ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ- ಪ್ರೊಫೆಸರ್ ಅರೆಸ್ಟ್
Saturday, July 29, 2023
ಮುಂಬಯಿ: ಕೆಲ ದಿನಗಳ ಹಿಂದೆ ದಿಲ್ಲಿ-ಮುಂಬಯಿ ಮಾರ್ಗದ ವಿಮಾನದಲ್ಲಿ ಮಹಿಳಾ ವೈದ್ಯರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಸಂಬಂಧ 47 ವರ್ಷದ ಪ್ರೊಫೆಸರ್ ನನ್ನು ಬಂಧಿಸಲಾಗಿದೆ.
ಬಂಧಿತ ಪ್ರೊಫೆಸರ್ ಅನ್ನು ರೋಹಿತ್ ಶ್ರೀವಾತ್ಸವ್ ಎಂದು ರುತಿಸಲಾಗಿದ್ದು, ಇವರು ಪಟನಾ ನಿವಾಸಿ. ಆರೋಪಿಯನ್ನು ಮುಂಬಯಿಯ ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಅವರಿಗೆ ಜಾಮೀನು ದೊರೆತಿದೆ.
ಜುಲೈ 26ರಂದು ಬೆಳಗ್ಗೆ 5.30ಕ್ಕೆ ದಿಲ್ಲಿಯಿಂದ ಮುಂಬಯಿಗೆ ಹೊರಟಿದ್ದ ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ ಮಹಿಳಾ ವೈದ್ಯೆಯ ಪಕ್ಕದಲ್ಲಿ ಕುಳಿತಿದ್ದ ಪ್ರೊಫೆಸರ್ ರೋಹಿತ್ ಶ್ರೀವಾತ್ಸವ್ ಅವರು ವೈದ್ಯೆ ಜತೆ ಅನುಚಿತವಾಗಿ ವರ್ತಿಸಿದ್ದರು. ಪ್ರಯಾಣದ ಒಂದು ಹಂತದಲ್ಲಿ ವೈದ್ಯೆ ತೀವ್ರತರದಲ್ಲಿ ಕಿರಿಕಿರಿ ಅನುಭವಿಸಿದ್ದರು. ಕ್ಯಾಬಿನ್ ಸಿಬ್ಬಂದಿಯ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿತ್ತು. ಸಂತ್ರಸ್ಥೆ ಸಹಾ ಠಾಣೆಯಲ್ಲಿ ದೂರು ದಾಖಲಿಸಿದ್ದರು.