ಮಾಜಿಪತ್ನಿಯ ಮನೆಗೆ ನುಗ್ಗಿದ ಮಲಯಾಳಂ ನಟ ವಿಜಯಕುಮಾರ್: ಮಲಪುತ್ರಿಯಿಂದ ಬೆದರಿಕೆ ಆರೋಪ
Thursday, July 6, 2023
ಕೊಚ್ಚಿ: ಮಲಯಾಳಂ ನಟ ವಿಜಯಕುಮಾರ್ ವಿರುದ್ಧ ಮಲಪುತ್ರಿಯೇ ಗಂಭೀರವಾದ ಆರೋಪ ಮಾಡಿದ್ದಾರೆ.
ವಿಜಯ್‌ಕುಮಾರ್ ಮಲಪುತ್ರಿ ನಟಿ ಅರ್ಥನಾ ಬಿನು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ತನ್ನ ಮಲತಂದೆ ಮನೆಗೆ ಅಕ್ರಮವಾಗಿ ಪ್ರವೇಶ ಮಾಡುವುದರೊಂದಿಗೆ ಆತ ಆಯ್ಕೆ ಮಾಡದ ಚಿತ್ರಗಳಲ್ಲಿ ನಟಿಸುವುದನ್ನು ಮುಂದುವರಿಸಿದರೆ ತನ್ನ ವೃತ್ತಿಜೀವನವನ್ನು ನಾಶಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾರೆ.
ಗೋಕುಲ್ ಸುರೇಶ್ ಅಭಿನಯದ 'ಮುದುಗೌವ್' ಚಿತ್ರದಲ್ಲಿ ಅರ್ಥನಾ ನಟಿಸುವ ಮೂಲಕ ಮಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ತನ್ನ ಮಲತಂದೆ ವಿಜಯಕುಮಾರ್ ಹಾಗೂ ತಾಯಿ ವಿಚ್ಛೇದನ ಕುರಿತು ನ್ಯಾಯಲಯ ಈಗಾಗಲೇ ಆದೇಶ ನೀಡಿದ್ದಾರೆ. ನಟಿ ಅರ್ಥನಾ ತಾಯಿ ಮತ್ತು ಅಜ್ಜಿಯೊಂದಗೆ ವಾಸವಾಗಿದ್ದಾರೆ. ವಿಚ್ಛೇದನದ ಸಂದರ್ಭ ನ್ಯಾಯಲಯ ಸುಮಾರು 10 ವರ್ಷಗಳ ಹಿಂದೆಯೇ ರಕ್ಷಣಾ ಆದೇಶ ಹೊರಡಿಸಿದೆ.
ಆತ ಹಲವು ವರ್ಷಗಳಿಂದ ಅತಿಕ್ರಮ ಪ್ರವೇಶ ಮಾಡುತ್ತಿದ್ದು, ಆತನ ವಿರುದ್ಧ ಹಲವು ಪೊಲೀಸ್ ಕೇಸ್‌ಗಳಿವೆ. ಆದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ನಟಿ ಹೇಳಿದ್ದಾರೆ. ಅಲ್ಲದೇ, ನಟ ವಿಜಯ್ ತನ್ನ ವಿರುದ್ಧ ಅಪಪ್ರಚಾರದ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ನಟಿ ಅರ್ಥನಾ ಆರೋಪಿಸಿದ್ದಾರೆ.