ಕಿರುತೆರೆ, ಸಿನಿಮಾ ನಟಿ ಮೇಲೆ ಮಾರಣಾಂತಿಕ ಹಲ್ಲೆ
Tuesday, July 4, 2023
ಸಾಗರ: ಕಿರುತೆರೆ ಹಾಗೂ ಸಿನಿಮಾ ನಟಿಯೋರ್ವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಸಾಗರ ತಾಲೂಕಿನ ಉಳ್ಳೂರು ಗ್ರಾಪಂ ವ್ಯಾಪ್ತಿಯ ಕಾಸ್ಟಾಡಿಯಲ್ಲಿ ನೆಡೆದಿದೆ.
ಗಾಯಾಳು ನಟಿಯನ್ನು ಅನು ಗೌಡ ಎಂದು ಗುರುತಿಸಲಾಗಿದೆ. ಜಮೀನು ವಿವಾದದಿಂದ ಅನುಗೌಡ ಮೇಲೆ ಹಲ್ಲೆ ನಡೆಸಲಾಗಿದ್ದು, ಸದ್ಯ ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತಿದ್ದಾರೆ ಎನ್ನಲಾಗಿದೆ.
ನಟಿಯಾಗಿದ್ದ ಆಗಿದ್ದ ಅನು ಗೌಡ ಹಲವು ಸಿನಿಮಾ ಮತ್ತು ಕಿರುತೆರೆಯಲ್ಲಿ ನಟಿಸಿದ್ದರು. ಕಾಸ್ಟಡಿಯಲ್ಲಿ ಜಮೀನು ನೋಡಿಕೊಳ್ಳುತ್ತಾ ಅನುಗೌಡ ಹೆತ್ತವರು ವಾಸವಾಗಿದ್ದರು. ಬೆಂಗಳೂರಿನಿಂದ ಆಗಾಗ ಬರುತ್ತಿದ್ದ ಅನು ಗೌಡ ಅವರಿಗೆ ಸ್ಥಳೀಯ ನಿವಾಸಿಗಳಾದ ನೀಲಮ್ಮ ಮತ್ತು ಮೋಹನ್ ಜಮೀನು ವಿಚಾರದಲ್ಲಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿದೆ. ಈ ಬಗ್ಗೆ ಸಾಗರದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.