ಮೂರು ಜೊತೆ ಕಿವಿಯೊಲೆ , ಐದು ಉಂಗುರ , ಎರಡು ಕೈಬಳೆ , ಪಾಸ್ ಪೋರ್ಟ್ ಹಾಗೂ ಇತರೆ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು ನಗರದ ಉಪ ಪೊಲೀಸ್‌ ಆಯುಕ್ತರವರಾದ  ಅಂಶುಕುಮಾರ್ ಐಪಿಎಸ್ ಮತ್ತು  ಬಿ ಪಿ ದಿನೇಶ್ ಕುಮಾರ್‌ರವರ ಮಾರ್ಗದರ್ಶನದಲ್ಲಿ ಮಹೇಶ್‌ ಕುಮಾರ್ ಸಹಾಯಕ ಪೊಲೀಸ್‌ ಉಪ ಆಯುಕ್ತರ ನಿರ್ದೇಶನದಂತೆ ರಾಘವೇಂದ್ರ ಎಂ ಬೈಂದೂರು, ಪಿಐ ರವರ ಮುಂದಾಳತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಎಎಸ್‌ಐ  ದಾಮೋದರ್ ಮತ್ತು ಸಿಬ್ಬಂದಿಯವರಾದ ಮದನ್ ಸಿ. ಎಂ. ಸತೀಶ್ ಮತ್ತು ಗುರು ಬಿ ಟಿ ಭಾಗವಹಿಸಿದ್ದರು.

Ads on article

Advertise in articles 1

advertising articles 2

Advertise under the article